ತುಮಕೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬವನ್ನು ಜಿಲ್ಲಾ ಜೆಡಿಎಸ್ ಕಾರ್ಯಾಲಯದ ಆವರಣದಲ್ಲಿ ಇದೇ ಡಿಸೆಂಬರ್ 16 ಶುಕ್ರವಾರದಂದು ಆಚರಿಸಲಾಯಿತು.
ಹುಟ್ಟು ಹಬ್ಬ ಕಾರ್ಯಕ್ರಮದ ನಂತರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಎನ್.ಗೋವಿಂದರಾಜು ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಅದೂ ನಡೆದಿರುವುದು ಜೆಡಿಎಸ್ ಪಕ್ಷದ ಕಛೇರಿಯಲ್ಲಿಯೇ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಪಂಚರತ್ನ ಯಾತ್ರೆಯು ತುಮಕೂರು ನಗರಕ್ಕೆ ಆಗಮಿಸಿ ನಿರ್ಗಮಿಸಿದ ನಂತರ ಜೆಡಿಎಸ್ ಹಿರಿಯ ಮುಖಂಡರಾದ ಬಿ.ನರಸೇಗೌಡರವರ ಮನೆಗೆ ಆಗಮಿಸಿದ್ದ ಸಂದರ್ಭದಲ್ಲಿ ಗೋವಿಂದರಾಜು ಅವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಜೆಡಿಎಸ್ ಹಿರಿಯ ಮುಖಂಡ ನರಸೇಗೌಡ ಮನೆಗೆ ಭೇಟಿ ನೀಡಿದಾಗಲೇ ಕುಮಾರಸ್ವಾಮಿ ಅವರು ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ತಾಕೀತು ಮಾಡಿದ್ದರು ಸಹ ಗೋವಿಂದರಾಜು ಅವರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ, ಅನ್ಯ ಪಕ್ಷದ ಮುಖಂಡರು ಕಾರ್ಯಕರ್ತರ ಮಾತಿಗೆ ಮಣೆ ಹಾಕುತ್ತಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಇದರ ಬೆನ್ನಲ್ಲೇ ಗೋವಿಂದರಾಜು ಅವರು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೇವಲ ಅವರ ಆತ್ಮೀಯರು ಹಾಗೂ ಅವರಿಗೆ ಮಾತ್ರ ಜೈಕಾರ (ಪಕ್ಷಕ್ಕೆ ಜೈಕಾರ ಹಾಕುವವರನ್ನು ಹೊರತುಪಡಿಸಿ) ಹಾಕುವವರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಪಕ್ಷದಲ್ಲಿ ಭುಗಿಲೆದ್ದಿದೆ.
ಅದೂ ಅಲ್ಲದೇ ಕುಮಾರಸ್ವಾಮಿಯವರ ಹುಟ್ಟು ಹಬ್ಬವನ್ನು ಆಚರಿಸಲು ಸಹ ಗೋವಿಂದರಾಜುರವರು ಮೀನಾಮೇಷ ಎಣಿಸಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಮೂಲ ಕಾರಣವಾಗಿದೆ ಎನ್ನಲಾಗಿದೆ.
ಪಕ್ಷದ ಕಚೇರಿಯಲ್ಲಿ ಹೆಚ್ಚಿಕೆ ಹುಟ್ಟುಹಬ್ಬ ಆಚರಣೆ ನಂತರ ದಾನಪ್ಯಾಲೇಸ್ ಬಳಿ ಗೋವಿಂದರಾಜು ಅವರು ಪ್ರತ್ಯೇಕವಾಗಿ ಅಲ್ಪ ಸಂಖ್ಯಾತ ಮುಖಂಡರೊಂದಿಗೆ ಹುಟ್ಟು ಹಬ್ಬ ಆಚರಣೆ ಆಯೋಜಿಸಿದ್ದರು, ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಸೋಲಾರ್ ಕೃಷ್ಣಮೂರ್ತಿ ಸೇರಿದಂತೆ ಕೆಲವರನ್ನು ಮಾತ್ರ ಪಕ್ಷದ ಕಚೇರಿಯಿಂದ ದಾನಪ್ಯಾಲೇಸ್ ಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಗಂಭೀರ ಆರೋಪವೂ ಸಹ ತಡವಾಗಿ ಕೇಳಿಬಂದಿದೆ.
ಪಕ್ಷದ ಕಚೇರಿಯಲ್ಲಿ ಇದ್ದ ಹಿರಿಯ ಮುಖಂಡ ನರಸೇಗೌಡ ಅವರನ್ನು ಕರೆಯದೇ, ಉಳಿದ ಕಾರ್ಯಕರ್ತರು, ಮುಖಂಡರಿಗೆ ಮಾಹಿತಿ ನೀಡದೇ ತರಾತುರಿಯಲ್ಲಿ ಹೊರಟ ಗೋವಿಂದರಾಜು ಅಂಡ್ ಟೀಮ್ ಮೇಲೆ ಮೂಲ ಜೆಡಿಎಸ್ ಕಾರ್ಯಕರ್ತರು ಹಾಗೂ ನಿಷ್ಠಾವಂತ ಜೆಡಿಎಸ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
ಜೊತೆಗೆ ಧಾನ್ಹ ಪ್ಯಾಲೇಸ್‌ನ ಹತ್ತಿರ ಕಾರ್ಯಕ್ರಮ ಮುಗಿಸಿಕೊಂಡು ಬಂದ ನಂತರ ಪಕ್ಷದ ಕಚೇರಿಯಲ್ಲಿ ಗೋವಿಂದರಾಜು ಮೇಲೆ ಕಾರ್ಯಕರ್ತರು ಹಾಗೂ ಮುಖಂಡರು ಮುಗಿಬಿದ್ದಿದ್ದಾರೆ.
ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗದಿದ್ದರೆ ಈ ಬಾರಿಯೂ ಸೋಲುತ್ತೀಯಾ, ಪಕ್ಷವನ್ನು ಹಾಳು ಮಾಡಲು ಚುನಾವಣೆ ಸಮಯಕ್ಕೆ ಬರ್ತೀಯಾ, ಹೀಗೆ ಮುಂದುವರೆದರೆ ಸರಿ ಇರೋದಿಲ್ಲ, ಕುಮಾರಣ್ಣನ ಮಾತಿಗೆ ಬೆಲೆ ಕೊಡುವುದಿಲ್ಲ ಎಂದ ಮೇಲೆ ನಿನ್ನನ್ನು ಏಕೆ ಬೆಂಬಲಿಸಬೇಕು ಎಂದು ಏರಿದ ಧ್ವನಿಯಲ್ಲಿಯೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಇನ್ನು ಗೋವಿಂದರಾಜು ಎಲ್ಲರನ್ನೂ ಯಾವ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ನಿಭಾಯಿಸುತ್ತಾರೋ, ಚುನಾವಣೆಗೆ ಇನ್ನು 05 ತಿಂಗಳು ಬಾಕಿ ಇರಬೇಕಾಗಿರುವಾಗಲೇ ಇಷ್ಟೇಲ್ಲಾ ಆವಂತರಗಳನ್ನು ಮಾಡಿಕೊಳ್ಳುತ್ತಿರುವ ವ್ಯಕ್ತಿ ಚುನಾವಣಾ ಸಮಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಮಾತನಾಡಿಸುತ್ತಾರಾ ಎಂಬ ಸಂಶಯಗಳು ಸಹ ಪಕ್ಷದಲ್ಲಿ ಮೂಡಿದೆ.
ಅಷ್ಟೇ ಅಲ್ಲದೇ ಪಕ್ಷದಲ್ಲಿರುವ ಕಾರ್ಯಕರ್ತರನ್ನೇ ಒಲೈಸದ ವ್ಯಕ್ತಿ ಇನ್ನು ಚುನಾವಣೆಯಲ್ಲಿ ಗೆದ್ದು ಜನ ಸಮಾನ್ಯರನ್ನು ಎಷ್ಟು ಮಾತ್ರ ಒಲೈಸುತ್ತಾನೆಂಬ ಕೂಗೂಗಳು ಸಹ ಜನರಲ್ಲಿ ಮೂಡಿದೆ. ಯಾವುದಕ್ಕೂ ಮಾನ್ಯ ಗೋವಿಂದರಾಜುರವರು ಮುಂದಿನ ದಿನಗಳಲ್ಲಾದರೂ ಯಾರೋ ಒಂದಿಬ್ಬರಿಗೆ ಮಣೆ ಹಾಕದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ.