ಸರಣಿ ಅಪಘಾತಗಳಿಂದ ಬೇಸತ್ತ ಜನರಿಂದ ರಸ್ತೆ ತಡೆ ಸಂಚಾರಕ್ಕೆ ಅಡಚಣೆ

ಕೊರಟಗೆರೆ_ಗ್ರಾಮದಲ್ಲಿ ಹಾದುಹೋಗಿರುವ ಪ್ರಮುಖ ರಸ್ತೆಯಲ್ಲಿ ಪ್ರತಿನಿತ್ಯ ರಸ್ತೆ ಅಪಘಾತಗಳು ನಡೆಯುತ್ತಿದ್ದು ಇದರಿಂದ ಗ್ರಾಮದ ಸಾರ್ವಜನಿಕರು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಹ ಗ್ರಾಮಸ್ಥರೇ ರಸ್ತೆ ಬಂದ್ ಮಾಡಿ ಆಕ್ರೋಶ ಹೊರ ಹಾಕಿರುವ ಘಟನೆ ವರದಿಯಾಗಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದಲ್ಲಿ ಇಂದು ಬೆಳಗ್ಗೆ ಖಾಸಗಿ ಬಸ್ಸೊಂದು ವೃದ್ದೆಗೆ ಗುದ್ದಿದ ಪರಿಣಾಮ ವೃದ್ದೆ ತೀವ್ರವಾಗಿ ಗಾಯಗೊಂಡಿದ್ದು ಘಟನೆಯನ್ನು ಖಂಡಿಸಿ ಗ್ರಾಮಸ್ಥರು ದಿಡೀರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಗ್ರಾಮಸ್ಥರ ರಸ್ತೆ ತಡೆಯಿಂದ ಕಿಲೋಮೀಟರ್ಗಟ್ಟಲೆ ರಸ್ತೆಯಲ್ಲಿ ವಾಹನಗಳು ನಿಂತಿದ್ದು ಕೆಲಕಾಲ ವಾಹನ ಸವಾರರು ತೀವ್ರ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.


ಕಳೆದ ಒಂದುವರೆ ವರ್ಷದ ಹಿಂದೆಯೂ ಸಹ ಗ್ರಾಮದಲ್ಲಿ ಬೀಕರ ಅಪಘಾತವಾಗಿದ್ದು ಹಲವರು ಮೃತಪಟ್ಟಿದ್ದರು ಇನ್ನು ಪದೇ ಪದೇ ಗ್ರಾಮದಲ್ಲಿ ರಸ್ತೆ ಅಪಘಾತಗಳು ನಡೆಯುತ್ತಿದ್ದರು ಸಹ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಅಕ್ರೋಶ ಹೊರ ಹಾಕಿದ್ದಾರೆ.


ಮಾಹಿತಿ ತಿಳಿದ ಕೂಡಲೇ ಕೊರಟಗೆರೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಹರಸಾಹಸ ಪಡುವಂತಾಯಿತು.

Leave a Reply

Your email address will not be published. Required fields are marked *

error: Content is protected !!