ತುಮಕೂರು ನಗರದ ಜನರೇ ಈ ಭಾರೀ ಚುನಾವಣೆಯಲ್ಲಿ ನೀವು ವೋಟ್ ಹಾಕುತ್ತೀರೋ ಇಲ್ಲವೋ ಎಂಬುದೇ ಅನುಮಾನ!
ತುಮಕೂರು : ತುಮಕೂರು ನಗರ ಜನರೇ ಈ ಭಾರೀ ಚುನಾವಣೆಯಲ್ಲಿ ನೀವು ವೋಟ್ ಹಾಕುತ್ತೀರೋ ಇಲ್ಲವೋ ಎಂಬುದೇ ಅನುಮಾನ ಇಂತಹದೊಂದು ಅನುಮಾನ ತುಮಕೂರು ನಗರದ ಕೆಲ ಜನರಲ್ಲಿ ಮೂಡಿದೆ, ಏನಪ್ಪಾ ಇದು ನಾವು ವೋಟ್ ಮಾಡಲು ಆಗುವುದಿಲ್ಲವೇ ಎಂಬ ಸಂಶಯ ಮೂಡಿದ್ದರೇ ನೀವು ಕೂಡಲೇ ನಿಮ್ಮ ಸ್ಥಳೀಯ ಬಿ.ಎಲ್.ಒ ಅಥವಾ ಮತದಾರರ ಕೇಂದ್ರಕ್ಕೆ ತೆರಳಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಪರೀಕ್ಷಿಸಿಕೊಳ್ಳುವ ಪ್ರಸಂಗ ಬಂದಿದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರ ಪ್ರತಿಯೊಂದರಲ್ಲೂ ಡಿಜಿಟಲಿಕರಣ ಮಾಡಲು ಹೊರಟಿದೆ, ಅದರ ಭಾಗವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಅಥವಾ ತೆಗೆದುಹಾಕುವಿಕೆ ಅಥವಾ ವಿಳಾಸ ಬದಲಾವಣೆ, ಇತ್ಯಾದಿಗಳನ್ನು ವೋಟರ್ ಹೆಲ್ಪ್ ಲೈನ್ ಆಪ್ ಮೂಲಕವೇ ಮಾಡಿ ಎಂದು ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಚುನಾವಣಾ ಆಯೋಗ ನಾನಾ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ, ಜೊತೆಗೆ ಎಲ್ಲಾ ಮಾದ್ಯಮದಲ್ಲೂ ಸಹ ವ್ಯಾಪಕ ಪ್ರಚಾರವನ್ನೂ ಮಾಡಿರುವುದಲ್ಲದೇ, ಮತದಾರರ ಪಟ್ಟಿಗೆ ಆಧಾರ್ ಕರ್ಡ್ ಜೋಡಣೆ ಕಾರ್ಯಕ್ರಮವನ್ನೂ ಮಾಡಿದೆ.
ಈ ಎಲ್ಲಾ ರೀತಿಯಲ್ಲಿ ಮಾಡಿದರೂ ಸಹ ಮತದಾರರ ಪಟ್ಟಿಯಲ್ಲಿ ನೈಜ ಮತದಾರರ ಹೆಸರುಗಳು ನಾಪತ್ತೆಯಾಗಿರುವುದಕ್ಕೆ ಕಾರಣವನ್ನು ಮಾತ್ರ ಯಾರೂ ಸಹ ಕೊಡಲು ಸಿದ್ಧರಾಗಿಲ್ಲ, ಇದಕ್ಕೇ ಕಾರಣವೂ ಸಹ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ, ಈ ಹಿಂದೆ ಯಾರಾದರೂ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕಾದರೆ, ತೆಗೆದುಹಾಕಬೇಕಾದರೆ, ವಿಳಾಸ ಬದಲಾವಣೆ ಮಾಡಬೇಕಾಗಿದ್ದರೆ, ಅಂತಹವರು ಸ್ಥಳೀಯ ಬಿ.ಎಲ್.ಒ. ಅಥವಾ ಹತ್ತಿರದ ಮತದಾನ ಕೇಂದ್ರಕ್ಕೆ ತೆರಳಿ ಅಲ್ಲಿ ನೋಂದಾಯಿಸಿಕೊಳ್ಳುವ ಅಥವಾ ಇನ್ನಿತರೆ ಮತದಾನಕ್ಕೆ ಸಂಬಂಧಪಟ್ಟಂತಹ ಕೆಲಸ ಕಾರ್ಯಗಳು ನಡೆಯುತ್ತಿತ್ತು, ಆದರೆ ಅದನ್ನು ಜನರಿಗೆ ಸುಲಭಗೊಳಿಸುವ ನಿಟ್ಟಿನಲ್ಲಿ ಸರ್ಕಾರವೇನೋ ಡಿಜಿಟಲೀಕರಣ ಮಾಡಿದೆ, ಆದರೆ ಅದೂ ಸಂಪೂರ್ಣ ವಿಫಲವಾಗಿದೆ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರೀಕರು.
ಹೌದು !!!! ಇದು ಅಪ್ಪಟ ಸತ್ಯವಾಗಿ ಏಕೆಂದರೆ ತುಮಕೂರು ನಗರದಲ್ಲಿ ಕಳೆದ ಹಲವಾರು ದಶಕಗಳಿಂದ ವಾಸವಿದ್ದು, ಹತ್ತಾರು ಚುನಾವಣೆಗಳಲ್ಲಿ ಮತದಾನ ಮಾಡಿ, ಒಂದೇ ಸ್ಥಳದಲ್ಲಿ ವಾಸವಾಗಿರುವಂತಹವರ ಹೆಸರುಗಳೇ ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿರುವುದೇ ಈ ಗೊಂದಲಕ್ಕೆ ಪುಷ್ಠಿಯನ್ನು ನೀಡಿದ್ದು, ಇದರ ಹಿಂದೆ ತನಿಖೆ ಮಾಡಿದಾಗ ತಿಳಿದಿದ್ದು, ತುಮಕೂರು ನಗರದಲ್ಲಿ ಸಾವಿರಾರು ಜನರ ಹೆಸರುಗಳು ಪ್ರಸ್ತುತದ ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿವೆ ಎಂದು!!!!
ಈ ಕುರಿತಂತೆ ಸದಾಶಿವನಗರದ ಮೂಲ ನಿವಾಸಿ, ಕಳೆದ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿರವ ಹಾಗೂ ಸುಮಾರು 43 ವರ್ಷಗಳಿಂದ ಸತತವಾಗಿ ಮತದಾನವನ್ನು ಮಾಡಿಕೊಂಡು ಬಂದಿರುವ ಹಾಗೂ ಕಳೆದ 2013 ಮತ್ತು 2018ರ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿನ ಗೊಂದಲಗಳನ್ನು ಬಹಿರಂಗಪಡಿಸಿ, ಅದನ್ನು ಸರಿಪಡಿಸಲು ಮುಂದಾಗಿದ್ದಂತಹ ವ್ಯಕ್ತಿ ಪಂಚಾಕ್ಷರಯ್ಯ ಎಂ.ಬಿ. ಅವರ ಹೆಸರೇ ನಾಪತ್ತೇ ಆಗಿದ್ದೇ ಈ ಎಲ್ಲಾ ಗೊಂದಲಗಳ ಸೃಷ್ಠಿಗೆ ಮೂಲ ಕಾರಣ ಎನ್ನಲಾಗಿದೆ. ಏಕೆಂದರೆ ಅವರಿಗೆ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಮಾಹಿತಿ ತಿಳಿದ ಕೂಡಲೇ ಅವರು ನಾನಾ ಕಡೆಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ತುಮಕೂರು ನಗರದಲ್ಲಿ ಸಾವಿರಾರು ಮತದಾರರನ್ನು ಈ ಭಾರಿ ಕೈಬಿಡಲಾಗಿದೆಂಬ ಗಂಭೀರ ಆರೋಪವನ್ನು ಮಾಡಿರುತ್ತಾರೆ. ಇದರೊಂದಿಗೆ ಅವರು ಹಲವಾರು ಸಾಮಾಜಿಕ ಹೋರಾಟಗಾರರು, ರಾಜಕೀಯ ಮುಖಂಡರು, ಇತರರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತಾವು ಸಂಗ್ರಹಿಸಿರುವ ಮಾಹಿತಿ ಮತ್ತು ನಡೆದಿರುವ ಲೋಪದೋಷಗಳ ಬಗ್ಗೆ ಬಹಿರಂಗವಾಗಿ ಸಾರ್ವಜನಿಕರ ಮುಂದಿಡಲು ಮುಂದಾಗಿರುತ್ತಾರೆ.
ಇದರೊಂದಿಗೆ ಅವರು ತಾವು ಸಂಗ್ರಹಿಸಿರುವ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೂ ಮುಂಚೆ ಸಾರ್ವಜನಿಕರು ತಮ್ಮ ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇದೆಯೋ, ಇಲ್ಲವೋ, ಬೇರೆ ರೀತಿಯಾದ ವ್ಯತ್ಯಾಸವಾಗಿದೆಯೋ, ಇತ್ಯಾದಿಯಾಗಿ ತಾವುಗಳು ಸ್ವಯಂ ಪರೀಶೀಲಿಸಿಕೊಳ್ಳಲು ಮನವಿಯನ್ನೂ ಸಹ ಮಾಡುತ್ತಿದ್ದು, ಸಾರ್ವಜನಿಕರು ಪ್ರಸ್ತುತದ ದಿನಗಳಲ್ಲಿ ತಮ್ಮ ಸ್ವಯಂ ಕಾರ್ಯಗಳಲ್ಲಿ ತೊಡಗಿಸಿಕೊಂಡು ಹತ್ತಿರದ ಮತದಾರರ ಕೇಂದ್ರಗಳಿಗೆ ಭೇಟಿಯನ್ನೂ ನೀಡದೇ, ತಾವು ತಮ್ಮ ಮೊಬೈಲ್ / ಆಪ್ ಗಳಲ್ಲಿ ನೋಂದಾಯಿಸಿಕೊಂಡಿದ್ದೇವೆ, ಅಪ್‌ಡೇಟ್ ಮಾಡಿದ್ದೇವೆ ಎಂದು ಸುಮ್ಮನಾದರೇ ಅವರು ಕಂಡಿತ ಪಶ್ಚಾತಾಪ ಪಡುತ್ತಾರೆಂಬ ಸಂದೇಶವನ್ನೂ ಸಹ ರವಾನಿಸಿದ್ದಾರೆ, ಇದಕ್ಕೆ ಪುಷ್ಠಿ ಎಂಬಂತೆ ಹತ್ತಿರದ ಬಿ.ಎಲ್.ಒ. ಗಳೂ ಸಹ ಸಾರ್ವಜನಿಕರ ಸಂಪರ್ಕಕ್ಕೆ ಸಿಗದೇ, ಅವರು ಯಾರು ಎಂಬುದೇ ಸಾರ್ವಜನಿಕರಿಗೆ ಗೊತ್ತೇ ಇರದ ರೀತಿಯಲ್ಲಿರುವುದು ಈ ಎಲ್ಲಾ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ.
ಜಿಲ್ಲಾಡಳಿತ, ನಗರಪಾಲಿಕೆ, ಚುನಾವಣಾ ಶಾಖೆ, ಬಿ.ಎಲ್.ಒ., ಮತದಾರರ ಸಂಪರ್ಕ ಅಧಿಕಾರಿಗಳು ಇತ್ಯಾದಿಗಳಾಗಿ ಎಚ್ಚೆತ್ತು ನೈಜ ಮತದಾರರು, ಸಾರ್ವಜನಿಕರು ಅವರ ವಾಸ ಸ್ಥನಗಳನ್ನು ಪೂರ್ವಾಪರ ಪರಿಶೀಲಿಸದೇ ತಮ್ಮ ವಿವೇಚನೆಗೆ ಬಂದಂತೆ ಮತದಾರರ ಪಟ್ಟಿಗಳಲ್ಲಿ ಹೆಸರುಗಳನ್ನು ತೆಗೆದುಹಾಕಿರುವುದು ಅಥವಾ ಸೇರಿಸಿರುವುದು ತುಂಬಾ ಆಕ್ಷೇಪಾರ್ಹ ಸಂಗತಿಯಾಗಿದೆ.
ಜನರೇ ತಮ್ಮ ಬಳಿ ವೋಟರ್ ಐಡಿ ಕಾರ್ಡ್ ಇದ್ದರೇ ಮಾತ್ರ ಸಾಲದು, ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಒಮ್ಮೆ ಪರೀಕ್ಷಿಸಿಕೊಳ್ಳುವ ಜವಾಬ್ದಾರಿ ನಮ್ಮದೂ ಆಗಿರುತ್ತದೆ ಅಲ್ಲವೇ…………..
ಜಾಗೋ ಸಾರ್ವಜನಿಕ್ ಜಾಗೋ