ಆಣೆ ಪ್ರಮಾಣ ಜೆಡಿಎಸ್ ಗೆ ಓಟ್ ಹಾಕಲೋ : ಗೋವಿಂದರಾಜುಗೆ ಓಟ್ ಹಾಕಲೋ
ತುಮಕೂರು : ಮುಂಬರುವ ಚುನಾವಣೆಯ ಹಿನ್ನಲೆಯಲ್ಲಿಯೇ ತಾವು ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್ ಗೋವಿಂದರಾಜು ರವರು ಮತದಾರರಿಗೆ ಆಮಿಷ ಒಡ್ಡಿ ಮತದಾರರನ್ನು ದೇವಸ್ಥಾನಗಳಿಗೆ ಯಾತ್ರೆಗೆಂದು ಕರೆದು ಕೊಂಡು ಹೋಗಿ ಆಣೆ ಪ್ರಮಾಣ ಮಾಡಿಸುವ ಮೂಲಕ ಮತದಾರರನ್ನು ತನ್ನತ್ತ ಸೆಳೆಯುವ ಪ್ರಹಸನ ಮುಂದುವರೆಸಿದ್ದಾರೆ.
ಇದಕ್ಕೆ ಪುಷ್ಟಿ ನೀಡುವೆಂಬಂತೆ ಬುಧವಾರ ಬೆಳಗ್ಗೆ ತುಮಕೂರು ಹೊರವಲಯದ ರಂಗಾಪುರ, ಯಲ್ಲಾಪುರ, ಸಿರಾ ಗೇಟ್, ಡಿ.ಎಂ ಪಾಳ್ಯ, ಮಳೆ ಫ್ಯಾಕ್ಟರಿ ಬಾಗದ ಮತದಾರರು ಹಾಗೂ ಸ್ಥಳೀಯ ಮುಖಂಡರುಗಳನ್ನು ಒಳಗೊಂಡಂತೆ ಸುಮಾರು 25ಕ್ಕೂ ಹೆಚ್ಚು ಬಸ್ ಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನರನ್ನು ದೇವಸ್ಥಾನಗಳಿಗೆ ತೀರ್ಥಯಾತ್ರೆಗೆಂದು ಕರೆದು ಕೊಂಡು ಹೋಗುವ ಮೂಲಕ ಆಣೆ ಪ್ರಮಾಣ ಪ್ರಹಸನಕ್ಕೆ ಮುಂದಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಇನ್ನು ದೇವಸ್ಥಾನಕ್ಕೆ ತೆರಳುತ್ತಿದ್ದ ಜನರೇ ಸ್ವತಃ ಆಣೆ ಪ್ರಮಾಣಕ್ಕೆ ಮುಂದಾಗಿರುವುದಾಗಿ ಒಪ್ಪಿಕೊಂಡಿರುವ ವಿಡಿಯೋ ಸಹ ಲಭ್ಯವಾಗಿದ್ದು ಇನ್ನಾದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರೇ ಕಾದುನೋಡಬೇಕಿದೆ.
ಸ್ಥಳದ ಬಗ್ಗೆ ಎಚ್ಚರಿಕೆ ವಹಿಸಿದ ಮುಖಂಡರು.
ಇನ್ನು ಕಳೆದ ಹತ್ತು ದಿನಗಳ ಹಿಂದೆ ತುಮಕೂರು ಗ್ರಾಮಾಂತರದ ಹೆತ್ತೇನಹಳ್ಳಿ ಮಾರಮ್ಮ ದೇವಾಲಯಕ್ಕೆ, ಚಿಕ್ಕಕೊರಟಗೆರೆಯ ಕೆಂಪಮ್ಮ ದೇವಾಲಯಕ್ಕೆ ಹಾಗೂ ದಿಬ್ಬೂರಿನ ನರಸಿಂಹ ಸ್ವಾಮಿ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಪೇಚಿಗೆ ಸಿಲುಕಿರುವ ಅಭ್ಯರ್ಥಿ ಗೋವಿಂದರಾಜು ಹಾಗೂ ಆತನ ಸಹಚರರು ಈ ಬಾರಿ ಸ್ಥಳವನ್ನು ಗೌಪ್ಯವಾಗಿಡುವ ಮೂಲಕ ತುಮಕೂರಿನ ಹೊರವಲಯದ ದೇವಾಲಯಗಳಿಗೆ ಮತದಾರರನ್ನು ಕರೆದುಕೊಂಡು ಹೋಗುವ ಕೆಲಸಕ್ಕೆ ಮುಂದಾಗಿರುವುದು ಸಹ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಕ್ಷದಿಂದ ಟಿಕೆಟ್ ಕೈತಪ್ಪಿದರೆ ಮತದಾರರನ್ನ ಭದ್ರ ಪಡಿಸಲು ಮುಂದಾದರಾ….. ಎನ್ ಗೋವಿಂದರಾಜು.
ಇನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರನ್ನ ಪ್ರತಿಬಾರಿ ಕಡೆಗಣಿಸುತ್ತಾ ಸ್ಥಳೀಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿರುವ ಅಭ್ಯರ್ಥಿ ಎನ್ ಗೋವಿಂದರಾಜುರವರು ಕೊನೆ ಕ್ಷಣದಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಕೈತಪ್ಪಿದರೆ ಪಕ್ಷೇತರವಾಗಿ ಸ್ಪರ್ಧಿಸುವ ಕೆಲಸಕ್ಕೂ ಸಹ ಮುಂದಾಗಿದ್ದಾರೆ ಎನ್ನುವ ಅನುಮಾನ ಸಹ ವ್ಯಕ್ತವಾಗಿದ್ದು ಬೃಹತ್ ಮಟ್ಟದಲ್ಲಿ ಕಾರ್ಯಕರ್ತರನ್ನ ಚುನಾವಣೆಗೂ ಮೊದಲೇ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಆಣೆ ಪ್ರಮಾಣವನ್ನ ಮಾಡುವ ಮೂಲಕ ತಮ್ಮ ಮತದಾರರನ್ನು ಭದ್ರ ಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವ ಮಾತುಗಳು ಸಹ ಪಕ್ಷದ ವಲಯದಲ್ಲಿ ಕೇಳಿ ಬರುತ್ತದೆ.
ವಿಷಯ ಗೊತ್ತಾದರೂ ಸಹ ಸುಮ್ಮನಾದ ಅಧಿಕಾರಿಗಳು.
ಇನ್ನು ಮತದಾರನ ಆಮಿಷ ಒಡ್ಡುವ ಸಲುವಾಗಿ ದೇವಾಲಯಕ್ಕೆ ಕರೆದುಕೊಂಡು ಹೋಗುವ ವಿಷಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿದರು ಸಹ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿರುವುದು ಸಹ ಸ್ಥಳೀಯ ಮತದಾರರು ಪ್ರಜ್ಞಾವಂತರು ಎನ್ ಗೋವಿಂದರಾಜು ನಡೆದನ್ನು ವಿರೋಧಿಸಿದ್ದಾರೆ.
ಇತ್ತೀಚಿಗೆ ದೂರು ನೀಡಿದ್ದ ಬಿಜೆಪಿ ಪಾಳಯ
ಹತ್ತು ದಿನಗಳ ಹಿಂದೆ ಎನ್ ಗೋವಿಂದರಾಜು ಜನರನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿ ಆನೆ ಪ್ರಮಾಣಕ್ಕೆ ಮುಂದಾಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ ತುಮಕೂರು ನಗರ ಬಿಜೆಪಿ ಯುವ ಮೋರ್ಚಾ ಹಾಗೂ ಹಿರಿಯ ಮುಖಂಡರಿಂದ ಜಿಲ್ಲಾಧಿಕಾರಿಗಳು , ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವರಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಯಾರು ಏನು ಮಾಡಲು ಸಾಧ್ಯವಿಲ್ಲ ಎನ್ನುವ ಹಠಕ್ಕೆ ಬಿದ್ರ ಗೋವಿಂದರಾಜು….?
ಇನ್ನು ತುಮಕೂರು ನಗರದಾದ್ಯಂತ ಜೆಡಿಎಸ್ ಅಭ್ಯರ್ಥಿ ಆಣೆ ಪ್ರಮಾಣ ಪ್ರಹಸನಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಗೊತ್ತಿದ್ದರೂ ಸಹ ಗೋವಿಂದರಾಜು ತಮ್ಮ ನಡೆಯನ್ನು ಮುಂದುವರಿಸಿರುವುದು ಸಾಕಷ್ಟು ಅನುಮಾನಗಳಿಗೂ ಸಹ ವ್ಯಕ್ತವಾಗಿದ್ದು ಮುಂದೆ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗುವುದು ಎಂದು ಕಾದು ನೋಡಬೇಕಿದೆ.