ಇತ್ತೀಚೆಗೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ನ ಪಂಚರತ್ನ ರಥ ಯಾತ್ರೆಯ ಪ್ರಯುಕ್ತ ಜೆಡಿಎಸ್ ಪಕ್ಷದವರು ಹಾಕಲಾಗಿದ್ದ ಫ್ಲೆಕ್ಸ್ ಬ್ಯಾನರ್‌ಗಳನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದರು ಎನ್ನಲಾಗಿದ್ದು ಈ ಸಂಬಂಧ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಕ್ಸಮರ ನಡೆದಿದೆ ಎನ್ನಲಾಗಿದೆ.
ಇದರ ಹಿನ್ನಲೆಯಲ್ಲಿ ಹಾಲಿ ಶಾಸಕರಾದ ಗೌರಿಶಂಕರ್ ಅವರ ಆಪ್ತ ಸಹಾಯಕ ಸುರೇಶ್ ಅವರ ಮೇಲೆ ಮಾನ್ಯ ಮಾಜಿ ಶಾಸಕರಾದ ಬಿ.ಸುರೇಶ್ ಗೌಡರವರು ಕೆಂಡಕಾರಿದ್ದು ಅಲ್ಲದೇ ತಮ್ಮ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಕುಳಿತು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ರವರಿಗೆ ಏಕವಚನದಲ್ಲಿ ಸಂಭೋಧಿಸುತ್ತಾ, ಧಮ್ಕಿ ಹಾಕುತ್ತಿರುವುದಲ್ಲದೇ ದರ್ಪ ತೋರಿಸಿ, ಬೆದರಿಕೆ ಹಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ, ವಾಟ್ಸ್‌ಪ್‌ಗಳಲ್ಲಿ ವೈರಲ್ ಆಗಿದೆ.
ತಾನು ತಮ್ಮ ಬೆಂಬಲಿಗರೊಂದಿಗೆ ಠಾಣೆಯ ಮುಂಭಾಗದಲ್ಲಿ ಧರಣಿ ನಡೆಸುವುದಾಗಿ / ಮಲಗುವುದಾಗಿ, ತಾವು ಸರಿಯಾದ ಸೆಕ್ಷನ್ ಗಳನ್ನು ಹಾಕಿ ಶಾಸಕರ ಆಪ್ತ ಸಹಾಯಕನನ್ನು 24 ಗಂಟೆಯೊಳಗೆ ಬಂಧಿಸಬೇಕು ಹುಷಾರ್ !!! ಇತ್ಯಾದಿಯಾಗಿ ದರ್ಪ ತೋರಿಸಿರುತ್ತಾರೆ.
ಇನ್ನುಳಿದಂತೆ ಸರ್ಕಾರಿ ನೌಕರರನ್ನು ಬೈದಿರುವುದಲ್ಲದೇ ಜೆಡಿಎಸ್ ಪಕ್ಷದವರನ್ನೂ ಸಹ ಮನಃ ಬಂದಂತೆ ಈ ವಿಡಿಯೋದಲ್ಲಿ ಬೈದಿರುವುದು ಎಷ್ಟು ಮಾತ್ರ ಸಮಂಜಸ !!!
ಪಂಚರತ್ನರಥ ಯಾತ್ರೆಯು ಅಭೂತ ಪೂರ್ವ ಯಶಸ್ಸನ್ನು ಸಹಿಸದೇ ಈ ರೀತಿಯಾಗಿ ಸುರೇಶ್ ಗೌಡರವರು ವರ್ತಿಸುತ್ತಿದ್ದಾರೆಂದು ಒಂದು ಕಡೆ ಜನ ಮಾತನಾಡಿಕೊಳ್ಳುತ್ತಿದ್ದಾರೆ, ಅದೂ ಅಲ್ಲದೇ ಕುಮಾರಸ್ವಾಮಿಯವರು ತುಮಕೂರು ಗ್ರಾಮಾಂತರ ವಿಭಾಗದಲ್ಲಿ ನಡೆಸಿದ ಈ ಯಾತ್ರೆಯ ಲಾಭ ಜೆಡಿಎಸ್ ಗೆ ವರದಾನವಾಗುತ್ತದೆಂಬ ಭಯ ಕಾಡುತ್ತಿದೆಯೋ ಗೊತ್ತಿಲ್ಲ !!!!!
ಜೆಡಿಎಸ್ ಪಕ್ಷದವರು ಅವರ ಕಾರ್ಯಕ್ರಮ ಮಾಡಿ ತಮ್ಮ ಶಕ್ತಿಯನ್ನು ತೋರಿರುತ್ತಾರೆ, ಸುರೇಶ್ ಗೌಡರು ಸಹ ತಮ್ಮ ಪ್ರಭಾವ ಬೀರಿ ಗ್ರಾಮಾಂತರದಲ್ಲಿ ಮತದಾರರನ್ನು ಓಲೈಸಿಕೊಂಡು ಪ್ರಭಾವ ಬೀರಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕೇ ವಿನಃ, ಈ ರೀತಿಯಾಗಿ ದರ್ಪ ತೋರಿ ಸರ್ಕಾರಿ ನೌಕರರನ್ನು ಅಪಮಾನಿಸಿರುವುದು ಸಮಂಜಸಕರವಲ್ಲವೆನ್ನುವುದು ಮತದಾರರ ಅಭಿಪ್ರಾಯವಾಗಿದೆ.