ತುಮಕೂರು_ಜೆಡಿಎಸ್ ಪಕ್ಷದ ವತಿಯಿಂದ ರಾಜ್ಯದ್ಯಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥ ಯಾತ್ರೆಯು ವಿಶಿಷ್ಠ ಪಂಚ ಯೋಜನೆಗಳ ಕುರಿತು ರಾಜ್ಯದ ಜನತೆಗೆ ತಲುಪಿಸುವ ಹಿನ್ನೆಲೆಯಲ್ಲಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಇದರ ಭಾಗವಾಗಿ ಇಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಪಂಚರತ್ನ ಯಾತ್ರೆ ಸಾಗುತ್ತಿದೆ. ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಪಂಚ ರತ್ನ ಯಾತ್ರೆ ಸಾಗುವ ಎಲ್ಲಾ ಕ್ಷೇತ್ರದಲ್ಲೂ ವಿಭಿನ್ನ ಹಾರಗಳನ್ನ ಕುಮಾರಸ್ವಾಮಿಯವರಿಗೆ ಹಾಕುವ ಮೂಲಕ ಪಕ್ಷದ ಕಾರ್ಯಕರ್ತರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿರುವುದು ಒಂದೆಡೆಯಾದರೆ.
ತುಮಕೂರು ಜಿಲ್ಲೆ ಕಂಚಿಗಾನ ಹಳ್ಳಿಯ ಗ್ರಾಮದ ಗ್ರಾಮಸ್ಥರು ಮುಖ್ಯಮಂತ್ರಿ ಕುಮಾರಸ್ವಾಮಿ ರವರಿಗೆ ಶಾಲಾ ವಿದ್ಯಾರ್ಥಿಗಳು ಬಳಸುವ ಸ್ಕೂಲ್ ಬ್ಯಾಗ್ ಹಾರ ವನ್ನು ಕಂಚಿಗಾನಹಳ್ಳಿ ಗ್ರಾಮಸ್ಥರು ಹಾಗೂ ಜೆಡಿಎಸ್ ಕಾರ್ಯಕರ್ತರು ಬಡವರ ಮಕ್ಕಳಿಗೂ ಕಾನ್ವೆಂಟ್ ಶಿಕ್ಷಣ ಬೇಕೆನ್ನುವ ಘೋಷ ವಾಕ್ಯದೊಂದಿಗೆ ಸ್ಕೂಲ್ ಬ್ಯಾಗ್ ಹಾರ ತಯಾರಿಸಿ ಗ್ರಾಮೀಣ ಭಾಗದ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಒತ್ತಾಯವನ್ನ ಹಾರದ ಮೂಲಕ ಕುಮಾರಸ್ವಾಮಿ ಅವರ ಗಮನವನ್ನು ಸೆಳಯಲು ವಿನೂತನ ಪ್ರಯತ್ನ ಮಾಡುವ ಮೂಲಕ ರಾಜ್ಯದ ಗಮನವನ್ನು ಸಿರಾ ತಾಲೂಕಿನ ಕಂಚಿಗಾನಹಳ್ಳಿ ಗ್ರಾಮಸ್ಥರು ಮಾಡಿದ್ದಾರೆ.