ತೆನೆ ಬಿಟ್ಟು ಕೈ ಹಿಡಿಯಲು ಮುಂದಾದರಾ ಅಟ್ಟಿಕಾ ಬಾಬು

ತುಮಕೂರು : ಇತ್ತೀಚೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಅಟ್ಟಿಕಾ ಬಾಬು ಎಂಟ್ರಿ – ರೀ ಎಂಟ್ರಿ ಹಾಗೂ ಜನರಲ್ಲಿನ ಹಲವಾರು ಗೊಂದಲಗಳಿಗೆ ಇನ್ನೊಂದು ವಾರದೊಳಗೆ ತೆರೆ ಬೀಳುವ ಮುನ್ಸೂಚನೆಗಳು ಕಾಣ ಸಿಗುತ್ತಿವೆ.

 

 

 

 

ತುಮಕೂರು ನಗರಕ್ಕೆ ಜೆಡಿಎಸ್‌ ಟಿಕೇಟ್‌ ಪಡೆದು ತಾನು ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸವನ್ನು ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ಖಾಸಗಿ ಹೋಟೆಲ್‌ ಒಂದರಲ್ಲಿ ಮಾದ್ಯಮಗೋಷ್ಠಿಯನ್ನು ನಡೆಸಿ ಸ್ವತಃ ಅಟ್ಟಿಕಾ ಬಾಬುರವರೇ ಬಹಿರಂಗವಾಗಿ ಹೇಳಿಕೆಯನ್ನು ಕೊಟ್ಟಿದ್ದರು.

 

 

 

 

ಅದರ ಬೆನ್ನಲ್ಲೇ ಜೆಡಿಎಸ್‌ ಪಕ್ಷದ ವರಿಷ್ಠರು ತುಮಕೂರು ನಗರ ಟಿಕೇಟ್‌ ನ್ನು ಎರಡು ಭಾರಿ ಕಡಿಮೆ ಅಂತರದಲ್ಲಿ ಪರಾಜಯ ಹೊಂದಿದ್ದ ಎನ್.ಗೋವಿಂದರಾಜು ಅವರೇ ತಮ್ಮ ಪಕ್ಷದ ಅಭ್ಯರ್ಥಿ ಎಂದು ಸಹ ಘೋಷಣೆ ಮಾಡಿದ್ದರು, ಜೊತೆಗೆ ಅಟ್ಟಿಕಾ ಬಾಬು ಸಹ ಕೆಲವು ಭಾರಿ ತುಮಕೂರು ನಗರಕ್ಕೆ ಭೇಟಿ ನೀಡಿ ಅವರು ಘೋಷಣೆ ಮಾಡಿರಬಹುದು ಅಷ್ಟೇ, ಆದರೆ ನಾನೇ ಜೆಡಿಎಸ್‌ ಅಭ್ಯರ್ಥಿ ಕಾದು ನೋಡಿ ಎಂದು ಹೇಳಿಕೊಂಡು ಓಡಾಡಿದರು ಅದೂ ಅಲ್ಲದೇ, ತುಮಕೂರು ನಗರದಲ್ಲಿ ಜೆಡಿಎಸ್‌ ಕಾರ್ಯಕರ್ತರುಗಳನ್ನು ಬಳಸಿಕೊಂಡು ಹಲವಾರು ಸಭೆಗಳನ್ನು ನಡೆಸಿದ್ದರು.

 

 

 

 

ಜೆಡಿಎಸ್‌ ಕಾರ್ಯಕರ್ತರೊಂದಿಗೆ ಹಲವಾರು ಜೆಡಿಎಸ್‌ ನ ಪ್ರಭಾವಿ ಮುಖಂಡರುಗಳನ್ನೂ ಸಹ ಭೇಟಿ ಮಾಡಿ ತನಗೆ ಸಹಕರಿಸುವಂತೆ ಕೋರಿರುವ ಉದಾಹರಣೆಗಳು ಊಂಟು, ಅದೂ ಸಾಲದೆಂಬಂತೆ ಗೋವಿಂದರಾಜು ಅವರು ತನ್ನಿಂದ ಹಣ ಪಡೆದಿರುವುದಾಗಿಯೂ (ಟಿಕೇಟ್‌ ಬಿಟ್ಟುಕೊಡಲು) ಎಂದು ಕೆಲವು ಕಡೆ ಹೇಳಿದ್ದೂ ಉಂಟು, ಅದಕ್ಕೆ ಪ್ರತಿಯಾಗಿ ಗೋವಿಂದರಾಜು ಅವರ ಬೆಂಬಲಿಗರು ಅಟ್ಟಿಕಾ ಬಾಬು ಅವರು ತುಮಕೂರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಟೌನ್‌ ಹಾಲ್‌ ವೃತ್ತದ ಬಳಿ ಗೇರಾವ್‌ ಹಾಕಿ ಗೋವಿಂದರಾಜು ಹಣ ಪಡೆದಿದ್ದರೇ ಸಾಕ್ಷಿ ತೋರಿಸಿ ಎಂದು ಸಹ ದೊಡ್ಡ ಗಲಾಟೆಯನ್ನೂ ಮಾಡಿದ್ದರು,.

 

 

 

 

 

ಈ ಎಲ್ಲಾ ಪ್ರಸಂಗಗಳು ನಡೆದ ನಂತರ ಗೋವಿಂದರಾಜು ಹಲವಾರು ಮುಖಂಡರಿಗೆ, ತಮ್ಮ ಕೆಲವು ಕಾರ್ಯಕರ್ತರಿಗೆ ಅಟ್ಟಿಕಾ ಅವರು ಕಾಂಗ್ರೆಸ್‌ ನಿಂದ ಟಿಕೇಟ್‌ ಪಡೆಯುತ್ತಿದ್ದಾರೆ ಅಷ್ಟೇ, ಸುಮ್ಮನೆ ನನ್ನ ಮತಗಳನ್ನು ಕೀಳಲು ಅವರು ನನ್ನ ಹೆಸರು ಡ್ಯಾಮೇಜ್‌ ಮಾಡುತ್ತಿದ್ದಾರೆಂದು ಕೆಲವರ ಬಳಿ ಹೇಳಿಕೊಂಡಿದ್ದರು, ಅದೂ ಅಲ್ಲದೇ ನನಗೆ ಪಕ್ಷದ ವರಿಷ್ಠರು ಆಶ್ವಾಸನೆ ಕೊಟ್ಟಿದ್ದಾರೆ ಅದರಂತೆ ಟಿಕೇಟ್‌ ಸಹ ಘೋಷಣೆಯಾಗಿದೆ, ಆದುದರಿಂದ ನಾನೇ ಜೆಡಿಎಸ್‌ ಅಭ್ಯರ್ಥಿ ಎಂದು ದೃಢ ನಂಬಿಕೆಯಿಂದ ಹೇಳಿದ್ದು, ಇದೀಗ ಸತ್ಯವಾಗುವ ಸನ್ನಿಹ ಬಂದಿದೆ.

 

 

 

 

ಇನ್ನುಳಿದಂತೆ ಕಾಂಗ್ರೆಸ್‌ ಪಕ್ಷದಿಂದ ತಾನು ಸ್ಪರ್ಧಿಸಲು ಇಚ್ಛಿಸಿ ಅಪ್ಲಿಕೇಷನ್‌ ಜೊತೆಗೆ ರೂ. 2,00,000/-ಗಳ ಭದ್ರತಾ ಠೇವಣಿಯನ್ನೂ ಸಹ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು @ ವೈ.ಎಸ್.ಅಯೂಬ್‌ ಅವರು ಸಲ್ಲಿಸಿದ್ದು, ಇದೀಗ ಬಹಿರಂಗ ಗೊಂಡಿದೆ, ಅಲ್ಲದೇ ಕಾಂಗ್ರೆಸ್‌ ಪಾಳಯದಲ್ಲೂ ಸಹ ಜಿಲ್ಲೆಯ ಪ್ರಭಾವಿ ಮುಖಂಡರೊಬ್ಬರು ಅಟ್ಟಿಕಾ ಅವರು ತುಮಕೂರು ನಗರದಿಂದ ನಮ್ಮ ಪಕ್ಷದ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ, ಒಬ್ಬ ಪ್ರಭಾವಿ ವ್ಯಕ್ತಿಗೆ ನಾವು ಟಿಕೇಟ್‌ ನೀಡಲಾಗುವುದು, ಅವರು ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಅವರು ಸದಸ್ಯತ್ವವನ್ನೂ ಸಹ ಪಡೆದಿದ್ದು, ಜೊತೆಗೆ ಅವರು ತುಮಕೂರು ನಗರದ ಆಕಾಂಕ್ಷಿಯಾಗಲು ಬಯಸಿ ಅಫಿಡವೀಟ್‌ ಸಹ ಸಲ್ಲಿಸಿದ್ದಾರೆಂದು ಹೇಳಿದ್ದಾರೆ.

 

 

 

 

ಇನ್ನು ಚುನಾವಣಾ ಸಮಯ ಹತ್ತಿರವಾಗುತ್ತಿರುವ ಸನ್ನಿಹದಲ್ಲಿ ಕಾಂಗ್ರೆಸ್‌ ನ ಪ್ರಭಾವಿ ಮುಖಂಡರ ಮಾತು, ಗೋವಿಂದರಾಜು ಅವರು ಕೆಲವರೊಂದಿಗೆ ಹಂಚಿಕೊಂಡಿದ್ದ ಮಾತುಗಳು ತಾಳೆಯಾಗುತ್ತಿದ್ದು, ಇನ್ನೊಂದು ವಾರದೊಳಗೆ ಅಟ್ಟಿಕಾ ಬಾಬು ಅವರು ತೆನೆ ಬಿಟ್ಟು ಕೈ ಹಿಡಿಯಲಿದ್ದಾರೆಂಬ ಸಂದೇಶ ರವಾನೆಯಾಗುತ್ತಿದೆ.

 

 

 

 

 

ಇನ್ನುಳಿದಂತೆ ಇಷ್ಟು ದಿನ ಜೆಡಿಎಸ್‌ ನ ಹಲವಾರು ಕಾರ್ಯಕರ್ತರು ಅಟ್ಟಿಕಾ ಬಾಬು ಅವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡುತ್ತಾ ಬರುತ್ತಿದ್ದಾರೆ, ಅವರುಗಳ ನಿಲುವು ಏನಾಗಬಹುದೋ ಗೊತ್ತಿಲ್ಲ? ಅವರೆಲ್ಲಾ ಅಟ್ಟಿಕಾ ಬಾಬು ಹಿಂದೆ ಹೋಗುತ್ತಾರೋ? ಅಥವಾ ನಿಷ್ಠಾವಂತ ಕಾರ್ಯಕರ್ತರುಗಳಾಗಿ ಜೆಡಿಎಸ್‌ ನಲ್ಲಿಯೇ ಉಳಿದುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ.

 

 

 

 

 

ಏಕೆಂದರೆ  ಅಟ್ಟಿಕಾ ಬಾಬು ಅವರ ಬೆಂಬಲಕ್ಕೆ ಇಷ್ಟು ದಿನ ಇದ್ದಿದ್ದು ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ ನ್ನು ಕಟ್ಟಿ ಬೆಳಸಿ, ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿರುವ ವ್ಯಕ್ತಿಗಳು ಇಷ್ಟು ದಿನ ಗುರತಿಸಿಕೊಂಡಿದ್ದರು, ಅವರುಗಳ ನಿಲುವು ಏನಾಗುತ್ತದೋ ಕಾದು ನೋಡಬೇಕು……

 

 

 

 

ಯಾವುದು ಏನೇ ಇರಲಿ ಅಟ್ಟಿಕಾ ಬಾಬು ಅವರು ತುಮಕೂರಿನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

Leave a Reply

Your email address will not be published. Required fields are marked *

error: Content is protected !!