ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್ ಗೌಡರವರು ನನ್ನ ಮತ್ತು ಗೌರಿಶಂಕರ್ ಮಧ್ಯೆ ಯಾವುದೇ ದ್ವೇಷ ಭಾವನೆಯಿಲ್ಲ ಹಾಗೂ ಯಾವುದೇ ರಾಜಕೀಯ ಪ್ರೇರಿತ ದೂರನ್ನು ನೀಡಿಲ್ಲ, ಇದು ವೈಯುಕ್ತಿಕ ದೂರು ಆಗಿರುತ್ತದೆಂದು ತಿಳಿಸಿದರು.
ಸುರೇಶ್ ಗೌಡರವರು ಮಾತನಾಡುತ್ತಾ ಅವರು ನನ್ನ ಮೇಲೆ ಕೊಲೆ ಮಾಡಿಸುವುದಾಗಿರುವ ಆಡಿಯೋ ಸಿಕ್ಕಿರುವ ಹಿನ್ನಲೆಯಲ್ಲಿ ಮಾತ್ರ ನಾನು ದೂರು ನೀಡಿದ್ದು, ಇದರಲ್ಲಿ ಬೇರೆ ಏನೂ ಉಲ್ಲೇಖ ಮಾಡಿರುವುದಿಲ್ಲ, ಜೊತೆಗೆ ಗ್ರಾಮಾಂತರದ ಜನತೆಯೂ ಸಹ ಸೌಜನ್ಯದಿಂದ ಇರಬೇಕೆಂದು ಪರೋಕ್ಷವಾಗಿ ಹೇಳಿಕೆಯನ್ನೂ ಸಹ ನೀಡಿದರು.
ಗೌರಿಶಂಕರ್ ಹಾಗೂ ನನ್ನ ಮಧ್ಯೆ ಸ್ನೇಹ ಸಂಬಂಧ ಚೆನ್ನಾಗಿಯೇ ಇದೆ, ಅವರು ಆ ರೀತಿಯಾಗಿ ಏಕೆ ಮಾತನಾಡಿದರೋ ಅರಿಯದು ಎಂಬ ಭಾವನೆಯೊಂದಿಗೆ ಮಾತನಾಡಿದರು. ರಾಜಕಾರಣಿಗಳು ಸತ್ಯವನ್ನು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಸಹ ಹೇಳಿರುತ್ತಾರೆ. ಅವರ ಮೇಲೆ ಸಿಓಡಿ ರಿಪೋರ್ಟಾಗಿ, ಚಾರ್ಜ್ ಶೀಟ್ ಆಗಿದೆ. ಮತ್ತೋಂದು ಕರೋನಾ ವ್ಯಾಕ್ಸಿನೇಷನ್ ನಲ್ಲಿ ನಕಲಿ ವ್ಯಾಕ್ಸಿನ್ ಹಾಕಿರುವ ಆರೋಪಯಿದೆ. ಈಗ ಕೊಲೆಗೆ ಸುಪಾರಿ ಕೊಟ್ಟಿರುವ ಕೇಸ್ ಇದೆ. ಇವರು ಶಾಸಕರಾಗಿ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ಸರಿಯಲ್ಲ ಎಂದರು.
ಈ ಕ್ಷೇತ್ರದಲ್ಲಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಸಾಕಷ್ಟು ಜನ ಕರ್ನಾಟಕ ರಾಜ್ಯದಲ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. ಉದಾಹರಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪಿಎಂ ದೇವೆಗೌಡರು ಹಾಗೂ ಮಲ್ಲಿಕಾರ್ಜುನ ಖರ್ಗೆ ಸಹ ಸೋತಿದ್ದಾರೆ… ನಾನು ಒಂದು ಚುನಾವಣೆಯಲ್ಲಿ ಸೋತಿರ ಬಹುದು. ಅದು ಯಾವುದೋ ಒಂದು ಕಾರಣಕ್ಕೆ ನಾನು ಸಹ ಸೋತಿರ ಬಹುದು. ನಾನು ಯಾವುದೋ ಸಾಮ್ರಾಜ್ಯಾ ಗೆದ್ದಿದ್ದೇನೆ ಎಂದು ಕೊಳ್ಳದೆ. ಹಳ್ಳಿ ಹಳ್ಳಿಗಳಲ್ಲಿ ಜನ ಸುರೇಶ್ ಗೌಡ ಹೆಸರು ಹೇಳ್ತಿರುವ ಕಾರಣ ಹತಾಶರಾಗಿ ಗೌರಿಶಂಕರ್ ನನ್ನ ಮೇಲೆ ಸುಪಾರಿ ಕೊಟ್ಟಿದ್ದಾರೆ. ಅವರು ಸುಫಾರಿ ಕೊಟ್ಟಿರುವುದರಲ್ಲಿ ಎರಡು ಮಾತಿಲ್ಲ ಎಂದು ಸಹ ಅವರು ಹೇಳಿದರು.
ಯಾವುದು ಏನೇ ಇರಲಿ ರಾಜಕೀಯುವ ಸುಗಮವಾಗಿರಬೇಕೇಂಬುದು ಜನರ ಆಶೋತ್ತರವಾಗಿದೆ ಎಂದು ಸುರೇಶ್ ಗೌಡರವರು ತಿಳಿಸಿದರು.