ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಮಾಲೀಕರ ಸಂಘದ ವತಿಯಿಂದ ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ನಿಯಮಗಳಲ್ಲಿರುವ ನ್ಯೂನ್ಯತೆಗಳು ಹಾಗೂ ಅದನ್ನು ಸರಿಪಡಿಸುವ ಬಗ್ಗೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಯಾರೂ ಮುಂದೆ ಬರದ ಕಾರಣ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಸರ್ಕಾರ ಕ್ವಾರಿ ಮಾಲೀಕರುಗಳನ್ನು ನೇರವಾಗಿ ಟಾರ್ಗೆಟ್ ಮಾಡುವ ಮೂಲಕ ಹೆಚ್ಚಿನ ರಾಜಧನ ವಿಧಿಸುವ ಮೂಲಕ ಮರಣಶಾಸನವನ್ನು ಬರೆಯಲು ಹೊರಟಿದ್ದು, ಅದರ ವಿರುದ್ಧವಾಗಿ ಇಂದಿನಿಂದ ಅನಿರ್ಧಷ್ಟಾವದಿ ಕಾಲ ಕ್ರಷರ್ಗಳನ್ನು ಬಂದ್ ಮಾಡಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಾ ತಮ್ಮ ಆಕ್ರೋಷವನ್ನು ಹೊರ ಹಾಕಿದರು.
ಈ ಸಂಬಂಧ ತುಮಕೂರು ನಗರದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ ಕರ್ನಾಟಕ ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ನ ಉಪಾಧ್ಯಕ್ಷರಾದ ಸಿ.ಎಸ್.ಭಾಸ್ಕರ್ ಸರ್ಕಾರದ ವಿರುದ್ಧ ತಮ್ಮ ಅಸಮಾಧನವನ್ನು ವ್ಯಕ್ತಪಡಿಸಿದರು, ಸರ್ಕಾರ ತಮ್ಮ ಮನವಿಗೆ ಸ್ಪಂದಿಸುವ ಸಲುವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿಯೂ ಸಹ ಸರ್ಕಾರದ ಗಮನ ಸೆಳೆಯುವುದರೊಂದಿಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದೆಂದು ತಿಳಿಸಿದರು. ಅದುವರೆವಿಗೂ ಸಾರ್ವಜನಿಕರಿಗೆ ಹಾಗೂ ಕಟ್ಟಡ ಮಾಲೀಕರುಗಳಿಗೆ ತೊಂದರೆಗಳು ಎದುರಾಗಲಿದೆ ಅದಕ್ಕೆ ಕ್ಷಮೆಯನ್ನು ಯಾಚಿಸುತ್ತಾ, ತಮ್ಮ ನಿಲುವನ್ನು ಸರ್ಕಾರ ಗಮನಹರಿಸಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇನ್ನು ಈ ವಿಚಾರವಾಗಿ ತುಮಕೂರು ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಸಂಘದ ನಿರ್ದೇಶಕರಾದ ಕುಲಕರ್ಣಿ, ಅನೀಫ್, ಬಾಲಾಜಿ, ನಬು ಸೇರಿದಂತೆ ಇತರರು ಉಪಸ್ಥಿತರಿದ್ದರು.