ಇತಿಹಾಸಕ್ಕೆ ಸಾಕ್ಷಿಯಾದ ಶಾಸಕ ಡಿಸಿ ಗೌರಿಶಂಕರ್ ರವರ ಅಭಿವೃದ್ಧಿ ಕಾರ್ಯ….
ತುಮಕೂರು ಗ್ರಾಮಾಂತರ ಸುಮಾರು 30 ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದಂತಹ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕರುಗಳ ಮೆಚ್ಚುಗೆಗೆ ಪಾತ್ರರಾದ ಅಭಿವೃದ್ಧಿಯ ಹರಿಕಾರ ಶಾಸಕರಾದ ಡಿಸಿ ಗೌರಿಶಂಕರ್ ಅವರು.
ದೊಡ್ಡ ನಾರವಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಲಕ್ಷಾಂತರ ಸಾರ್ವಜನಿಕರುಗಳ ಬೇಡಿಕೆಯಾಗಿದ್ದ ಕಾಗ್ಗೆರೆ ಗ್ರಾಮದ ಎಸ್ ಸಿ ಕಾಲೋನಿಯಿಂದ ಮಣ್ಣಮ್ಮನ ದೇವಸ್ಥಾನದವರೆಗೆ ಸಿಸಿ ರಸ್ತೆ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಮತ್ತು ಹಾಲನೂರು ಮುಖ್ಯರಸ್ತೆಯಿಂದ ವಡ್ಡರಹಟ್ಟಿ (ಚನ್ನಸಾಗರ ಪಾಳ್ಯ) ರಸ್ತೆ ಅಭಿವೃದ್ಧಿ, ಚನ್ನಸಾಗರ ಪಾಳ್ಯದಿಂದ ಗದ್ದೆ ಬೈಲಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು, ಬಡವರ ಬಂಧು, ದೀನದಲಿತರ ಆಶಾಕಿರಣ, ಅಭಿವೃದ್ಧಿಯ ಹರಿಕಾರ ಸನ್ಮಾನ್ಯ ಶ್ರೀ ಡಿಸಿ ಗೌರಿಶಂಕರ್ ರವರು ಭೂಮಿ ಪೂಜೆ ನೆರವೇರಿಸಿ, ಬಹು ವರ್ಷಗಳ ಕನಸನ್ನು ನನಸು ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಹೆಗ್ಗೆರೆ ಜಿಲ್ಲಾ ಪಂಚಾಯಿತಿ ಜೆಡಿಎಸ್ ಉಸ್ತುವಾರಿಗಳಾದ ಹಾಲನೂರು ಅನಂತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರುಗಳು, ಕಾರ್ಯಕರ್ತ ಬಂಧುಗಳು, ಹಾಗೂ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.