ಹೆಬ್ಬರು- ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಹೆಬ್ಬರು ಹುಲಿ ಎಂಬ ನಾಮಾಂಕಿತವಾದ ಗ್ರಾಮದಲ್ಲಿ 108 ದೇವಸ್ಥಾನ ಹಾಗೂ 108 ಕಲ್ಯಾಣಿಗಳನ್ನು ಒಳಗೊಂಡ ಹೆಬ್ಬೂರು ಗ್ರಾಮವಾಗಿ ಇಂದು ಆರನೇ ತರಗತಿಯಲ್ಲಿ ಪಠ್ಯ ಪುಸ್ತಕದಲ್ಲಿ ಸೇರಿದೆ.
ಅದರಲ್ಲೂ ಹೆಬ್ಬೂರು ಅತಿ ಹೆಚ್ಚು ಪಂಚಾಯತಿಗಳನ್ನು ಒಳಗೊಂಡಿದ್ದು 2023ರಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆದರೆ, ನಾನು ಈ ಭಾಗದ ಸಚಿವ ನಾಗುತ್ತೀನಿ. ಆ ಸಂದರ್ಭದಲ್ಲಿ ನನ್ನ ಮೊದಲನೇ ಕೆಲಸ ಹೆಬ್ಬುರನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡುವುದಾಗಿ ಶಾಸಕ ಗೌರಿಶಂಕರ್ ಭರವಸೆ ನೀಡಿದರು.
ಶುಕ್ರವಾರ ರಾತ್ರಿ ಹೆಬ್ಬುರಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭರವಸೆಯನ್ನು ನೀಡಿ ಸುಮಾರು ವರ್ಷಗಳಿಂದ ಬಹುಕಾಲದ ಬೇಡಿಕೆಯಾಗಿದ್ದ ನೂತನ ನಾಡಕಚೇರಿಯಕಟ್ಟಡಕ್ಕೆ ಸುಮಾರು 18 ಲಕ್ಷದ 80,000 ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಉಚಿತ ವೀಲ್ ಚೇರ್. ಕಟ್ಟಡ ಕಾರ್ಮಿಕರಿಗೆ ಹಾಗೂ ಕಾರ್ಪೆಂಟರ್ ಕಿಟ್ಟುಗಳು, ವೈಯಕ್ತಿಕ ಹಣದಿಂದ ನೀಡಿದರು.
ಈ ಸಂದರ್ಭದಲ್ಲಿ ಬಜರಂಗದಳದಿಂದ ಹಲವಾರು ಕಾರ್ಯಕರ್ತರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಈ ವೇಳೆ ಚಿಕ್ಕಣ್ಣ ಸ್ವಾಮಿ ಧರ್ಮದರ್ಶಿ ಪಾಪಣ್ಣ, ರಾಜಣ್ಣ, ಗೊಲ್ಲಳ್ಳಿರಾಜೇಶ್, ನಾಗವಲ್ಲಿ ದೀಪು, ಬೆಲಗುಂಬ ಹರೀಶ್, ನಾಗವಲ್ಲಿ ರಾಮಣ್ಣ, ಎತ್ತಿನಹಳಿ ಮಂಜಣ್ಣ, ಬೆಳಗುಂಬ ವೆಂಕಟೇಶ್, ಹಲವಾರು ಜೆಡಿಎಸ್ ಕಾರ್ಯಕರ್ತರುಗಳು ಹಾಜರಿದ್ದರು.