ಬಡವರ ಆರೋಗ್ಯ ರಕ್ಷಾ ಈ ಯಶಸ್ವಿನಿ ಆರೋಗ್ಯ ಯೋಜನೆ : ಕೆ.ಎನ್.ರಾಜಣ್ಣ

ತುಮಕೂರು ನಗರದ ಡಿ.ಸಿ.ಸಿ. ಬ್ಯಾಂಕ್‌ ಕಛೇರಿ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸರ್ಕಾರ ಮತ್ತೊಮ್ಮೆ ಕಾರ್ಯಗತಕ್ಕೆ ತಂದಿರುವುದು ತುಂಬಾ ಸಂತೋಷಕರವಾದ ವಿಷಯ ಇದರಿಂದ ರಾಜ್ಯದ ಬಹುತೇಕ ಬಡ ಜನರಿಗೆ, ರೈತಾಪಿ ವರ್ಗದವರಿಗೆ ಇದು ಬಹಳಷ್ಟು ಅನುಕೂಲಕರವಾಗಲಿದೆಂದು ತಿಳಿಸಿದರು.

ಈ ಯಶಸ್ವಿನಿ ಯೋಜನೆಯ ಬಗ್ಗೆ ಈ ಹಿಂದೆ ತುಮಕೂರು ನಗರದಲ್ಲಿ ನಡೆಸಿದ ಸಹಕಾರ ಸಾಪ್ತಾಹದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಸೋಮಣ್ಣ, ಎಸ್.ಟಿ.ಸೋಮಶೇಖರ್‌ ಸೇರಿದಂತೆ ಹಲವಾರು ಮಂತ್ರಿವರ್ಗದವರಿಗೆ ನಾವುಗಳು ಅಹ್ವಾಲನ್ನು ಸಲ್ಲಿಸಿದ್ದು, ಅದರ ಪ್ರತಿಫಲವಾಗಿ ಇದೀಗ ಸರ್ಕಾರ ಬಡವರ ಆರೋಗ್ಯ ಯೋಜನೆಯಾದ “ಯಶಸ್ವಿನಿ” ಆರೋಗ್ಯ ಯೋಜನೆಯನ್ನು ಮತ್ತೊಮ್ಮೆ ಚಾಲ್ತಿಗೆ ತಂದಿರುತ್ತದೆಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

 

ಈ ಯೋಜನೆಯು ಮುಂಬರುವ 01-01-2023 ರಿಂದ ಜಾರಿಗೊಳ್ಳಲಿದ್ದು, ಈ ಯೋಜನೆಯಡಿಯಲ್ಲಿ ಸಹಕಾರ ಸಂಘಗಳಲ್ಲಿ ನೋಂದಾಯಿತರಾದ ಸದಸ್ಯರು, ಷೇರುದಾರರು ಈ ಯೋಜನೆಯ ಸದುಪಯೋಗವನ್ನು ಪಡಸಿಕೊಳ್ಳಬಹುದಾಗಿದೆಂದು ಹೇಳಿದರು, ಇದರೊಂದಿಗೆ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡದ ಜನರು ಯಾವುದೇ ರೀತಿಯಾದ ನೋಂದಣಿ ಶುಲ್ಕವನ್ನು ಪಾವತಿಸುವಂತಿಲ್ಲ, ಇನ್ನುಳಿದಂತಹವರು ರೂ. 500ಗಳನ್ನು ಪಾವತಿಸಿ ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆಂದರು.

 

ಇನ್ನುಳಿದಂತೆ ಯಶಸ್ವಿನಿ ಯೋಜನೆಯಡಿಯಲ್ಲಿ ನೋಂದಾಯಿತ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ 1650 ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಪ್ರತೀ ಕುಟುಂಬಕ್ಕೆ ರೂ. 5.00 ಲಕ್ಷಗಳವರೆಗೆ ಆರೋಗ್ಯ ವಿಮಾ ಸೌಲಭ್ಯವನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳುವಂತೆ ಮನವಿಯನ್ನು ಮಾಡಿದರು. ಈ ಯೋಜನೆಯಡಿಯಲ್ಲಿ ವಾರ್ಷಿಕ ವಂತಿಗೆ ಪಾವತಿಗೆ ವಿನಾಯಿತಿಯು ಪರಿಶಿಷ್ಠ ಜಾತಿ / ಪಂಗಡದ ಸದಸ್ಯರುಗಳಿಗೆ ಇರುತ್ತದೆ, ಇದರೊಂದಿಗೆ ಗ್ರಾಮೀಣ ಸಹಕಾರ ಸಂಘಗಳ ಸದಸ್ಯರ ಕುಟುಂಬಗಳಿಗೆ ವಾರ್ಷಿಕ ರೂ. 500/-ಗಳು ಮತ್ತು ನಗರ ಸಹಕಾರ ಸಂಘಗಳ ಸದಸ್ಯರ ಕುಟುಂಬಗಳಿಗೆ ರೂ. 1000/-ಗಳನ್ನು ವಂತಿಗೆಯಾಗಿ ಪಾವತಿಸಬೇಕಾಗುತ್ತದೆಂದು ತಿಳಿಸಿದರು.

 

ಡಾ. ಜಿ ಪರಮೇಶ್ವರ್ ಸಿಎಂ ಆಗುವ ಸನ್ನಿವೇಶ ಬಂದರೆ ನಾವು ಸಹ ಬೆಂಬಲ ನೀಡುತ್ತೇವೆ_ ಕೆ.ಎನ್ ರಾಜಣ್ಣ.

 

ತುಮಕೂರು_ಮಾಜಿ ಉಪಮುಖ್ಯಮಂತ್ರಿ ಹಾಗೂ ಕೋರಟಗೆರೆ ಕ್ಷೇತ್ರದ ಶಾಸಕರಾದ ಡಾ. ಜಿ ಪರಮೇಶ್ವರ್ ಹಾಗೂ ನಮ್ಮ ಮಧ್ಯೆ ಸಂಬಂಧ ಚೆನ್ನಾಗಿದ್ದು ಇನ್ನೂ ಅವರು ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು ಮುಂದೆ ಅವರನ್ನು ಸಿಎಂ ಮಾಡೋ ಸಂದರ್ಭ ಬಂದರೆ ನಮ್ಮ ಬೆಂಬಲ ಕೂಡ ಅವರಿಗೆ ನೀಡುತ್ತೇವೆ ಎಂದು ಅಚ್ಚರಿ ಹೇಳಿಕೆಯನ್ನು ಸಹ ನೀಡಿದ್ದಾರೆ.

 

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಸಧ್ಯ ಕಾಂಗ್ರೆಸ್ ಪಕ್ಷದ ಬಸ್ ಲೋಡ್ ಆಗಿದೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುವರು ಯಾರು ಇಲ್ಲ ಆದರೆ ಬರುವವರ ಸಂಖ್ಯೆ ಹೆಚ್ಚಿದೆ ಸದ್ಯ ಕಾಂಗ್ರೆಸ್ ಬಸ್ ಲೋಡ್ ಆಗಿದೆ ಇನ್ನೂ ಮಾಧುಸ್ವಾಮಿ ಸಹ ತಮ್ಮನ ಪಕ್ಷಕ್ಕೆ ಬರುವಂತೆ ತಿಳಿಸಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!