ಬೇಲೂರು:ಇತ್ತೀಚಿಗೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಸುರಿದ ಅತಿಮಳೆಯಿಂದ ರೈತರ ಬೆಳೆ ಹಾನಿಯಾಗಿದ್ದರಿಂದ ರೈತರ ಸಂಕಷ್ಟ ಪರಿಹರಿಸಲು ಕೆಲವು ನಿಗದಿತ ಬೆಳೆಗಳಿಗೆ ಪರಿಹಾರ ನಿಗದಿಪಡಿಸಿತ್ತು. ಅಂತೆಯೇ ರೈತರಿಂದ ಅರ್ಜಿ ಪಡೆದ ಗ್ರಾಮ ಲೆಕ್ಕಾಧಿಕಾರಿಗಳು ಲಂಚ ಪಡೆದು ತರಿ ಜಮೀನನ್ನು ಖುಷ್ಕಿ ಎಂದು ಪರಿಗಣಿಸಿ ಅದರ ಬೆಳೆ ಖಾಲಂ ಅಲ್ಲಿ ಖಾಲಿ ಜಮೀನಿನಲ್ಲಿ ಕಾಫಿ ಬೆಳೆ ನಮೂದಿಸಿದರೆ ಇನ್ನು ಕೆಲವೆಡೆ ಭತ್ತದ ಬೆಳೆ ಯನ್ನು ಕಾಫಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಪರಿಹಾರಕ್ಕೆ ನಮೂದಿಸಿ ನಿಜವಾದ ಪಲಾನುಭವಿಗಳಿಗೆ ಪರಿಹಾರ ಸಿಗದಿರುವಂತೆ ಮಾಡಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ನಾರ್ವೆ ತುಂಬದೇವನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮೇಲಧಿಕಾರಿಗಳಿಗೆ ಮನವಿ, ಅಧಿಕಾರಿಗಳು ಜಮೀನಿನ ಬೆಳೆ ಪರಿಶೀಲಿಸಿ ಈ ಒಂದು ಹಗರಣ ದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಸರ್ಕಾರದ ಹಣವನ್ನು ಮರುವಸೂಲಾತಿ ಮಾಡಬೇಕೆಂದು ಮನವಿ ಜೊತೆಗೆ ಇಂತಹ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹ. ಖಾಲಿ ಜಮೀನಿನಲ್ಲಿ ಕಾಫಿ ಬೆಳೆ ನಮೂದು, ಭತ್ತದ ಬೆಳೆ ಇದ್ದರೂ ಕಾಫಿ ಎಂದು ಬದಲಾಗಿದ್ದು ಹೇಗೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಸಬೇಕೆಂದು ಹಾಗೂ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸುತ್ತ ಇದರೊಂದಿಗೆ ಈ ಅಕ್ರಮದಲ್ಲಿ ಗ್ರಾಮ ಲೆಕ್ಕಧಿಕಾರಿಗಳು ಲಂಚ ಪಡೆದು ಈ ರೀತಿಯ ಸುಳ್ಳು ದಾಖಲಾತಿ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ…