ತುಮಕೂರು ಜಿಲ್ಲೆಗೆ ಶನಿವಾರದಂದು ಕಾಂಗ್ರೆಸ್ನ ಭಾರತ್ ಜೋಡೋ ರಥ ಯಾತ್ರೆ ಆಗಮಿಸಿದ್ದು, ಇದರ ಬೆನ್ನಲ್ಲೆ ತುಮಕೂರು ಲೋಕಸಭಾ ಸದಸ್ಯರು ಜಿ.ಎಸ್.ಬಸವರಾಜು, ಇಬ್ಬರು ಪ್ರಭಾವಿ ಸಚಿವರುಗಳಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ ಹಾಗೂ ಇನ್ನೂ ಇತರೆ ಪ್ರಭಾವಿ ನಾಯಕರುಗಳಿಗೆ ನಡುಕ ಉಂಟಾಗಿದೆ ಎನ್ನಬಹುದಾಗಿದೆ ಇಂತಹ ಸನ್ನಿವೇಶಗಳಿಗೆ ತುಮಕೂರು ಜಿಲ್ಲೆ ಸಾಕ್ಷಿಯೂ ಆಗಿದೆ.
ಬೆಳ್ಳಂಬೆಳ್ಳಗೆ ತುಮಕೂರು ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಸವರಾಜುರವರು ಕಾಂಗ್ರೆಸ್ ವಿರುದ್ಧ ಹೌಹಾರಿದ್ದಲ್ಲದೇ, ಆಡಳಿತ ಪಕ್ಷವನ್ನು ಬೈದಾಡಿಕೊಂಡು ಓಡಾಡುವುದೇ ಭಾರತ್ ಜೋಡೋ ಎಂದು ಹೇಳಿಕೆಯನ್ನು ನೀಡಿದ್ದರು.
ಇದರ ಬೆನ್ನಲ್ಲೇ ಮಧ್ಯಾಹ್ನ ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ನ ಖಾಸಗಿ ಹೋಟೆಲ್ನಲ್ಲಿ ಇಬ್ಬರು ಪ್ರಭಾವಿ ಸಚಿವರುಗಳಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್ರವರು ಜಂಟಿ ಸುದ್ದಿಗೋಷ್ಠಿಯನ್ನು ನಡೆಯಿಸಿ ತಮ್ಮ ಅಸಮಧಾನವನ್ನು ಹೊರಹಾಕಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿಯವರು ಭಾರತವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿಲ್ಲ, ಬದಲಾಗಿ ತಮ್ಮ ಕಾಲಕ್ಷೇಪವನ್ನು ಮಾಡುತ್ತಿದ್ದಾರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುರುತಿಸಿಕೊಂಡಿದ್ದವರು, ಪ್ರಸ್ತುತದ ದಿನಗಳಲ್ಲಿ ಇಲ್ಲ ಆದರೂ ಅವರು ಈ ಹೇಳಿಕೆಗಳನ್ನು ಕೊಟ್ಟು ಓಡಾಡುತ್ತಿದ್ದಾರೆ, ಇತ್ಯಾದಿಯಾಗಿ ಸುದ್ಧಿಗೋಷ್ಠಿಯನ್ನು ತರಾತುರಿಯಲ್ಲಿ ನಡೆಸಿ ಹೊರಟು ಹೋದರು.
ನಗರದ ಟೌನ್ ಹಾಲ್ ವೃತ್ತ (ಬಿಜಿಎಸ್)ದಲ್ಲಿ ಪ್ರತಿಭಟನೆಯನ್ನೂ ಸಹ ಮಾಡಿ ಅಸಮಧಾನ ಹೊರಹಾಕಿದ ಮಾಡಿದ ಬಿಜೆಪಿ ಕಾರ್ಯಕರ್ತರು
ಇಷ್ಟೇಲ್ಲಾ ಸನ್ನಿವೇಶಗಳು ತುಮಕೂರು ಜಿಲ್ಲೆಗೆ ಕಾಂಗ್ರೆಸ್ನ ಪಾದಯಾತ್ರೆಯಾದ ಭಾರತ್ ಜೋಡೋ ಆಗಮಿಸಿದ್ದೇ ತಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ತನ್ನ ಅಸ್ತಿತ್ವವು ಎಲ್ಲಿ ಕಳೆದುಹೋಗುತ್ತೋ, ನಮ್ಮ ಹುಳುಕುಗಳನ್ನು ಕಾಂಗ್ರೆಸ್ ಪಕ್ಷದವರು ಎಲ್ಲಿ ಹೊರ ಹಾಕುತ್ತಾರೋ, ನಮ್ಮ ಅಕ್ರಮಗಳನ್ನು ಎಲ್ಲಿ ಬಯಲಿಗೆಳೆಯುತ್ತಾರೋ ಎಂಬ ಭಯದಿಂದ ಈ ರೀತಿಯಾಗಿ ಸರಥಿ ಸಾಲಿನಲ್ಲಿ ಪತ್ರಿಕಾಗೋಷ್ಠಿಗಳನ್ನು ಕರೆದು ತಮ್ಮ ಅಸ್ತಿತ್ವವಗಳನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನುಳಿದಂತೆ ಜಿಲ್ಲೆಯ ಎಲ್ಲಾ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಭಾರತ್ ಜೋಡೋ ಯಾತ್ರೆಯ ಸುದ್ಧಿಗಳು ಪ್ರಸಾರವಾಗುತ್ತಿದ್ದು, ಅದರಲ್ಲಿ ತಮ್ಮ ಪಾತ್ರವೂ ಇರಲಿ, ತಮ್ಮ ಸುದ್ಧಿಗಳನ್ನೂ ಜನರು ಓದಲಿ, ವೀಕ್ಷಿಸಲಿ ಎಂಬ ಉದ್ದೇಶದಿಂದಲೋ ಈ ರೀತಿಯಾಗಿ ಪತ್ರಿಕಾಗೋಷ್ಠಿಯನ್ನು ಕರೆದು ಹೇಳಿಕೆಗಳನ್ನು ನೀಡುತ್ತಿದ್ದಾರೆಂಬುದು ಪ್ರಬುದ್ಧರ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ಭಾರತ್ ಜೋಡೋ ಯಾತ್ರೆ ತುಮಕೂರಿಗೆ ಆಗಮಿಸಿದ್ದು ಸಂಪೂರ್ಣ ಯಶಸ್ವಿಯನ್ನು ಕಂಡಿದೆ ಎಂದರೆ ತಪ್ಪಾಗಲಾರದು, ಯಾಕೆಂದರೆ ಈ ಯಾತ್ರೆ ಬಂದಿರುವ ಕಾರಣಕ್ಕೇ ಬಿಜೆಪಿ ಪಕ್ಷದ ಮುಖಂಡರು ಚುರಕಾಗಿ ಜನರಿಗೆ ಹತ್ತಿರವಾಗಲು ಹೊರಟಿದ್ದಾರೆಂದರೆ ತಪ್ಪಾಗಲಾರದು.