ತುಮಕೂರು ನಗರದಲ್ಲಿ ರಾಜಕೀಯ ಸಂಚಲನ ಮೂಡಿಸಿರುವ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು @ ವೈ.ಎಸ್.ಆಯೂಬ್ ರವರು ಕಳೆದ 5-6 ತಿಂಗಳುಗಳಿಂದ ತಾನು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕನಾಗೇ ತೀರುತ್ತೇನೆಂದು ಹೋದಲ್ಲಿ ಬಂದಲ್ಲಿ ಹೇಳಿಕೊಂಡು ಬರುತ್ತಿದ್ದರು.
ಅದಕ್ಕೆ ಪುಷ್ಠಿ ನೀಡುವಂತೆ ಕಳೆದ ನವೆಂಬರ್ ಮಾಹೆಯಲ್ಲಿ ತುಮಕೂರು ನಗರದ ತಮ್ಮ ಅಟ್ಟಿಕಾ ಗೋಲ್ಡ್ ಕಂಪನಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ತಾನು ಶೀಘ್ರದಲ್ಲಿಯೇ ಕುಮಾರಣ್ಣ ಮತ್ತು ಶಂಕರಣ್ಣನ ಸಹಾಯದೊಂದಿಗೆ ಜೆಡಿಎಸ್ ಪಕ್ಷದಿಂದ ತುಮಕೂರು ನಗರ ಶಾಸಕ ಅಭ್ಯರ್ಥಿಯಾಗಿ ಬರುತ್ತಿದ್ದೇನೆಂದು ಬಹಿರಂಗ ಹೇಳಿಕೆಯನ್ನು ಕೊಟ್ಟರು.
ಅದರ ಬೆನ್ನಲ್ಲೇ ಡಿ.ಸಿ.ಗೌರಿಶಂಕರ್ ರವರ ಬಳ್ಳಗೆರೆ ನಿವಾಸದ ಬಳಿ ಹಠಾತ್ ಪ್ರತ್ಯಕ್ಷನಾಗಿ ಕೆಲ ಪತ್ರಕರ್ತರೊಂದಿಗೆ ಮಾತನಾಡಿ ತಾನು ಶೀಘ್ರದಲ್ಲಿಯೇ ತುಮಕೂರು ನಗರದ ರಾಜಕೀಯದಲ್ಲಿ ಸಕ್ರೀಯನಾಗಿರುತ್ತೇನೆ, ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಹೇಳಿದರು, ಅದರ ಬೆನ್ನಲ್ಲೇ ರಾಜ್ಯ ಜೆಡಿಎಸ್ ಪಕ್ಷದ ಕಛೇರಿಯಿಂದ ಎನ್.ಗೋವಿಂದರಾಜು ಅಭ್ಯರ್ಥಿ ಎಂದು ಘೋಷಣೆ ಮಾಡಿದರು, ತದ ನಂತರ ಪಂಚರತ್ನ ಯಾತ್ರೆಯೂ ಸಹ ತುಮಕೂರು ನಗರದಲ್ಲಿ ಬಂದಾಗಲೂ ಇದೇ ಅಟ್ಟಿಕಾ ಬಾಬು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೂ ಕೆಲ ದಿನಗಳ ನಂತರ ತುಮಕೂರು ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಮಾದ್ಯಮ ಗೋಷ್ಠಿಯನ್ನು ನಡೆಸಿ ಪಂಚರತ್ನ ರಥಯಾತ್ರೆಗೆ ತಾನೇ ಬಂಡವಾಳವನ್ನು ಹಾಕಿರುವುದಾಗಿಯೂ ಮಾದ್ಯಮದವರ ಮುಂದೆ ಹೇಳುತ್ತಾ ಗೋವಿಂದರಾಜು ಅವರನ್ನು ತೇಜೋವಧೆ ಮಾಡಲು ಹೊರಟಿದ್ದರು.
ಜೊತೆಗೆ ಗೋವಿಂದರಾಜು ನನ್ನ ಹತ್ತಿರ ಹಣವನ್ನು ಪಡೆದಿದ್ದಾರೆ, ಅವರು ಕಣದಿಂದ ದೂರ ಸರಿಯಲಿದ್ದು, ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು, ಇದನ್ನು ಅರಿತ ಗೋವಿಂದರಾಜು ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಅಟ್ಟಿಕಾ ಬಾಬು ಅವರನ್ನು ನಡು ರಸ್ತೆಯಲ್ಲಿಯೇ ಗೇರಾವ್ ಹಾಕಿ ನಿನ್ನಲ್ಲಿ ಗೋವಿಂದರಾಜು ಹಣ ಪಡೆದಿದ್ದರೇ ಸಾಕ್ಷಿ ತೋರಿಸು, ಇಲ್ಲವಾದರೇ ಸುಮ್ಮನೇ ಸುಳ್ಳು ಹೇಳಿಕೊಂಡು ಓಡಾಡಬೇಡಿ ಎಂದು ಹೇಳಿದರು, ಅದರಿಂದ ಬೆಚ್ಚಿಬಿದ್ದ ಅಟ್ಟಿಕಾ ಬಾಬು ಕೆಲ ದಿನಗಳ ಕಾಲ ತುಮಕೂರಿನಿಂದ ಮರೆಯಾಗಿ 15 ದಿನಗಳ ನಂತರ ಮರಳಿ ತುಮಕೂರಿಗೆ ಬಂದು ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮೊಂದಿಗೆ ಸೆಳೆಯಲು ಶತ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚೆಗೆ ಉಪ್ಪಾರಹಳ್ಳಿಯ ಬಳಿ ಭವ್ಯ ಎರಡು ಬಂಗಲೆಗಳನ್ನು ಖರೀದಿ ಮಾಡಿ ಅಲ್ಲಿಗೆ ತಮ್ಮೊಂದಿಗೆ ಬಹುತೇಕ ನೂರಾರು ಜೆಡಿಎಸ್ ಕಾರ್ಯಕರ್ತರನ್ನು ತನ್ನೊಂದಿಗೆ ಇರುವಂತೆ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ, ಜೊತೆಗೆ ಅವರುಗಳ ಸಂಪರ್ಕದಿಂದ ಹಲವಾರು ಸಂಘಟನೆಯ ಮುಖಂಡರುಗಳನ್ನು ತಮ್ಮ ಬಂಗಲೆಯ ಬಳಿ ಕರೆಯಿಸಿಕೊಂಡು ತಾವುಗಳು ನಮ್ಮೊಂದಿಗೆ ಸದಾ ಇರೀ, ನಿಮಗೆ ಏನು ಬೇಕಾದರೂ ಕೇಳಿ ನಾನು ಸಹಾಯ ಮಾಡುವೆ ಎಂದು ಬರೀ ಮಾತಿನಲ್ಲೇ ಹೇಳಿ ಕಳುಹಿಸುತ್ತಿರುವ ಅಟ್ಟಿಕಾ ಬಾಬು, ತನ್ನ ಬೆರಗಿನ ಮಾತಿನಲ್ಲಿ ಜನರನ್ನು ಮೋಡಿ ಮಾಡುವಂತೆ ಮಾಡುತ್ತಿದ್ದಾರೆ.
ಇಷ್ಟೇಲ್ಲಾ ಸಾಲದು ಎಂಬಂತೆ ಸದ್ಯಕ್ಕೆ ಜೆಡಿಎಸ್‌ನಲ್ಲಿ ಅಟ್ಟಿಕಾ ಬಾಬು ಅವರಿಗೆ ಟಿಕೇಟ್ ಸಿಗುವುದಿಲ್ಲವೆಂಬುದು ಖಚಿತವಾದ ನಂತರ ಕಾಂಗ್ರೆಸ್ ಬಾಗಿಲು ತಟ್ಟಲು ಮುಂದಾಗಿದ್ದಾರೆ. ಅದೂ ಅಲ್ಲದೇ ಹಲವಾರು ಕಾಂಗ್ರೆಸ್ ಮುಖಂಡರನ್ನು ತಮ್ಮ ಮನೆಯ ಹತ್ತಿರಕ್ಕೆ ಬರುವಂತೆ ತಮ್ಮ ಬೆಂಬಲಿಗರ ಸಹಾಯದೊಂದಿಗೆ ಮಾಡಿದ್ದಾರೆ. ಅದರೊಂದಿಗೆ ಇತ್ತೀಚೆಗೆ ಕಾಂಗ್ರೆಸ್ ನ ಪ್ರಜಾಧ್ವನಿ ಕಾರ್ಯಕ್ರಮ ತುಮಕೂರು ನಗರದಲ್ಲಿ ನಡೆಯುವ ಸಂದರ್ಭದಲ್ಲಿಯೂ ಸಹ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ಈ ಕುರಿತು ಬಹಳಷ್ಟು ಚರ್ಚೆಗಳು ನಡೆದಿವೆ. ಅದೂ ಅಲ್ಲದೇ ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರ ಬೆಂಬಲದೊಂದಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಸೆಳೆಯಲು ಮುಂದಾಗಿದ್ದಾರೆ.
ಜೊತೆಗೆ ಅಟ್ಟಿಕಾ ಬಾಬು ತಾವು ಖರೀದಿಸಿರುವ ಭವ್ಯ ಬಂಗಲೆಗಳ ಬಳಿ ಕಾಂಗ್ರೆಸ್ ಮುಖಂಡರು, ಪ್ರಮುಖ ಸಂಘ-ಸಂಸ್ಥೆಗಳ ಮುಖ್ಯಸ್ಥರುಗಳನ್ನು, ಕೆಲವು ಏರಿಯಾಗಳ ಪ್ರಮುಖ ಮುಖಂಡರುಗಳನ್ನು ಕರೆಯಿಸಿಕೊಂಡು ಬಣ್ಣದ ಮಾತುಗಳನ್ನು ಆಡಿ, ತಮ್ಮೊಂದಿಗೆ ಇರಿ ನಾನು ಎಂ.ಎಲ್.ಎ ಆಗುತ್ತೇನೆ ಅದಕ್ಕೆ ತಾವು ಸಹಕಾರ ಮಾಡಿ ಎಂದು ಹೇಳುತ್ತಿದ್ದಾರೆ.
ಇದೂ ಅಲ್ಲದೇ ಹಲವಾರು ಜನ ಮುಖಂಡರುಗಳು ತಾವು ಕೆಲವೊಂದು ಕಾರ್ಯಕ್ರಮಗಳನ್ನು ತಮ್ಮ ಪ್ರಾಯೋಜಕತ್ವದಲ್ಲಿ ನಡೆಸಲು ಮುಂದಾಗಿದ್ದೇವೆ, ದಯಮಾಡಿ ಮಾಡಿಕೊಡಿ ಎಂದು ಬರುತ್ತಿದ್ದಾರೆ, ಅವರಿಗ್ಯಾರಿಗೂ ಇಲ್ಲ ಎಂದು ಹೇಳದೇ ತಮ್ಮ ಬಣ್ಣದ ಮಾತುಗಳಾದ ನಾನು ಇಲ್ಲೇ ಮನೆ ಮಾಡಿದ್ದೇನೆ, ಇವತ್ತು ಬ್ಯುಸಿ, ನಾಳೆ ಬನ್ನಿ, ನಾಡಿದ್ದು ಬನ್ನಿ ಮಾತಾಡೋಣ, ಮಾಡಿಕೊಡೋಣ ಎಂದು ಹೇಳಿ ಕಳುಹಿಸುತ್ತಿದ್ದಾರೆ.
ಅಟ್ಟಿಕಾ ಬಾಬು ಅವರು ನಿಜವಾದ ಹಾಗೂ ಪ್ರಮಾಣಿಕ ರಾಜಕೀಯ ವ್ಯಕ್ತಿಯಾದರೆ, ಇಲ್ಲಿನ ಜನರ ಸಮಸ್ಯೆಗಳನ್ನು ಅರಿತು, ಜನರಿಗೆ ಬೇಕಾದದ್ದನ್ನು ಮಾಡಿ, ಇಲ್ಲಿನ ನ್ಯೂನ್ಯತೆಗಳನ್ನು ಅರಿತು ರಸ್ತೆ ಕಾಮಗಾರಿ, ಚರಂಡಿ, ಬಡವರಿಗೆ ಆಶ್ರಯ ಮಾಡಿಕೊಡುವುದು, ಉಚಿತ ಚಿಕಿತ್ಸೆ ನೀಡುವುದನ್ನು ತಮ್ಮಲ್ಲಿರುವ ಸಾವಿರಾರು ಕೋಟಿಯಲ್ಲಿ ಒಂದಷ್ಟು ಕೋಟಿಯನ್ನು ಇಂತಹ ಜನಪರ ಕೆಲಸಗಳನ್ನು ಮಾಡುವುದರೊಂದಿಗೆ ನಾಯಕನಾಗೇ ಬೇಕೇ ಹೊರತು, ಯಾವುದೋ ಒಂದೆರಡು ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡುವುದರಿಂದ ನಾಯಕನಾಗುವುದಿಲ್ಲವೆಂಬುದನ್ನು ಅರಿತುಕೊಳ್ಳಬೇಕು ಅಷ್ಟೇ.
ಜನರಿಗೆ ಬೇಕಾಗಿರುವುದು ಅಭಿವೃದ್ಧಿ ಅಷ್ಟೇ, ತನ್ನ ಬಳಿ ಸಾವಿರಾರು ಕೋಟಿ ಇದೆ ನಾನು ದುಡ್ಡು ಮಾಡಲು ಬಂದಿಲ್ಲ, ನನ್ನಲ್ಲಿರುವ ಹಣವನ್ನು ಇತರರಿಗೆ ಹಂಚಲು ಬಂದಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಹಣವನ್ನು ಜನರಿಗೆ ಹಂಚುವ ಬದಲು ಜನರಿಗೆ ಬೇಕಾಗಿರುವ ಅಭಿವೃದ್ಧಿ ಅಥವಾ ಜನಪರ ಕೆಲಸಗಳನ್ನು ಮಾಡುವುದರೊಂದಿಗೆ ಜನ ನಾಯಕ ನಾಗಬೇಕು ಇದನ್ನು ಅರಿಯದೇ ಇಲ್ಲಿನ ಸ್ಥಳೀಯ ಜನರನ್ನು ರಾಜಕೀಯದಲ್ಲಿ ಒಡೆದು ಆಳುವುದನ್ನು ಬಿಡಬೇಕು ಎನ್ನುವುದು ಪ್ರಜ್ಞಾವಂತರ ಮಾತಾಗಿದೆ.
ಏಕೆಂದರೆ ಮೊದಲು ಜೆಡಿಎಸ್, ಇದೀಗ ಕಾಂಗ್ರೆಸ್ ಅತ್ತ ಮುಖ ಮುಂದೆ ಕಾಂಗ್ರೆಸ್ ಟಿಕೇಟ್ ಸಹ ಗೋತಾ ಆದರೆ ಸ್ವತಂತ್ರ್ಯ ಅಭ್ಯರ್ಥಿ ತನ್ನು ನಿಲುವನ್ನೇ ಸರಿಯಾಗಿ ಕಾಣದ ವ್ಯಕ್ತಿ ಜನರಿಗಾಗಿ ಏನು ತಾನೇ ಮಾಡುತ್ತಾನೆ.
ದೇವರು ಎಲ್ಲರಿಗೂ ಅಷ್ಠೈಶ್ವರ್ಯ ಕರುಣಿಸುವುದಿಲ್ಲ ; ಕೆಲವರಿಗೆ ಕರುಣಿಸಿರುತ್ತಾನೆ, ಅದನ್ನು ನಾಲ್ಕಾರು ಜನರಿಗೆ ತನ್ನಿಂದ ಸಹಾಯ ಮಾಡಿದರೆ ಮುಂದೊಂದು ದಿನ ದೇವರು ಅವರಿಗೆ ಸದ್ಗತಿ ಕರುಣಿಸಬಹುದೇನೋ