ತುಮಕೂರು
ಬಿಜೆಪಿ ಸರ್ಕಾರ
ಪರಿಶಿಷ್ಠ ಜಾತಿ ಹಾಗೂ ಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಕೇವಲ ಚುನಾವಣಾ ಗಿಮಿಕ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಈಗಾಗಲೇ ಶೇ50% ಮೀಸಲಾತಿ ಇದೆ, ಹೆಚ್ಚುವರಿಯಾಗಿ 6 ಪರ್ಸೆಂಟ್ ಸೇರಿಸಬೇಕಾದರೆ ಸಾಂವಿಧಾನಿಕ ತಿದ್ದುಪಡಿಯಾಗಬೇಕು,9 ನೇ ಶೆಡ್ಯೂಲ್ ನಲ್ಲಿ ಸೇರಿಸಬೇಕು ಇದಾವುದೂ ಅಗಿಲ್ಲ ಡಬ್ಬಲ್ ಇಂಜಿನ್ ಸರ್ಕಾರ, ಇದು ಕೇವಲ ಕಣ್ಣೊರೆಸೋ ತಂತ್ರ ಚುನಾವಣಾ ಗಿಮಿಕ್ ಎಂದು ಹರಿಹಾಯ್ದರು.
ಆಲ್ ಪಾರ್ಟಿಂಗ್ ಮೀಟಿಂಗ್ ನಲ್ಲಿ ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದೇವೆ, ನಾಗಮೋಹನ್ ದಾಸ್ ಸಮಿತಿ ಮಾಡಿದವರೇ ನಾವು,ಸ್ವಾಮೀಜಿ 250 ದಿನ ಧರಣಿ ಕೂತು ನಾವೆಲ್ಲ ಒತ್ತಡ ಹಾಕಿದ ಮೇಲೆ ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಮಿಲ್ಲರ್ ಆಯೋಗ ವರದಿ ವಿರೋಧಿಸಿದವರಾರು,ರಾಮಭೂಮಿ ಜನ್ಮಭೂಮಿ ಮಾಡಿದವರಾರು,ಕಮಂಡಲ ಯಾತ್ರೆ ಮಾಡಿದವರಾರು,ಕಾಂಗ್ರೆಸ್ನವರೋ ಬಿಜೆಪಿಯವರೋ ಖಾರವಾಗಿ ಎಂದು ಪ್ರಶ್ನೆ ಮಾಡಿದರು.