ತುಮಕೂರಿಗೆ _ಮುಂಬರುವ 2023ರ ಚುನಾವಣೆ ಸಂಬಂಧ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕ ಆಗುವುದು ಖಚಿತ ಎಂದು ಜೆಡಿಎಸ್ ಮುಖಂಡ ಬೊಮ್ಮನಹಳ್ಳಿ ಬಾಬು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಟ್ಟಿಕಾ ಬಾಬು ಅವರು ನಾನು ಜೆಡಿಎಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು ಮುಂಬರುವ ಚುನಾವಣೆಯಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವುದು ಪಕ್ಕಾ ಎಂದಿದ್ದಾರೆ.
ಜನರ ಸೇವೆ ಮಾಡಬೇಕು ಎಂದು ನಿರ್ಧರಿಸಿರುವ ನನಗೆ ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ರವರೆ ಆಶೀರ್ವದಿಸಿ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಕಳಿಸಿದ್ದು ಸದ್ಯಕ್ಕೆ ಕ್ಷೇತ್ರದಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿದ್ದು ಮುಂದಿನ ದಿನದಲ್ಲಿ ಎಲ್ಲವೂ ಬಗೆಹರಿಯಲಿದೆ ಮುಂಬರುವ ದಿನದಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಯಾಗುವುದು ಖಚಿತ ಎಂದಿದ್ದಾರೆ.
ಇತ್ತೀಚಿಗೆ ತುಮಕೂರು ನಗರದಲ್ಲಿ ನಡೆದ ಪಂಚರತ್ನ ಯಾತ್ರೆಗೆ ಸಂಬಂಧಿಸಿದಂತೆ ನಾನು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದುಕೊಂಡಿದ್ದೆ ಆದರೆ ಎರಡು ಬಾರಿ ಶಾಸಕರ ಸ್ಥಾನಕ್ಕೆ ನಿಂತು ಸೋತಿರುವ ಅಭ್ಯರ್ಥಿ ಗೋವಿಂದರಾಜುಗೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕಾಗಿ ನಾನು ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿರಲಿಲ್ಲ ಎಂದರು.
ಇನ್ನು ಕಳೆದ ಬಾರಿಯ ಪಂಚರತ್ನ ಯಾತ್ರೆಯ ವೇಳೆ ಸ್ವತಃ ಗೋವಿಂದರಾಜು ರವರೇ ನನ್ನ ಭಾವಚಿತ್ರಗಳನ್ನು ಬಳಸಿ ಪ್ಲೆಕ್ಸ್ ಗಳಲ್ಲಿ ಅಳವಡಿಸಿದ ಮೇಲೆ ನಾವು ಸಹ ಕ್ಷೇತ್ರದಲ್ಲಿ ಇದ್ದಂತೆ ಎಂದರು.
ತಾವು ತುಮಕೂರು ಕ್ಷೇತ್ರಕ್ಕೆ ಜನರ ಸೇವೆ ಮಾಡಲು ಬಯಸಿದ್ದು ಪಕ್ಷದ ಮುಖಂಡರಿಗೆ ಮುಜುಗರ ಆಗಬಾರದು ಎಂದು ಪಂಚರತ್ನ ಯಾತ್ರೆಯಿಂದ ದೂರ ಉಳಿದಿದ್ದೆ ಎಂದಿದ್ದಾರೆ.
ಮುಂಬರುವ ಚುನಾವಣೆಗೆ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲುವುದು ಶತಸಿದ್ಧ ಚುನಾವಣೆ ಸಂಬಂಧ ತಮ್ಮದೇ ಆದ ಸ್ಟ್ರಾಟಜಿ ಬಳಸಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದ ಅವರು ಇನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಸಹ ತಮಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ತಮ್ಮನ ಭೇಟಿ ಮಾಡಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಯನ್ನು ಅವರು ನಯವಾಗಿ ತಿರಸ್ಕರಿಸಿದ್ದು ಜೆಡಿಎಸ್ ಪಕ್ಷದಿಂದ ತಾವು ಸ್ಪರ್ಧಿಸುವುದು ಖಚಿತ ಎಂದರು.
ನಾವು ತುಮಕೂರಿಗೆ ಆಗಮಿಸಿದ ದಿನದಂದು ಕಾಂಗ್ರೆಸ್ ಹಿರಿಯ ಮುಖಂಡರಾದ ಶಫಿ ಅಹಮದ್ ರವರ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದವರು ಇನ್ನು ತಾವು ತುಮಕೂರಿನ ಜನತೆಯ ಮನಸ್ಸನ್ನು ಗೆಲ್ಲುವ ಸಲುವಾಗಿ ಬಂದಿದ್ದು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದು ಪಕ್ಕ ಎಂದಿದ್ದಾರೆ.
ಇನ್ನುಳಿದಂತೆ ಇತ್ತೀಚೆಗೆ ಮಾದ್ಯಮಗಳಲ್ಲಿ ಪ್ರಸಾರವಾಗಿದ್ದ ನನ್ನ ಬಂಧನ ಮತ್ತು ನನಗೆ ಎರಡನೇ ಪತ್ನಿಯಿರುವುದಾಗಿ, ಇವೆಲ್ಲವೂ ಸತ್ಯಕ್ಕೆ ದೂರವಾದ ಮಾತು, ನನಗೆ ಒಬ್ಬಳೇ ಪತ್ನಿ ಇರುವುದು ಎಂದು ಖಚಿತ ಪಡಿಸಿದರು. ಜೊತೆಗೆ ನನ್ನನ್ನು ಯಾವ ಪೊಲೀಸರು ಸಹ ಬಂಧಿಸಿರಲಿಲ್ಲ, ಬದಲಾಗಿ ನನ್ನನ್ನು ವಿಚಾರಣೆಗಾಗಿ ಮಾತ್ರ ಕರೆದುಕೊಂಡು ಹೋಗಿದ್ದರು ಎಂದು ಸ್ಪಷ್ಟನೆಯನ್ನು ನೀಡಿದರು.
ಒಟ್ಟಾರೆಯಾಗಿ ತುಮಕೂರು ನಗರಕ್ಕೆ ಒಂದೊಳ್ಳೆ ಕೆಲಸಗಳನ್ನು ಮಾಡುವುದರ ಸಲುವಾಗಿ ನಾನು ಸ್ಪರ್ಧಿಸಲು ಇಚ್ಛಿಸಿದ್ದು, ಪ್ರತಿಯೊಬ್ಬರ ಆಶೀರ್ವಾದವು ನನಗೆ ಬೇಕಾಗಿದೆ ಎಂದರು, ನನಗೆ ಸಾಕಾದಷ್ಟು ಹಣವಿದೆ, ನನಗೆ ಹಣ ಬೇಕಿಲ್ಲ, ಒಂದೊಳ್ಳೆ ಕೆಲಸಗಳು ನನ್ನಿಂದ ಜನರಿಗೆ ಆದರೆ ಸಾಕು ಹಾಗೂ ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಸಿಗಬೇಕು ಎನ್ನುವುದೇ ನನ್ನ ಮಹದಾಸೆ ಎಂದು ಹೇಳಿದರು.