ತುಮಕೂರು ಜಿಲ್ಲೆಯ ಕೊರಟಗೆರೆತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕಾಶಪುರ ಗ್ರಾಮದಲ್ಲಿ ಸುಮಾರು 40 ಕುರಿ ಕಳ್ಳತನವಾದ ಪ್ರಕರಣ ನೆಡೆದಿದೆ.
ಪಾಪಮ್ಮನಾಗರಾಜು ಎಂಬವರಿಗೆ ಸೇರಿದ ಕುರಿಗಳು.
ಕೊರಟಗೇರೆಯಲ್ಲಿ ತಡರಾತ್ರಿ ಸಂಬದಿಕರ ಮದುವೆ ಮುಗಿಸಿಕೊಂಡು ರಾತ್ರಿ 11 ಗಂಟೆಗೆ ಕುರಿಗಾಹಿಗಳು ಮನೆಗೆ ಬಂದು ನಿದ್ರೆಗೆ ಜಾರಿದ್ದಾರೆ.
ಬೆಳ್ಳಿಗಿನ ಜಾವ ಸುಮಾರು 3 ಗಂಟೆಗೆ ಎಚ್ಚರವಾಗಿ ಬಾಗಿಲು ತೆರೆಯಲು ಪ್ರಯತ್ನ ಪಟ್ಟಾಗ ಹೊರಗಡೆಯಿಂದ ಬೀಗ ಹಾಕಿರುವುದು ತಿಳಿದು ಬಂದಿದೆ.
ನಂತರ ಸಂಬದಿಕರೊಬ್ಬರಿಗೆ ಕರೆ ಮಾಡಿ ಬೀಗ ಹಾಕಿರುವ ವಿಷಯ ತಿಳಿಸಿದ್ದಾರೆ.
ನಂತರ ಸಂಬದಿಕರು ಬೀಗ ಮುರಿದ್ದಿದ್ದಾರೆ.
ಮಾಲೀಕರು ರೋಪ್ಪಕ್ಕೆ(ಕೊಟ್ಟಿಗೆ) ಬಂದು ಕುರಿಗಳನ್ನು ವೀಕ್ಷಿಸಿದ್ದಾಗ ಚಿಕ್ಕ ಕುರಿಗಳನ್ನು ಸ್ಥಳದಲ್ಲೇ ಬಿಟ್ಟು.
40 ದೊಡ್ಡ ಕುರಿಗಳನ್ನು ಕದ್ದೊಯ್ದಿದ್ದಾರೆ ಎನ್ನಾಲಾಗಿದೆ.
ಸುಮಾರು 1-2 ಗಂಟೆ ಸಮಯದಲ್ಲಿ ಕುರಿಗಾಹಿಯ ಮನೆ ಹಾಗೂ ಅಕ್ಕ ಪಕ್ಕದ ಎರಡು ಮೂರು ಮನೆಗಳಿಗೆ ಹೊರಗಿನಿಂದಲೆ ಬೀಗ ಜಡಿದು, ರೋಪ್ಪದಲ್ಲಿದ್ದ 40 ಕುರಿಗಳನ್ನು ಕಳ್ಳರು ಟ್ರಕ್ ವಾಹನದ ಮೂಲಕ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಬಡಪಾಯಿ ನಾಗರಾಜು ಬೇರೆ ಆದಾಯ ,ಜಾಮೀನು ಯಾವುದು ಇಲ್ಲದೆ ಕುರಿಗಳನ್ನೇ ನಂಬಿಕ್ಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬಗಳ ಇಂದು ಬೀದಿಗೆ ಬಿದ್ದಿವೆ, ಕುರಿಗಾಹಿಯ ನಾಗರಾಜು ಗೋಳು ಮುಗಿಲು ಮುಟ್ಟಿದೆ.
ಸರ್ಕಾರದಿಂದ ಯಾವುದಾದರೂ ಪರಿಹಾರ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಕೊರಟಗೆರೆ ತಾಲ್ಲೂಕಿನಲ್ಲಿ ಹೆಚ್ಚುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಿಪಿಐ ಸುರೇಶ್ ಹಾಗೂ ಪಿಎಸ್ಐ ಚೇತನ್ ಕುಮಾರ್ ನೇತೃತ್ವದಲ್ಲಿ ಕಳ್ಳರಿಗೆ ಸೆರೆಹಿಡಿಯಲು ಹೇಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.