ಮುಸ್ಲಿಂ ಸಮುದಾಯದಲ್ಲಿರುವ ಉಪ ಜಾತಿಯಾದ ಪಿಂಜಾರ/ನದಾಫ್ ಜನಾಂಗದವರಿಗೆ ಪ್ರವರ್ಗ -1ರ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಕೊರಟಗೆರೆ ತಹಶೀಲ್ದಾರ್ ನಹಿದ ಜಂ ಜಂ ರವರಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು ಜಿಲ್ಲಾ ಪಿಂಜಾರ/ನದಾಫ್ ಸಂಘದ ಜಿಲ್ಲಾಧ್ಯಕ್ಷರಾದ ಬಶೀರ್ ಅಹಮದ್ ಮಾತನಾಡಿ, 1993-94ರ ಹಿಂದೆ ಧಾರ್ಮಿಕವಾಗಿ ಇಸ್ಲಾಂ ಧರ್ಮದ ಅನುಯಾಯಿಗಳು ಆಗಿರುವ ಪಿಂಜಾರ ನದಾಫ್ ಸಮುದಾಯದ ಸದಸ್ಯರುಗಳು ಶಾಲಾ ದಾಖಲಾತಿ ವೇಳೆ ಹಾಗೂ ಇತರೆ ದಾಖಲಾತಿಗಳನ್ನು ಪಡೆಯುವ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಉಪಜಾತಿ ಕಾಲಂ ಇಲ್ಲದೆ ಇದ್ದದ್ದರಿಂದ ಇಸ್ಲಾಂ ಅಥವಾ ಮುಸ್ಲಿಂ ಎಂದು ನಮೂದಿಸಿದ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳು ಮತ್ತು ಸರ್ಕಾರ ನಿರ್ವಹಿಸುತ್ತಿದ್ದು ಕಂಡುಬಂದಿದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಆದೇಶದಂತೆ ಪಿಂಜಾರ ನದಾಫ್ ಪಂಗಡದ ಸದಸ್ಯರು ಪ್ರವರ್ಗ -1ರ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಸಮುದಾಯದ ಏಳಿಗೆಗಾಗಿ ಮತ್ತು ಅಭಿವೃದ್ಧಿಗಾಗಿ ಪಿಂಜಾರ/ನದಾಫ್ ಸಂಘದ ಹಾಗೂ ಸ್ಥಳೀಯ ಸಾಕ್ಷಿ ಮತ್ತು ಆಧಾರದ ಮೇರೆಗೆ ಪಿಂಜಾರ/ನದಾಫ್ ಸಮುದಾಯ ಪ್ರವರ್ಗ ಒಂದರ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಸರ್ಕಾರದ ಆದೇಶದ ಪ್ರಕಾರ ತುಮಕೂರು ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಅಲ್ಪಸಂಖ್ಯಾತರ ಆಯೋಗ ನೀಡಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿದಿರುವಂತೆ ನಮ್ಮ ಸಂಘದ ಪ್ರಮಾಣಪತ್ರವನ್ನೇ ಒಂದು ದಾಖಲೆ ಎಂದು ಪರಿಗಣಿಸಿ ಅಥವಾ ಸಾಕ್ಷಿ ಮತ್ತು ಆಧಾರಕ್ಕೆ ತಕ್ಕಂತೆ ಅಫಿಡೆವಿಟ್ ಪಡೆದುಕೊಂಡು ಇಸ್ಲಾಂ ಧರ್ಮದ ಮುಸ್ಲಿಂ ಸಮುದಾಯದಲ್ಲಿರುವ ಉಪ ಜಾತಿಯಾದ ಪಿಂಜಾರ/ನದಾಫ್ ಜನಾಂಗಕ್ಕೆ ಪ್ರವರ್ಗ ಒಂದರ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ತಾಲೂಕು ದಂಡಾಧಿಕಾರಿಗಳಾದ ನಹಿದ ಜಮ್ ಜಮ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಶೀರ್ ಅಹ್ಮದ್ ಈ ಸಂದರ್ಭದಲ್ಲಿ ತಿಳಿಸಿದರು.