ತುಮಕೂರು : ನಗರದ ಭೋವಿಪಾಳ್ಯ (ಊರುಕೆರೆ ಸಮೀಪ) ಜಿಲ್ಲಾ ಬಂಧಿಕಾನೆ ಇದು ಬರೀ ಬಂಧಿಕಾನೆ ಯಾಗಿ ಉಳಿಯದೇ, ಪರಿವರ್ತನಾ ಕೇಂದ್ರ ವಾಗಿದೆ ಎಂದು ಜೈಲಧಿಕಾರಿಗಳಾದ ಶಾಂತಶ್ರೀರವರು ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು ವತಿಯಿಂದ ಅಕ್ಟೋಬರ್ 30 ರಿಂದ ನವೆಂಬರ್ 13 ರವರೆಗೆ ನಡೆಯುತ್ತಿರುವ ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಅಭಿಯಾನ 2022 ರ ಸಲುವಾಗಿ ಜೈಲಿನಲ್ಲಿರುವ ಖೈದಿಗಳಿಗೆ ಉಚಿತ ಕಾನೂನು ನೆರವು ಅಭಿಯಾನ ವನ್ನು ನಡೆಸಲಾಗುತ್ತಿದೆ, ಅಂದರೆ ಖೈದಿಗಳು ಪ್ರಕರಣವೊಂದಕ್ಕೆ ಸಂಬಂಧಿಸಿ ದಂತೆ ವಕೀಲರ ಸಂಭಾವನೆ ಸಹಿತ ನ್ಯಾಯಾಲಯದಲ್ಲಿ ಮಾಡಬೇಕಾದ ಎಲ್ಲಾ ಖರ್ದು. ಈ ನೆರವನ್ನು ಅತ್ಯಂತ ಕೆಳ ಹಂತದ ನ್ಯಾಯಾಲಯದಿಂದ ಗೌರವಾನ್ವಿತ ಹೈಕೋರ್ಟ್ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನವರೆಗೆ ಹಾಗೂ ವಿವಿಧ ಕಛೇರಿ ಗಳಲ್ಲಿಯ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ನೀಡಲಾಗುವುದು ಎಂದು ವಕೀಲರಾದ ಶ್ರೀಮತಿ ಭಾಗ್ಯಮ್ಮರವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾ ಡಿದ ಮತ್ತೊಮ್ಮ ವಕೀಲರಾದ ಪಿ.ಗೋವಿಂದ ರಾಜುರವರು ಬಂಧಿಖಾನೆಯಲ್ಲಿರುವ ಖೈದಿಗಳಿಗೆ ವಕೀಲರುಗಳ ವತಿಯಿಂದ ದೊರೆಯಬಹುದಾದ ಎಲ್ಲಾ ಕಾನೂನು ನೆರವನ್ನು ನೀಡಲಾಗುತ್ತಿದೆ, ಇದರೊಂದಿಗೆ ಅವರುಗಳು ಮನಃಪರಿವರ್ತನೆಗೊಳ್ಳಲು ಬೇಕಾಗುವಂತಹ ಎಲ್ಲಾ ರೀತಿಯಾದ ಸಲಹೆಗಳನ್ನು ನೀಡಲಾಗುತ್ತಿದೆಂದು ತಿಳಿಸಿದರು. ಇವರೊಂದಿಗೆ ವಕೀಲರುಗಳಾದ ರಾಘವೇಂದ್ರ ಹೆಚ್.ಎಸ್ ಹಾಗೂ ಇನ್ನಿತರೆ ವಕೀಲರುಗಳು ಭಾಗವಹಿಸಿದ್ದರು.
ಜೈಲಿನ ಅಧೀಕ್ಷಕರಾದ ಶಾಂತಶ್ರೀ ರವರು ಮಾತನಾಡುತ್ತಾ ಇಲ್ಲಿನ ಖೈದಿಗಳನ್ನು ನಾವು ಮಕ್ಕಳಂತೆ ನೋಡುತ್ತಿ ದ್ದೇವೆ, ಇಲ್ಲಿ ಅವರಿಗೆ ಮನಃ ಪರಿವರ್ತನೆ ಬಹಳ ಅತ್ಯಗತ್ಯವಾಗಿದ್ದು, ಅವರು ಮನಃ ಪರಿವರ್ತನೆಗೊಂಡು ಇಲ್ಲಿಂದ ಹೊರ ಹೋಗುವಾಗ ಉತ್ತಮ ವ್ಯಕ್ತಿಗಳಾಗಿ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವಂತೆಯೂ, ಹಾಗೂ ಮತ್ತೊಮ್ಮೆ ಅಪರಾಧ ಪ್ರಕರಣಗಳು ಮತ್ತು ಇನ್ನಿತರೆ ಅಹಿತಕರ ಘಟನೆಗಳಲ್ಲಿ ಪಾಲ್ಗೊಳ್ಳದಂತೆ ವಿವಿಧ ರೀತಿಯಲ್ಲಿ ನಾವುಗಳು ಅವರನ್ನು ಪರಿವರ್ತನೆಗೊಂಡು, ಸಮಾಜದಲ್ಲಿ ಮಾದರಿ ನಾಗರೀಕರನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆಂದು ತಿಳಿಸಿದರು.
ಇನ್ನುಳಿದಂತೆ ಪ್ರತಿ ದಿನವು 25 ಖೈದಿಗಳನ್ನೊಳಗಂಡ ಬ್ಯಾಚ್ ಮಾಡಿ ಅವರುಗಳಿಗೆ ಸ್ವಂತ ಉದ್ದಿಮೆ ನಡೆಸಲು ಅನುಕೂಲವಾಗುವಂತೆ ತರಬೇತಿಯನ್ನೂ ಸಹ ನೀಡಲಾಗುತ್ತಿದೆಂದು ತಿಳಿಸಿದರು. ಅದರೊಂದಿಗೆ ಬಂಧಿಯಾಗಿ ಇಲ್ಲಿಗೆ ಬರುವ ವ್ಯಕ್ತಿಗಳಿಗೆ ನಾವು ಮತ್ತೊಮ್ಮೆ ಇಲ್ಲಿಗೆ ಬರಬೇಡಿ, ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಜೀವನ ಸಾಗಿಸಿ, ನಿಮ್ಮಗಳಿಗೆ ನಿಮ್ಮದೇ ಆದಂತಹ ಕುಟುಂಬಗಳು ಇರುತ್ತವೆ, ಅವರುಗಳ ಯೋಗಕ್ಷೇಮ, ಜೀವನದ ಬಗ್ಗೆ ಯೋಚನೆ ಮಾಡಿ ಎಂಬ ಶಿಕ್ಷಣದ ಮತ್ತು ಪರಿವರ್ತನೆಯ ಪಾಠಗಳನ್ನು ಮಾಡಲಾಗುತ್ತಿದೆಂದು ತಿಳಿಸಿದರು.
ಒಟ್ಟಾರೆಯಾಗಿ ತುಮಕೂರು ಜಿಲ್ಲಾ ಬಂಧಿಖಾನೆಯು ಬಂಧಿಖಾನೆಯಾಗಿ ರದೆ ಒಂದು ಶಾಲೆಯಾಗಿದೆ ಎಂದರೆ ತಪ್ಪಾಗಲಾರದು ಎಂಬ ಸಂದೇಶವನ್ನು ಜೈಲಿನ ಅಧೀಕ್ಷಕರಾದ ಶಾಂತಶ್ರೀ ಅವರ ಮನದಾಳದ ಮಾತುಗಳಾಗಿರುತ್ತದೆ.