ತುಮಕೂರು ನಗರದ ನಿವಾಸಿಗಳಾದ ಟಿ.ಎನ್.ಗಂಗಾಧರ್‌ರವರು ದಿನಾಂಕ 13-10-2022ರಂದು ಅನಾರೋಗ್ಯದ ನಿಮಿತ್ತ ಮೃತಪಟ್ಟಿರುತ್ತಾರೆ, ಶ್ರೀಯುತರು ತುಮಕೂರಿನ ಚಿಕ್ಕಪೇಟೆಯ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಮಂಡಳಿಯ ಕಾರ್ಯದರ್ಶಿಯಾಗಿ ಹಾಲಿ ಕಾರ್ಯನಿರ್ವಹಿಸುತ್ತಿದ್ದರು.
ಅವರು ಈ ಹಿಂದೆ ಹೆಚ್ ಎಂ ಟಿ ಕಾರ್ಖಾನೆಯ ನೌಕರರಾಗಿ ಸೇವೆಯನ್ನೂ ಸಹ ಸಲ್ಲಿಸಿದ್ದರು.
ಗಂಗಾಧರ್ ಮತ್ತು ದಂಪತಿಗಳಿಗೆ ಹೆಣ್ಣು ಮಕ್ಕಳ ಸಂತಾನವಾಗಿರುತ್ತದೆ, ಗಂಗಾಧರ್ ರವರ ಜೀವಿತಾವಧಿಯಲ್ಲಿ ಅತ್ಯಂತ ಸರಳ, ಸಜ್ಜನಿಕೆ ಮತ್ತು ಸಮಾಜ ಸೇವೆಯಲ್ಲಿ ಗುರತಿಸಿಕೊಂಡು ಅತ್ಯಂತ ಹೆಸರನ್ನೂ ಸಹ ಗಳಿಸಿರುತ್ತಾರೆ, ಇವರ ಅಗಲಿಕೆಯಿಂದ ಅವರ ಕುಟುಂಬಕ್ಕೆ ಆಘಾತವಾಗಿದ್ದು, ಹೆಣ್ಣು ಮಕ್ಕಳ ಸಂತಾನದ ಕಾರಣ ಅವರೇ ತಮ್ಮ ತಂದೆಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿ ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿಯಾದ ಸನ್ನಿವೇಶ, ತುಮಕೂರಿನಲ್ಲಿ ನಡೆದಿದೆ.
ಏನೇ ಆದರು ಗಂಡು ಮಕ್ಕಳಿಗಿಂತ ಹೆಣ್ಣು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವ ಕೊರಗನ್ನು ನಿವಾರಿಸಿ, ಸಮಾಜಕ್ಕೆ ಮಾದರಿಯಾಗಿದ್ದಾರೆ ಈ ಹೆಣ್ಣು ಮಕ್ಕಳು.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆತು, ಸದ್ಗತಿ ಪ್ರಾಪ್ತಿಯಾಗಲೆಂದು ಪ್ರಾರ್ಥಿಸುತ್ತಾ, ಹೆಣ್ಣು ಮಕ್ಕಳ ಕಾರ್ಯವನ್ನು ಶ್ಲಾಘಿಸಿ, ಈ ಸುದ್ಧಿಯನ್ನು ಮಾಡಲಾಗಿದೆ.