ತುಮಕೂರು ನಗರದ ಭದ್ರಮ್ಮ ವೃತ್ತದಿಂದ ಉಪ್ಪಾರಳ್ಳಿ ಶೆಟ್ಟಿಹಳ್ಳಿ ರಸ್ತೆಗೆ ಸಂಪರ್ಕಿಸುವ ಮೇಲು ಸೇತುವೆಯಲ್ಲಿ ಬಿರುಕು ಕಂಡಿದ್ದು ಇಂದು ಸುರಿದ ಧಾರಾಕಾರ ಮಳೆಯಿಂದ ಸೇತುವೆ ಮೇಲಿಂದ ನೀರು ಹರಿದು ಬರುತ್ತಿರುವುದು ಕಂಡುಬರುತ್ತದೆ.
ಕಳೆದ ಹತ್ತು ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣವಾಗಿದ್ದು ಹತ್ತು ವರ್ಷಗಳಿಂದ ನಿರಂತರ ಸೇವೆಯನ್ನು ಕೊಡುತ್ತಿರುವ ತುಮಕೂರಿನ ಪ್ರಥಮ ಮೇಲ್ಸೆತುವೆಯನ್ನು ಎಂಬ ಹೆಗ್ಗಳಿಕೆಗೂ ಈ ಮೇಲ್ಸೇತುವೆ ಪ್ರಖ್ಯಾತಿ ಪಡೆದಿದೆ.
ಇನ್ನೂ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೇತುವೆಯ ದುರಸ್ತಿ ಕಾರ್ಯ ಶೀಘ್ರ ಮಾಡಬೇಕಾಗಿದೆ