ಡಾ. ಪುನೀತ್ ರಾಜಕುಮಾರ್ ಅವರ ಕಟ್ಟ ಕಡೆಯ ಚಲನಚಿತ್ರ ಹಾಗೂ ಅವರ ಕನಸಿನ ಚಿತ್ರವಾದ ಗಂಧದ ಗುಡಿ ಚಿತ್ರವು ಅಕ್ಟೋಬರ್ 28 ರಂದು ತೆರೆಕಂಡಿದ್ದು, ಆ ಚಿತ್ರದಲ್ಲಿ ಪ್ರಾಕೃತಿಕ ಸೌಂದರ್ಯ ಮತ್ತು ಪ್ರಕೃತಿಯ ರಕ್ಷಣೆ ಮತ್ತು ಇತ್ತೀಚನ ದಿನಗಳಲ್ಲಿ ಕಾಡು ಮತ್ತು ಕಾಡಿನ ವೈವಿಧ್ಯತೆ, ಕಾಡಿನ ಪ್ರಾಣಿಗಳು ಅವನತಿಗೆ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನೂ ಸಹ ಈ ಚಿತ್ರವನ್ನು ವೀಕ್ಷಣೆ ಮಾಡಿ ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಎಂಬಂತಹ ಸಂದೇಶವನ್ನು ಈ ಚಿತ್ರವು ರವಾನಿಸುತ್ತದೆ, ಅಂತಹ ಚಿತ್ರದಿಂದ ಪ್ರೇರಣೆಗೊಂಡ ಮಾಜಿ ಸಚಿವ ಸೊಗಡು ಶಿವಣ್ಣರವರ ಕುಟುಂಬವು ದಿವಂಗತ ಪುನೀತ್ ರಾಜಕುಮಾರ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾರ್ಥದಲ್ಲಿ ತುಮಕೂರಿನ ಎಸ್ ಮಾಲ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಚಲನ ಚಿತ್ರ ವೀಕ್ಷಸಲು ಅನುವು ಮಾಡಿದ್ದಾರೆ, ಅಷ್ಟೇ ಅಲ್ಲದೇ ಚಲನಚಿತ್ರ ವೀಕ್ಷಿಸಿದ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಸಿಗಳನ್ನ ವಿತರಿಸುವುದರ ಮೂಲಕ ವಿಶೇಷವಾಗಿ ಪರಿಸರದ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಸಂಗತಿಯಾಗಿದೆ.
ಇದೆ ವೇಳೆ ಮಾತನಾಡಿರುವ ಸೊಗಡು ಶಿವಣ್ಣರವರ ಪುತ್ರ ಕುಮಾರಸ್ವಾಮಿರವರು ಪುನೀತ್ ರಾಜಕುಮಾರ್ ರವರು ಹಲವು ಸಾಮಾಜಿಕ ಕಾರ್ಯಗಳನ್ನ ಮಾಡುವ ಮೂಲಕ ದೇಶ , ರಾಜ್ಯದ ಜನತೆಯ ಮನದಾಳದಲ್ಲಿ ಅಚ್ಚಳಿಯದೆ ಉಳಿಯುವ ಅನೇಕ ಕೆಲಸಗಳನ್ನು ಮಾಡಿದ್ದಾರೆ ಹಾಗಾಗಿ ಅವರ ಪರಿಸರ ಪ್ರೇಮ, ಕಾಳಜಿ ನಿಜಕ್ಕೂ ಅವಿಸ್ಮರಣೀಯ ಹಾಗಾಗಿ ಅವರ ನೆನಪಿನಲ್ಲಿ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಗಿಡಗಳನ್ನು ನೀಡುವ ಮೂಲಕ ಅವರಿಗೆ ಗೌರವ ಸಮರ್ಪಿಸಲಾಗುತ್ತಿದೆ ಎಂದರು.
ಇದೇ ವೇಳೆ ತುಮಕೂರಿನ ಹಲವು ಸಾರ್ವಜನಿಕರು ಚಲನಚಿತ್ರ ವೀಕ್ಷಿಸಿದ್ದು ಮಾಜಿ ಸಚಿವರ ಕುಟುಂಬದ ನಡೆಗೆ ಹರ್ಷ ವ್ಯಕ್ತಪಡಿಸಿ ಪುನೀತ್ ರಾಜಕುಮಾರ್ ರವರಿಗೆ ಗೌರವ ಸಮರ್ಪಿಸಿದ್ದಾರೆ.