ತುಮಕೂರು ನಗರದ ಸೌಂದರ್ಯದ ಸಮೀಕ್ಷೆಗೆ ಮುಂದಾದ ಸ್ಮಾರ್ಟ್‌ ಸಿಟಿ

ಭಾರತ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಸ್ಮಾರ್ಟ್ ಸಿಟಿ ಮಿಷನ್‌ಅಡಿಯಲ್ಲಿತುಮಕೂರು ಸ್ಮಾರ್ಟ್‌ಸಿಟಿಯು ೨೦೧೭ರಲ್ಲಿ ಸ್ಥಾಪಿತಗೊಂಡಿದ್ದು, ಸ್ಮಾರ್ಟ್‌ಸಿಟಿ ವತಿಯಿಂದಪ್ರಮುಖವಾಗಿರಸ್ತೆ, ಶಿಕ್ಷಣ, ನೀರು ಸರಬರಾಜು, ಪರಿಸರಅಭಿವೃದ್ಧಿ, ವಸತಿ, ಕ್ರೀಡಾ ವಲಯಗಳಲ್ಲಿ ಮೂಲಸೌಕರ್ಯಅಭಿವೃದ್ಧಿಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮೂರನೇ ಸುತ್ತಿನ ಸೌಲಭ್ಯಯುತಜೀವನ ನಿರ್ವಹಣೆ ಸೂಚ್ಯಂಕ-೨೦೨೨ (Ease Of Living Index -EOLI) ಮೂಲಕ ಜೀವನದಗುಣಮಟ್ಟ, ನಗರದಆರ್ಥಿಕ ಸಾಮರ್ಥ್ಯ ಮತ್ತು ಸುಸ್ಥಿರತೆ ಹಾಗೂ ಸ್ಥಿತಿಸ್ಥಾಪಕತ್ವದ ಸೂಚ್ಯಂಕಗಳನ್ನು ಕಲೆಹಾಕುವ ಉದ್ಧೇಶದಿಂದ ಸರ್ವೇಕಾರ್ಯವನ್ನುಕೈಗೊಳ್ಳಲು ನಾಗರೀಕಗ್ರಹಿಕೆ ಸೂಚ್ಯಂಕ 2022ನ್ನು ಶ್ರೀ ಹರ್‌ದೀಪ್ ಸಿಂಗ್ ಪೂರಿ, ಗೌರವಾನ್ವಿತ ಸಚಿವರು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ, ರವರು ನಾಗರೀಕಗ್ರಹಿಕೆ ಸಮೀಕ್ಷೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು.ಅದರಂತೆ,ದೇಶಾದ್ಯಂತ ಪ್ರಸ್ತುತ ದಿನಾಂಕದವರೆಗೆ ೧೧ ಲಕ್ಷಕ್ಕೂಅಧಿಕ ನಾಗರೀಕರು ಸಮೀಕ್ಷೆಯಲ್ಲಿ ಭಾಗವಹಿಸಿರುತ್ತಾರೆ. ತುಮಕೂರು ನಗರದಲ್ಲೂಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸದರಿ ಸಮೀಕ್ಷೆಯಆನ್‌ಲೈನ್ ಲಿಂಕ್ https://eol2022.org/CitizenFeedback13ಆಗಿದ್ದು,ದಿನಾಂಕ:೨೩.೧೨.೨೦೨೨ರವರೆಗೂ ಚಾಲನೆಯಲ್ಲಿರುತ್ತದೆಆದ್ದರಿಂದ ನಗರದ ನಾಗರೀಕರುಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದುಕೋರಲಾಗಿದೆ.

 

 

ತುಮಕೂರು ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ನಗರದ ವಿವಿಧ ವಲಯಗಳ ಅಭಿವೃದ್ಧಿಗಾಗಿರೂ.930 ಕೋಟಿಗಳ 178 ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು 152 ಯೋಜನೆಗಳು ಪೂರ್ಣಗೊಂಡಿರುತ್ತವೆ ಹಾಗೂ ಉಳಿದ 26 ಯೋಜನೆಗಳು ಪ್ರಗತಿಯಲ್ಲಿವೆ. ಯೋಜನೆಗಳ ಅನುಷ್ಟಾನದಲ್ಲಿತುಮಕೂರು ನಗರವುಕರ್ನಾಟಕದ 07 ಸ್ಮಾರ್ಟ್‌ಸಿಟಿಗಳ ಪೈಕಿ ಕಾಮಗಾರಿಗಳ ಅನುಷ್ಟಾನದಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತಕೇಂದ್ರ ಸರ್ಕಾರದ ವತಿಯಿಂದ ಸ್ಮಾರ್ಟ್‌ಸಿಟಿ ವತಿಯಿಂದಕೈಗೊಂಡಿರುವಎಲ್ಲಾ ಯೋಜನೆಗಳನ್ನು 2022ರ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದ್ದು, ಇದಕ್ಕೆಅನುಗುಣವಾಗಿಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ.

 

ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಹಮ್ಮಿಕೊಂಡಿರುವ ಪ್ರಮುಖ ಯೋಜನೆಗಳ ಕುರಿತುಕಿರು ಪರಿಚಯ:

 

 

 

ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದ ನಗರದ ಒಳಭಾಗದಲ್ಲಿ ಸಂಚಾರದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಕ್ಯಾತ್ಸಂದ್ರದಿಂದಗುಬ್ಬಿಗೇಟ್ ವರೆಗಿನ ಹೊರ ವರ್ತುಲ ರಸ್ತೆಯನ್ನುಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಿದ್ದು, ಬೆಂಗಳೂರು-ಹೊನ್ನಾವರರಾಷ್ಟ್ರೀಯ ಹೆದ್ದಾರಿ ಹಾಗೂ ಗುಬ್ಬಿಗೇಟಿನ ನಡುವಿನ

 

10.5 ಕಿ.ಮೀ.ಗಳ ಸಂಪೂರ್ಣ ಚಾಚು ಸೇವಾ ರಸ್ತೆ ಮತ್ತು ಮಳೆ ನೀರುಚರಂಡಿಯೊಂದಿಗೆ ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿ ಎಲ್‌ಇಡಿ ಬೀದಿ ದೀಪ ವ್ಯವಸ್ಥೆಯನ್ನು ಸಹ ಕಲ್ಪಿಸಿರುವುದರಿಂದ, ನಗರದ ಮುಖಾಂತರ ಹಾದು ಹೋಗುತ್ತಿದ್ದದಟ್ಟಣೆಯ ಸಂಚಾರ ವ್ಯವಸ್ಥೆಯಿಂದ ಸಂಭವಿಸುತ್ತಿದ್ದ ಅಪಘಾತಗಳನ್ನು ತಪ್ಪಿಸಿದಂತಾಗಿದೆ. ರಸ್ತೆ ಮೇಲಿನ ಸುವ್ಯವಸ್ಥಿತ ಸಂಚಾರ ಮತ್ತು ಸೌಂದರ್ಯಕ್ಕಾಗಿ ಭೂಗತ ಪೈಪ್‌ಲೈನ್‌ಗಳೊಂದಿಗೆ 14.5 ಕಿ.ಮೀ.ಉದ್ದದಒಟ್ಟು 18 ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಹಾಗೂ 12ಮೀ.ಗಿಂತಲೂ ಕಡಿಮೆಅಗಲದಒಟ್ಟು 83ರಸ್ತೆಗಳಲ್ಲಿ ಡ್ರೈನ್, ಡಕ್ಟಿಂಗ್, ಫುಟ್‌ಪಾತ್ ಮತ್ತುರಸ್ತೆಡಾಂಬರೀಕರಣ ಮಾಡಿಅಭಿವೃದ್ಧಿಪಡಿಸಲಾಗಿದೆ.

 

 

 

ಆರೋಗ್ಯಕ್ಷೇತ್ರದಲ್ಲಿ ಬಹು ಮುಖ್ಯವಾದತುರ್ತುಚಿಕಿತ್ಸಾಕೇಂದ್ರ ಸ್ಥಾಪಿಸಲಾಗುತ್ತಿದ್ದು, ಕೋವಿಡ್-೧೯ರ ಸಾಂಕ್ರಾಮಿಕರೋಗದ ನಿರ್ವಹಣೆಯಲ್ಲಿ RTPCR ಲ್ಯಾಬ್‌ಗಳನ್ನು ತೆರೆದು ಶೀಘ್ರವಾಗಿ ಪರೀಕ್ಷಾ ವರದಿ ಪಡೆಯಲು ಹಾಗೂ ರೋಗಿಗಳಿಗೆ ಪ್ರಥಮಚಿಕಿತ್ಸೆಗಾಗಿಅತ್ಯಾಧುನಿಕಂ ALS ಆಂಬುಲೆನ್ಸ್‌ಒದಗಿಸಲಾಗಿದೆ.

 

 

 

ಶೈಕ್ಷಣಿಕ ವಲಯದಅಭಿವೃದ್ಧಿ ಭಾಗವಾಗಿ ನಗರದ ಪ್ರಮುಖ ಸರ್ಕಾರಿ ಪದವಿ ಪೂರ್ವಕಾಲೇಜಿನ ಮೂಲಭೂತ ಸೌಕರ್ಯಅಭಿವೃದ್ಧಿ ಯೋಜನೆಗಳಾದ ಹೆಚ್ಚುವರಿ ತರಗತಿ ಕೊಠಡಿಗಳು ಮತ್ತು ಪೀಠೋಪಕರಣಗಳು, ಕ್ರೀಡಾಕೇಂದ್ರ ನಿರ್ಮಾಣ ಮತ್ತು ಉಪಕರಣಗಳು, ಶೌಚಾಲಯಗಳು, ಮೈದಾನದಅಭಿವೃದ್ಧಿ, ಕಾಂಪೌಂಡ್‌ಗೋಡೆ ಮತ್ತು ದೀಪ ವ್ಯವಸ್ಥೆ ಮತ್ತು ಸ್ಮಾರ್ಟ್‌ಕ್ಲಾಸ್‌ರೂಂ ಅಳವಡಿಕೆ ಕಾಲೇಜಿನ ಸಮಗ್ರಅಭಿವೃದ್ಧಿ, ಎಂಪ್ರೆಸ್‌ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ  ವಿವಿದೋದ್ಧೇಶ ಆಡಿಟೋರಿಯಂನೊಂದಿಗೆ, ಗ್ರಂಥಾಲಯ, ಭಾಷಾ ಪ್ರಯೋಗಾಲಯಗಳು ಮತ್ತು ವಿಜ್ಞಾನ ಪ್ರಯೋಗಾಲಯಗಳು ಹಾಗೂ ಅಗತ್ಯವಿರುವ ಪೀಠೋಪಕರಣಗಳೊಂದಿಗೆ ಸ್ಮಾರ್ಟ್‌ಕ್ಲಾಸ್‌ರೂಂ ಅಳವಡಿಸಲಾಗಿದೆ. ಇದಲ್ಲದೆ, ನಗರದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಸೌಕರ್ಯವನ್ನುಕಲ್ಪಿಸಲಾಗಿದೆ.ಇದರಿಂದ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.ಜೊತೆಗೆ ನಗರದಕೇಂದ್ರಗ್ರಂಥಾಲಯವನ್ನು ಅಭಿವೃದ್ಧಿಪಡಿಸಿ, ಡಿಜಿಟಲ್‌ಗ್ರಂಥಾಲಯವನ್ನು ಸಹ ಸ್ಥಾಪಿಸಲಾಗಿದೆ ಹಾಗೂ ನೂತನಗ್ರಂಥಾಲಯಕಟ್ಟಡದಲ್ಲಿಕೌಶಲ್ಯಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಯುವಜನತೆಗೆ ಪ್ರಯೋಜನವಾಗಲಿದೆ. ಚಿಣ್ಣರಿಗಾಗಿ ಸ್ಮಾರ್ಟ್‌ಸಿಟಿ ವತಿಯಿಂದ ನಗರದ ವಿವಿಧ ಕಡೆಗಳಲ್ಲಿ ಒಟ್ಟು 20 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಿಕೊಟ್ಟಿದ್ದು, ಹಲವಾರುಅಂಗನವಾಡಿ ಕೇಂದ್ರಗಳ ದುರಸ್ತಿ ಕಾರ್ಯವನ್ನು ಸಹ ಮಾಡಲಾಗಿದೆ.

 

 

 

ನಗರದಟೌನ್‌ಹಾಲ್‌ಕಟ್ಟಡದಲ್ಲಿ ಸಿಟಿ ಸೆಂಟ್ರಲ್‌ಕಮ್ಯಾಂಡ್‌ಅಂಡ್‌ಕಂಟ್ರೋಲ್ ಸೆಂಟರ್ ಸ್ಥಾಪಿಸಿದ್ದು, ನಗರದ ಪ್ರಮುಖ ೧೩ ಸಿಗ್ನಲ್‌ಗಳಲ್ಲಿ ಇಂಟಲಿಜೆಂಟ್ ಸಿಗ್ನಲಿಂಗ್, ರೆಡ್‌ಲೈಟ್ ವಯೋಲೆಷನ್, ಟ್ರಿಪಲ್‌ರೈಡಿಂಗ್, ನೊ ಹೆಲ್ಮೆಟ್‌ಡಿಟೆಕ್ಷನ್, ೬ ಕಡೆಯಲ್ಲಿ ವೇರಿಯಬಲ್ ಮೆಸೆಜಿಂಗ್ ಸಿಸ್ಟಂ, 5 ಕಡೆಯಲ್ಲಿಎನ್‌ವಿರಾನ್‌ಮೆಂಟ್ ಮಾನಿಟರಿಂಗ್ ಸೆನ್ಸರ್‌ಗಳನ್ನು ಹಾಗೂ ೬ ಸ್ಥಳಗಳಲ್ಲಿ ಸ್ಮಾರ್ಟ್‌ಪೋಲ್‌ಗಳನ್ನು ಅಳವಡಿಸಲಾಗಿದ್ದು, ನಗರದ ನಿರ್ವಹಣೆ, ಸುರಕ್ಷತೆ ಮತ್ತು ಭದ್ರತೆಯನ್ನುಒದಗಿಸುತ್ತಿದೆ. ಈ ಯೋಜನೆ ಪೋಲೀಸರು ಅನೇಕ ಅಪರಾಧಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿರುತ್ತದೆ.

 

 

ಒಟ್ಟು6 ಅಂತಸ್ತುಗಳನ್ನು ಒಳಗೊಂಡ ಹೈಟೆಕ್ ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರತಂಗುವಿಕೆ, ಫುಡ್ ಸ್ಟಾಲ್, ಹೈಟೆಕ್‌ಆಸನದ ವ್ಯವಸ್ಥೆ, ಶುದ್ಧಕುಡಿಯುವ ನೀರು, ಅಧುನಿಕ ಶೌಚಾಲಯ, ಉಚಿತ ವೈಫೈ ಸೇರಿದಂತೆ ಪ್ರಯಾಣಿಕರಿಗೆ ಸ್ಮಾರ್ಟ್ ಸೌಲಭ್ಯಗಳು ದೊರಕಲಿವೆ.

ಕ್ರೀಡಾಸಕ್ತರಿಗಾಗಿ ಸುಮಾರು 6000 ಆಸನ ವ್ಯವಸ್ಥೆಯ ಸುಸಜ್ಜಿತ ಮಹಾತ್ಮಗಾಂಧಿಕ್ರೀಡಾಂಗಣದ ಪುನರಾಭಿವೃದ್ಧಿಕಾಮಗಾರಿಯನ್ನುಕೈಗೊಂಡಿದ್ದು, ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ ಹಾಗೂ ನಗರದ ಪ್ರಮುಖ ಪ್ರವಾಸಿ ತಾಣವಾದಅಮಾನಿಕೆರೆ ಸಮಗ್ರಅಭಿವೃದ್ಧಿಯಲ್ಲಿ, ಚೈನ್‌ಲಿಂಕ್‌ಫೆನ್ಸಿಂಗ್, ಸೈಕಲ್‌ಟ್ರ್ಯಾಕ್, ವಾಕಿಂಗ್‌ಪಾತ್, ಟನಲ್ ಮಾರ್ಗಗಳೊಂದಿಗೆ, ಮತ್ತು ೬೫ಮೀ.ಧ್ವಜ ಸ್ತಂಭವನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ.

 

ಸ್ಮಾರ್ಟ್‌ಸಿಟಿ ವತಿಯಿಂದ ಕೈಗೊಂಡಿರುವ ಇತರೆ ಪ್ರಮುಖ ಯೋಜನೆಗಳಾದ ನಗರದಾದ್ಯಂತಏಕರೂಪದ ಬೀದಿ ದೀಪ ವ್ಯವಸ್ಥೆಕಲ್ಪಿಸುವ ನಿಟ್ಟಿನಲ್ಲಿಖಾಸಗಿ ಸಹಭಾಗಿತ್ವ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿಎಲ್‌ಇಡಿ ಬೀದಿ ದೀಪ ವ್ಯವಸ್ಥೆ, ಸಾರ್ವಜನಿಕ ಅನುಕೂಲ ಮತ್ತು ಮಾಹಿತಿಗಾಗಿ ನಗರಕೇಂದ್ರಗ್ರಂಥಾಲಯ, 24*7ನೀರು ಸರಬರಾಜುಯೋಜನೆ, ನಗರ ಪ್ರಮುಖ ವ್ಯವಹಾರಿಕ ರಸ್ತೆಗಳಾದ ಎಂ.ಜಿ.ರಸ್ತ್ಸೆ, ಎಫ್‌ಎಮ್‌ಸಿ ರಸ್ತೆ, ಎಸ್.ಎಸ್.ಪುರಂ ರಸ್ತೆಗಳ ಕನ್ಸರ್ವೆನ್ಸಿಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ, ನಗರದಎಲ್ಲಾ ವಾರ್ಡ್‌ಗಳಲ್ಲಿ ಒಟ್ಟು 99 ಉದ್ಯಾನವನಗಳ ಅಭಿವೃದ್ಧಿ, ನಗರದ ವಿವಿಧ ಕಡೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ವ್ಯಾಪಾರಿ ಮಳಿಗೆಗಳಅಭಿವೃದ್ಧಿ, ನಗರದ ಘನ ತ್ಯಾಜ್ಯ ನಿರ್ವಹಣೆಯ ಭಾಗವಾಗಿಅಜ್ಜಗೊಂಡನಹಳ್ಳಿ ಪ್ರದೇಶದಲ್ಲಿ ಲ್ಯಾಂಡ್‌ಫಿಲ್‌ಅಭಿವೃದ್ಧಿಯೋಜನೆ ಮತ್ತು ಪ್ರಸ್ತುತ ಸಂಗ್ರಹವಾಗಿರುವಕಸದ ವಿಲೇವಾರಿಗಾಗಿ ಬಯೋಮೈನಿಂಗ್ ಹಾಗೂ ಇತರೆ ಯೋಜನೆಗಳನ್ನು ಕೈಗೊಳ್ಳಲಾಗಿದೆ.

 

 

ಈ ದಿಸೆಯಲ್ಲಿ ನಗರದ ಸರ್ವತೋಮುಖಅಭಿವೃದ್ಧಿಗೆ ತುಮಕೂರು ಸ್ಮಾರ್ಟ್‌ಸಿಟಿ ಯೋಜನೆಗಳನ್ನು ರೂಪಿಸಿದ್ದು, ಕಾರ್ಯರೂಪಕ್ಕೆತಂದಿದೆ. ಈ ನಿಟ್ಟಿನಲ್ಲಿ, ನಗರದ ಬಗ್ಗೆ ನಾಗರೀಕರ ಅಭಿಪ್ರಾಯಗಳನ್ನು ಕಲೆಹಾಕಲು ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮೂರನೇ ಸುತ್ತಿನ ಸೌಲಭ್ಯಯುತಜೀವನ ನಿರ್ವಹಣೆ ಸೂಚ್ಯಂಕ-2022 (Ease Of Living Index -EOLI)ಒಂದುಉತ್ತಮಅವಕಾಶವಾಗಿದ್ದು, ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದತುಮಕೂರು ನಗರದ ವಿವಿದೆಡೆ QR code ಒಳಗೊಂಡಿರುವ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ.  ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದ ಅಧಿಕೃತ ವೆಬ್‌ಸೈಟ್ ಹಾಗೂ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟಿಂಗ್ ಮಾಡಲಾಗಿರುವುದರಿಂದ, ಸದರಿ QR code ಗಳನ್ನು ಬಳಸಿ ಸಾರ್ವಜನಿಕರೆಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದುತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ.ಟಿ.ರಂಗಸ್ವಾಮಿಯವರು ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಸೋಮಪ್ಪ ಕಡಕೋಳ, ಲೆಕ್ಕಾಧಿಕಾರಿ ಧನಂಜಯ, ಮುಖ್ಯ ಹಣಕಾಸು ಅಧಿಕಾರಿ ಶ್ರೀನಿವಾಸು ಕೆ.ಎ. ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!