ಸೆಪ್ಟೆಂಬರ್ 12 ರಂದು ನಡೆಯುವ ವಿಧಾನಸೌಧ ಮುತ್ತಿಗೆ : ಕೋಡಿಹಳ್ಳಿ ಚಂದ್ರಶೇಖರ್.

 

ಸೆಪ್ಟೆಂಬರ್ 12ರಂದು ವಿಧಾನಸಭಾ ಅಧಿವೇಶನ ಪ್ರಾರಂಭವಾಗುತ್ತಿದ್ದು ಇದರ ಬೆನ್ನಲ್ಲೇ ರಾಜ್ಯದಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಕರ್ನಾಟಕ ರಾಜ್ಯದಲ್ಲಿ ರದ್ದು ಮಾಡಬೇಕೆಂದು ಒತ್ತಾಯಿಸಿ ಹಸಿರು ಸೇನೆಯಿಂದ ವಿಧಾನಸಭೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.

ಈ ಬಗ್ಗೆ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರೈತ ವಿರೋಧಿ ಕೃಷಿ ಕಾಯ್ದೆ ಗಳನ್ನು ಕೇಂದ್ರ ರದ್ದು ಮಾಡಿದ್ದರು ,ರಾಜ್ಯದಲ್ಲಿ ರೈತರಿಗೆ ಮಾರಕವಾದ ಕಾಯ್ದೆಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮೀನಾ ಮೇಷ ಎಣ್ಣಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಹೈನುಗಾರಿಕೆ ಯನ್ನು ಜನರ ಕೈ ತಪ್ಪಿಸುವ ಕೆಲಸ ಸರಕಾರ ಮಾಡುತ್ತಿದೆ ವಿದ್ಯುತ್ ನಿಗಮವನ್ನು ಖಾಸಗಿರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿವೆ ಅದನ್ನು ಕೈ ಬಿಡಬೇಕು,ಎಪಿಎಂಸಿ ಕಾಯ್ದೆ ತಿದ್ದುಪಡಿ , ಹಾಗೂ ರೈತರ ಬೆನ್ನುಬಾಗಿರುವ ಕೃಷಿಯನ್ನು ರೈತನ ಕೈ ತಪ್ಪಿಸಲು ಹೆಚ್ಚು ದಿನ ಬೇಕಾಗಿಲ್ಲ, ಹಾಗಾಗಿ ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿದ್ಯುತ್ಚ್ಯಕ್ತಿ ಖಾಸಗೀಕರಣ ನೀತಿ ಕೈ ಬೀಡಬೇಕು ಪ್ರಜಾಪ್ರಭುತ್ವ ವನ್ನು ಅಸ್ಥಿರ ಗೋಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಸರ್ಕಾರಿ ಸ್ವಾಮ್ಯದ ಉದ್ಯಮಗಳ ನಾಶ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚು ಮಳೆ ಬಿದ್ದು ಅತಿವೃಷ್ಠಿಯಾಗಿ ರೈತರು ಬೆಳದ ಬೆಳ ನಷ್ಟವಾಗಿವೆ,ರೈತರ ಜನಾವಾರುಗಳು ಸಾವನಪ್ಪಿ,ಮನೆಕಳೆದುಕೊಂಡವರಿಗೆ,ಸಿಡಿಲು ಬಡಿದು ಸಾವನಪ್ಪಿಜವರಿಗೆ ಶಿಘ್ರ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು .

ಸೆಪ್ಟೆಂಬರ್ 12 ರಂದು ನಡೆಯುವ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ರಾಜ್ಯದ ಹದಿನೈದರಿಂದ ಇಪ್ಪತ್ತು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.

ಆಡಳಿತ ನಡೆಸುತ್ತಿರುವ ಡಬಲ್ ಎಂಜಿನ್ ಸರ್ಕಾರ ಏಕಕಾಲದಲ್ಲಿ ಉತ್ತಮ ಕೆಲಸ ಮಾಡಬೇಕು.ಉತ್ಸವಗಳು ನಿಲ್ಲಬೇಕು ಜನರು ಸಂಕ್ಷದಲಿರುವಾಗ ಜನೋತ್ಸವಗಳ ಅಗತ್ಯವಿಲ್ಲ ಎಂದರು. ಕರ್ನಾಟಕ ರಾಜ್ಯ ರೈತ ಸಂಘದಿಂದಲೂ ಚುನಾವಣೆಯಲ್ಲಿ ‌ಸ್ಪರ್ದಿಸಲು ಚಿಂತನೆ ನಡೆಯುತ್ತಿದೆ.ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕಾ,ಅಥವಾ ರೈತಸಂಘ ಪ್ರಬಲವಾಗಿರುವ ಕಡೆ ಅಭ್ಯರ್ಥಿ ಗಳನ್ನು ನಿಲಿಸಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಸಿ ತಿರ್ಮಾನ ಕೈಗೋಳ್ಳುವುದಾಗಿ ತಿಳಿಸಿದರು.

ಮುಖಂಡರಾದ ಬೈರೇಗೌಡ, ಆನಂದ್ ಪಾಟೀಲ್, ರಾಜಣ್ಣ, ಅನೀಲ್, ಕೆಂಕೆರೆ ಸತೀಶ್, ಸಿದ್ದಾರಾಜು, ನಾಗೇಂದ್ರ, ನಾಗಣ್ಣ, ಲೋಕಣ್ಣ, ಮಲ್ಲಿಕಾರ್ಜುನ್

Leave a Reply

Your email address will not be published. Required fields are marked *

error: Content is protected !!