ಮಹಾನಗರ ಪಾಲಿಕೆಯು ದಲಿತ ವಿರೋಧಿ ನೀತಿಗೆ ಮುಂದಾಗಿದೆಂದು : ಬಿಜೆಪಿ ಗಂಭೀರ ಆರೋಪ

ತುಮಕೂರು ಮಹಾನಗರಪಾಲಿಕೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆ ನಿಯೋಜನೆಗೊಂಡಿತ್ತು. ಈ ಸಭೆಯಲ್ಲಿ ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕ ಮತ್ತು ಮಹಾನಗರಪಾಲಿಕೆಯಿಂದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರನ್ನ ನಿಯುಕ್ತಿಗೊಳಿಸುವ ವಿಷಯಗಳು ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಪಟ್ಟಂತೆ ಸಭೆ ಕರೆಯಲಾಗಿತ್ತು.

 

 

 

 

ಕಳೆದ ಒಂದು ತಿಂಗಳ ಮುಂಚೆ ನೂತನ ಮಹಾಪೌರರು, ಉಪಮಹಾಪೌರರು, 4 ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರುಗಳ ಆಯ್ಕೆ ಸಂಬಂಧ ಚುನಾವಣೆಯನ್ನು ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಸುಗಮ ಆಡಳಿತಕ್ಕಾಗಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ನೊಂದಿಗೆ ಮಾತುಕಥೆ ಮೂಲಕ ಒಪ್ಪಂದವನ್ನ ಮಾಡಲಾಗಿತ್ತು. ಉಪಮಹಾಪೌರರು ಮತ್ತು 1 ಸ್ಥಾಯಿಸಮಿತಿ ಜೆ.ಡಿ.ಎಸ್‌ಗೂ ಹಾಗೂ 1 ಸ್ಥಾಯಿಸಮಿತಿ ಮತ್ತು ನಗರಾಭಿವೃದ್ಧಿ ನಾಮನಿರ್ದೇಶಿತ ಸದಸ್ಯ ಸ್ಥಾನಗಳು ಬಿ.ಜೆ.ಪಿ ಗೂ ಎಂದು ಮಾತುಕಥೆಯಾಗಿತ್ತು. ಈ ಒಂದು ಒಪ್ಪಂದವನ್ನ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಮಹಾನಗರಪಾಲಿಕೆಯ ಸದಸ್ಯರುಗಳ ಸಮ್ಮುಖದಲ್ಲಿ ತೀರ್ಮಾನಿಸಲಾಗಿತ್ತು.

 

 

 

 

ಸಭೆಯಲ್ಲಿ ವಚನ ನೀಡಿದಂತೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರಾಗಿ ಬಿ.ಜೆ.ಪಿ ಪಕ್ಷದ ಮಹಾನಗರಪಾಲಿಕೆ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗಿತ್ತು. ಆದರೆ ಈ ಹಿಂದೆ ನಡೆದ ಒಡಂಬಡಿಕೆಯಂತೆ ಬಿ.ಜೆ.ಪಿ ಪಕ್ಷಕ್ಕೆ ತುಮಕೂರು ಮಹಾನಗರಪಾಲಿಕೆ ವತಿಯಿಂದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರನ್ನಾಗಿ ಮಂಜುನಾಥ್.ಎಸ್ ರವರನ್ನು ನಾಮನಿರ್ದೇಶನ ಮಾಡದೇ ಒಡಂಬಡಿಕೆಯನ್ನು ಗಾಳಿಗೆ ತೂರಿ ಕಾಂಗ್ರೆಸ್ ಪಕ್ಷದ ಮಹಾನಗರಪಾಲಿಕೆ ಸದಸ್ಯರಾದ ಷಕೀಲ್ ಅಹಮದ್ ರವರನ್ನು ತುಮಕೂರು ಮಹಾನಗರಪಾಲಿಕೆ ವತಿಯಿಂದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರನ್ನು ನಾಮನಿರ್ದೇಶನ ಮಾಡಲು ಜೆ.ಡಿ.ಎಸ್ ಮುಂದಾದಾಗ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಜೆ.ಡಿ.ಎಸ್ ಮುಖಂಡರ ವಚನ ಭ್ರಷ್ಟತೆಯನ್ನ ಖಂಡಿಸಿದರು.

 

 

 

 

 

ಸುಮಾರು 2 ತಾಸಿಗೂ ಅಧಿಕ ಸಮಯ ಈ ವಿಚಾರವಾಗಿ ಸದಸ್ಯರ ನಡುವೆ ವಾಗ್ವಾದಗಳು ನಡೆದವು. ಇದೇ ಸಂದರ್ಭದಲ್ಲಿ ಮಾಜಿ ಮಹಾಪೌರರಾದಂತಹ ಬಿ.ಜಿ.ಕೃಷ್ಣಪ್ಪ ನವರು ಈ ರೀತಿಯ ಕೊಟ್ಟ ಮಾತನ್ನ ತಪ್ಪುವುದು ಜೆ.ಡಿ.ಎಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ಹಿಂದೆ ಹಲವು ಬಾರಿ ನೀವುಗಳು ಮಾತಿಗೆ ತಪ್ಪಿದ್ದರೂ ಸಹ ರಾಜಕೀಯ ವ್ಯವಸ್ಥೆಯಲ್ಲಿ ತಪ್ಪುಗಳನ್ನ ತಿದ್ದುಕ್ಕೊಂಡು ಮುಂದೆ ಹೋಗಬಹುದು ಎಂದು ನಂಬಿ ವಿಶ್ವಾಸದಿಂದ ನಾವು ಒಬ್ಬ ದಲಿತನನ್ನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶನ ಮಾಡಲು ಅತ್ಯಂತ ಕಾತುರದಿಂದ ಇದ್ದೆವು. ಆದರೆ ಅದಕ್ಕೆ ನೀವು ಅವಕಾಶ ಮಾಡಿಕೊಡದೇ ಇದ್ದದ್ದು, ನಿಮ್ಮ ದಲಿತ ವಿರೋಧಿ ದೋರಣೆಯನ್ನ ತೋರಿಸುತ್ತದೆ.

 

 

 

 

 

ಈ ಹಿಂದೆಯೂ ಸಹ ನನ್ನ ಅವಧಿಯಲ್ಲಿಯೂ ಸುಗಮವಾಗಿ ಆಡಳಿತ ಮಾಡಲು ಯಾವತ್ತೂ ತಡೆಯಾಗುತ್ತಿದ್ದೀರಿ, ನಿಮ್ಮ ಈ ದಲಿತ ವಿರೋಧಿ ನೀತಿಗೆ ಧಿಕ್ಕಾರವಿರಲಿ ಎಂದು ಗುಡುಗಿದರು. ನಂತರ ಬಾವಿಗಿಳಿದ ಬಿಜೆಪಿ ಸದಸ್ಯರು ವಚನ ಭ್ರಷ್ಟ ಜೆ.ಡಿ.ಎಸ್‌ಗೆ ಧಿಕ್ಕಾರ, ಮಾತು ತಪ್ಪಿದ ಜೆ.ಡಿ.ಎಸ್‌ಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗೂತ್ತಾ ತುಮಕೂರು ಮಹಾನಗರಪಾಲಿಕೆಯ ಸಭೆಯನ್ನ ಬಹಿಷ್ಕರಿಸಿದರು.

Leave a Reply

Your email address will not be published. Required fields are marked *

error: Content is protected !!