ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿಯಬೇಕು ಎಂಬ ಪರಿಕಲ್ಪನೆ ನಮ್ಮದು : ಜೆ.ಕುಮಾರ್

ತುಮಕೂರು : ತುಮಕೂರು ಮಹಾನಗರಪಾಲಿಕೆಯಿಂದ ನಗರದ 35 ವಾರ್ಡುಗಳಲ್ಲಿಯೂ ನಾಮಫಲಕ ಅಳವಡಿಸುವ ಕಾರ್ಯ ನಡೆಯುತಿದ್ದು ಎಲ್ಲಾ ವಾರ್ಡುಗಳಲ್ಲಿಯೂ ಅಯಾ ವಾರ್ಡಿನ ಸದಸ್ಯರ ಹೆಸರು ಮತ್ತು ಶಾಸಕರ ಹೆಸರು ನಾಮಫಲಕದಲ್ಲಿ ಅಳವಡಿಸಿಲಾಗುತ್ತಿದೆ.

 

 

ತುಮಕೂರು ನಗರದ 7ನೇ ವಾರ್ಡಿನ ಸದಸ್ಯ ಜೆ.ಕುಮಾರ್ ಸಂವಿಧಾನದ ಪ್ರಾಸ್ತಾವನೆಯ ಸಾಲುಗಳನ್ನು ಬರೆಯಿಸುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಈ ಕಾರ್ಯದಿಂದ ಪ್ರತಿಯೊಬ್ಬ ನಾಗರೀಕರೂ ಸಹ ಸಂವಿಧಾನವನ್ನು ಓದುವ ಮತ್ತು ತಿಳಿದುಕೊಳ್ಳುವುದರ ಮೂಲಕ ಸಂವಿಧಾನವನ್ನು ಅರ್ಥೈಸಿಕೊಳ್ಳುವ ಪರಿಕಲ್ಪನೆಯನ್ನು ಮಾಡಿಕೊಳ್ಳುವ ಸದುದ್ದೇಶ ನಮ್ಮದು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಜೆ.ಕುಮಾರ್‌ರವರು ತಿಳಿಸಿದ್ದಾರೆ.

 

 

ಮಹಾನಗರ ಪಾಲಿಕೆಯ ಅನುದಾನದಲ್ಲಿ ಸುಮಾರು 5 ಕೋಟಿ ರೂಗಳ ವೆಚ್ಚದಲ್ಲಿ ನಗರದ 35 ವಾರ್ಡುಗಳ ಪ್ರತಿ ತಿರುವು, ರಸ್ತೆಗಳಿಗೆ ನಾಮಫಲಕ ಅಳವಡಿಸುವ ಕಾರ್ಯ ಚಾಲ್ತಿಯಲ್ಲಿದೆ. ಈ ಎಲ್ಲಾ ವಾರ್ಡುಗಳಲ್ಲಿಯೂ ಹಾಲಿ ಶಾಸಕರು, ಹಾಲಿ ಪಾಲಿಕೆಯ ಸದಸ್ಯರ ಹೆಸರಿನ ಜೊತೆಗೆ, ಬಡಾವಣೆಯ ಹೆಸರು, ಕ್ರಾಸ್ ಹೆಸರು ನಮೂದಿಸಲಾಗಿದೆ. ಅದರೊಂದಿಗೆ ಸಂವಿಧಾನ ಪೀಠಿಕೆಯ ಒಂದೊಂದು ಸಾಲುಗಳನ್ನು ಉಲ್ಲೇಖಿಸುವ ಮೂಲಕ ಬಡಾವಣೆಯ ಜನರಿಗೆ, ಅದರಲ್ಲಿಯೂ ಯುವಕರಿಗೆ ಸಂವಿಧಾನದ ಆಶಯಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ.

 

 

ಈ ಕುರಿತು ಮಾತನಾಡಿದ ಪಾಲಿಕೆ 7ನೇ ವಾರ್ಡಿನ ಸದಸ್ಯ ಧರ್ಮ, ಭಾಷೆಯ ಹೆಸರಿನಲ್ಲಿ ಅನಗತ್ಯ ಚರ್ಚೆಯಲ್ಲಿ ತೊಡಗಿದ್ದಾರೆ. ಯಾವ ವಿಚಾರಗಳು ಯುವಜನರಲ್ಲಿ ಸಾಮರಸ್ಯ, ಬಾತೃತ್ವ, ಸಹೋದರತೆ, ಪ್ರೀತಿ, ಕರುಣೆ ಮೂಡಿಸಬೇಕಾಗಿದ್ದವು, ಅವುಗಳಿಗೆ ಹೊರತಾಗಿ, ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ಮಾಸಿಕ ನೆಮ್ಮದಿಯ ಜೊತೆಗೆ ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಅಲ್ಲದೆ ರಾಜಕಾರಣಿಗಳು ಇಂದು ಇದ್ದವರು ನಾಳೆ ಇರುವುದಿಲ್ಲ. ಆದರೆ ಸೂರ್ಯಚಂದ್ರರಿರುವವರೆಗು ಮಹಾನ್‌ ನಾಯಕಾರುಗಳ ಹೆಸರುಗಳು  ಅದರಲ್ಲಿಯೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ರವರ ಹೆಸರು ಶಾಶ್ವತವಾಗಿ ಉಳಿಯಬೇಕು. ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ, ಜಾತ್ಯಾತೀತತೆ, ಭಾತೃತ್ವ ಉಳಿಯಬೇಕೆಂಬ ಉದ್ದೇಶದಿಂದ ಯುವಜನರನ್ನು ಗಮನದಲ್ಲಿಟ್ಟುಕೊಂಡು ನಾಮಫಲಕದಲ್ಲಿ ಸಂವಿಧಾನದ ಪೀಠಿಕೆಯನ್ನು ಅಳವಡಿಸಲಾಗಿದೆ ಎಂದು ಹೇಳಿದರು.

 

ಈ ದೇಶದ ಐಕ್ಯತೆ ಮತ್ತು ಸಾರ್ವಬೌಮತ್ವವನ್ನು ಎತ್ತಿ ಹಿಡಿಯುವಲ್ಲಿ ನನ್ನ ಸಣ್ಣ ಪ್ರಯತ್ನ ಇದು ಎಂದರು.

Leave a Reply

Your email address will not be published. Required fields are marked *

error: Content is protected !!