ತುಮಕೂರು : ತುಮಕೂರಿನ ಚಿಕ್ಕಪೇಟೆಯಲ್ಲಿರುವ ಹಿರೇಮಠ ಬಹು ವರ್ಷಗಳ ಕನಸ್ಸಿನ ಕೂಸು “ತಪೋವನ”. ಈ ತಪೋವನದ ವೈಶಿಷ್ಠ ಮತ್ತು ಘೋಷವಾಕ್ಯ “ಕಲಿಯೋದಕ್ಕೆ ಸಿದ್ಧ ; ಕಲಿಸೋದಕ್ಕೆ ಬದ್ಧ” ಎಂಬ ವಾಕ್ಯದೊಂದಿಗೆ ಈ ತಪೋವನವು ಉದ್ಘಾಟನೆಯಾಗಲಿದೆ.
ಇದೇ ತಿಂಗಳ ಡಿಸೆಂಬರ್ 12 ರಂದು ತುಮಕೂರಿನಿಂದ 16 ಕಿ.ಮೀ. ದೂರವಿರುವ ಹಳೇ ನಿಜಗಲ್ ಶ್ರೀ ಉದ್ಧಾನ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ ನಿರ್ಮಾಣವಾಗಿದ್ದು ಇಲ್ಲಿನ ವೈಶಿಷ್ಠ್ಯತೆ ಏನೆಂದರೆ ಸ್ವಾಧ್ಯಾಯ, ಪ್ರವಚನಗಳಿಗಾಗಿ ಈ ತಪೋವನವಿದೆ.
ತಪೋವನದಲ್ಲಿ ಶಾಂತಿ, ಸಮಾಧಾನ, ನೆಮ್ಮದಿಗಾಗಿ, ಪೂಜೆ, ಜಪ, ತಪ, ಅನುಷ್ಠಾನ, ಅನುಸಂಧಾನಕ್ಕಾಗಿ, ಸಂಸ್ಕೃತ ಮತ್ತು ಸಂಸ್ಕೃತಿಯನ್ನು ಕಲಿಸುವುದು, ಕನ್ನಡ ಸಾರಸ್ವತ್ವದ ಎರಡು ಕಣ್ಣುಗಳಿಂತಿರುವ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಅಧ್ಯಯನವನ್ನು ಈ ತಪೋವನದಲ್ಲಿ ಮಾಡಬಹುದಾಗಿದೆ.
ಇನ್ನೂ ಹತ್ತು ಹಲವಾರು ವೈಶಿಷ್ಠ್ಯತೆಗಳನ್ನು ಈ ತಪೋವನದಲ್ಲಿ ಕಾಣ ಬಹುದಾಗಿದ್ದು, ಇದರ ಉದ್ಘಾಟನೆಯನ್ನು ಹಲವಾರು ಗಣ್ಯರು ಹಾಗೂ ಪೂಜ್ಯರುಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಲಿದೆಂದು ಹಿರೇಮಠದ ಅಧ್ಯಕ್ಷರಾದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.
ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ಮೌನತಪಸ್ವಿ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು, ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರುಗಳ ತಪೋವನದ ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ವಹಿಸಲಿದ್ದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ್, ಹಿರಿಯ ಸಚಿವರುಗಳಾದ ವಿ.ಸೋಮಣ್ಣ, ಅರಗ ಜ್ಞಾನೇಂದ್ರ, ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವರಾದ ಎಸ್.ಶಿವಣ್ಣ (ಸೊಗಡು ಶಿವಣ್ಣ), ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆಂದು ಪೂಜ್ಯ ಸ್ವಾಮೀಜಿಗಳು ತಿಳಿಸಿದ್ದಾರೆ.