ತುಮಕೂರು : ಸಮಾಜದಲ್ಲಿ ಕೈ ಕಾಲು ಕಿವಿ ಮೂಗು ಸರಿ ಇರುವಂತ ಮನುಷ್ಯ ದುಡಿದು ಜೀವಿಸಲು ಪರಿತಪಿಸುವಂತಹ ಕಾಲಘಟ್ಟದಲ್ಲಿ ವಿಕಲಂಗರು ಮತ್ತು ವಿಶೇಷ ಚೇತನರ ಕಥೆ ಹೇಳುತ್ತಿರದಾಗಿದ್ದು ಹಿನ್ನೆಲೆಯಲ್ಲಿ ಸೇವಾ ಮನೋಭಾವವುಳ್ಳ ಸಂಘ ಸಂಸ್ಥೆಗಳು ಇತರೆ ಆಶ್ರಯದಲ್ಲಿರುವ ವಿಕಲಾಂಗರು ಮತ್ತು ವಿಶೇಷ ಚೇತನರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಸಹಕಾರ ನೀಡುವಂತಾಗಬೇಕು ಎಂದು ತುಮಕೂರು ಜಿಲ್ಲೆಯ ಮಹೇಂದ್ರ ಫೈನಾನ್ಸ್‌ನ ಮ್ಯಾನೇಜರ್ ಚಂದ್ರಶೇಖರ್ ಅವರು ತಿಳಿಸಿದರು.
ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದ ಅಂಗವಿಕಲರ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಚಿರಂತನ ವಿಕಲಾಂಗ ಸಹಾಯ ಸಂಸ್ಥೆಯ ಕಚೇರಿಗೆ ಸ್ವಚ್ಛ ಭಾರತದ ಅಭಿಯಾನದಡಿಯಲ್ಲಿ ವಿಕಲಾಂಗರಿಗೆ ಪೂರಕವಾಗುವಂತೆ ಶೌಚಾಲಯ ಮತ್ತು ಸಂಸ್ಥೆಯ ಕಟ್ಟಡದ ಫೈಟಿಂಗ್ ಕೈಗೊಳ್ಳಲು ಧನ ಸಹಾಯವನ್ನು ನೀಡಿ ನಂತರ ಮಾತನಾಡಿದ ಚಂದ್ರಶೇಖರ್ ಚಿರಂತನ ವಿಕಲಾಂಗ ಸಂಸ್ಥೆ ಕೈ ಕಾಲು ಕಿವಿ ಮೂಗು ಸೇರಿದಂತೆ ದೈಹಿಕ ವಿಕಲಾಂಗರ ಸೇವೆ ಮಾಡುತ್ತಾ ಬಂದಿದ್ದು ಹಿನ್ನೆಲೆಯಲ್ಲಿ ನಮ್ಮ ಮಹೇಂದ್ರ ಫೈನಾನ್ಸ್ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯ ನಿಧಿಯಲ್ಲಿ (ಸಿಎಸ್ ಆರ್) ಮೀಸಲಿಸಲಾಗಿದ್ದ ಹಣದಲ್ಲಿ ಸಹಾಯವನ್ನು ಮಾಡುತ್ತಿದ್ದು ಇಂತಹ ಇತರೆ ವೃದ್ಧಾಶ್ರಮ ಅಂಗವಿಕಲ ಸಂಸ್ಥೆಗಳಿಗೆ ಸಹಾಯ ಮಾಡುತ್ತಾ ಬಂದಿದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಮನುಷ್ಯನು ಸಮಾಜದಲ್ಲಿ ದೈಹಿಕ ವಿಕಲಾಂಗತೆ ಇರುವವರಿಗೆ ಸಹಾಯ ಮಾಡುವುದು ತಮ್ಮ ಕರ್ತವ್ಯವೆಂದು ಭಾವಿಸಿ ಸಹಾಯ ಮಾಡಬೇಕು ಸಮಾಜದಲ್ಲಿ ನ್ಯೂನ್ಯತೆಯಿಂದ ಬಳಲುವವರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಬೇಕು ಎಂದು ಅವರು ಹೇಳಿ ಕರೆ ನೀಡಿದರು.
ಚಿರಂತನ ಅಂಗವಿಕಲರ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಶಿಕ್ಷಕ ಶ್ರೀನಿವಾಸ್ ಅವರು ಮಾತನಾಡಿ ವಿಕಲಾಂಗರನ್ನು ಮುಖ್ಯ ವಾಹಿನಿಗೆ ತರಲು ನಾವು ಅನೇಕ ಯೋಜನೆಗಳನ್ನು ಸರ್ಕಾರದಡಿಯಲ್ಲಿ ಬಳಸಿಕೊಂಡಿದ್ದು ಅಂಗವಿಕಲರಿಗೆ ಸಹಕಾರ ಕಲ್ಪಿಸುವ ಸಲುವಾಗಿ ಮಹೇಂದ್ರ ಫೈನಾನ್ಸ್ ಸಂಸ್ಥೆಯು ಧನಸಹಾಯ ಮಾಡಿರುವುದು ಶ್ಲಾಘನೀಯವಾಗಿದ್ದು ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಮಹೇಂದ್ರ ಫೈನಾನ್ಸ್‌ನ ಚಂದ್ರಶೇಖರ್ ಕಾರ್ತಿಕೇಯನ್ ಚೇತನ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ನಿರಂತರ ಅಂಗವಿಕಲ ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.