ಪಿತೃಪಕ್ಷದಲ್ಲಿ ವಾತಾವರಣದಲ್ಲಿನ ತಿರ್ಯಕ್ ಲಹರಿಗಳ (ರಜ-ತಮಾತ್ಮಕ ಲಹರಿಗಳ) ಮತ್ತು ಯಮಲಹರಿಗಳ ಪ್ರಭಾವವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಿದರೆ ರಜ-ತಮಾತ್ಮಕ ಕೋಶಗಳಿರುವ ಪಿತೃಗಳಿಗೆ ಪೃಥ್ವಿಯ ವಾತಾವರಣ ಕಕ್ಷೆಯಲ್ಲಿ ಬರಲು ಸುಲಭವಾಗುತ್ತದೆ. ಆದುದರಿಂದ ಹಿಂದೂ ಧರ್ಮದಲ್ಲಿ ಹೇಳಲಾದ ವಿಧಿಗಳನ್ನು ಆಯಾ ಕಾಲದಲ್ಲಿ ಮಾಡುವುದು ಹೆಚ್ಚು ಶ್ರೇಯಸ್ಕರವಾಗಿದೆ’.
*ಒಂದು ವರ್ಷದವರೆಗೆ ಶ್ರಾದ್ಧವನ್ನು ಮಾಡಿದ ನಂತರ ಪುನಃ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಏಕೆ ಮಾಡಬೇಕು?*
‘ಮೃತ್ಯುವಿನ ನಂತರ ಒಂದು ವರ್ಷದವರೆಗೆ ಮಾಡುವ ಶ್ರಾದ್ಧದಿಂದ ಆಯಾ ವಿಶಿಷ್ಟ ಲಿಂಗದೇಹಗಳಿಗೆ ಗತಿ ಸಿಗುವುದರಿಂದ ಆಯಾ ವ್ಯಕ್ತಿಗಳ ವ್ಯಷ್ಟಿ ಸ್ತರದಲ್ಲಿನ ಋಣವನ್ನು ತೀರಿಸಲು ಸಹಾಯವಾಗುತ್ತದೆ. ಇದು ವೈಯಕ್ತಿಕ ಸ್ತರದಲ್ಲಿ ಋಣವನ್ನು ತೀರಿಸುವ ಒಂದು ವ್ಯಷ್ಟಿ ಉಪಾಸನೆಯೇ ಆಗಿದೆ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧವು ಸಮಷ್ಟಿ ಸ್ತರದಲ್ಲಿ ಪಿತೃಗಳ ಋಣವನ್ನು ತೀರಿಸುವ ಸಮಷ್ಟಿ ಉಪಾಸನೆಯಾಗಿದೆ. ವ್ಯಷ್ಟಿ ಋಣವು ಆಯಾ ಲಿಂಗದೇಹಗಳ ಬಗೆಗಿನ ಪ್ರತ್ಯಕ್ಷ ಕರ್ತವ್ಯ ಪಾಲನೆಯನ್ನು ಕಲಿಸಿದರೆ ಸಮಷ್ಟಿ ಋಣವು ಒಂದೇ ಕಾಲದಲ್ಲಿ ವ್ಯಾಪಕ ಮಟ್ಟದಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ತೀರಿಸುತ್ತದೆ.
ನಮ್ಮೊಂದಿಗೆ ಅತಿಹೆಚ್ಚು ಸಂಬಂಧವಿರುವ ಮೊದಲಿನ ಒಂದೆರಡು ಪೀಳಿಗೆಗಳ ಪಿತೃಗಳ ಶ್ರಾದ್ಧವನ್ನು ನಾವು ಮಾಡುತ್ತೇವೆ. ಏಕೆಂದರೆ ಇವರೊಂದಿಗೆ ನಮ್ಮ ಕೊಡುಕೊಳ್ಳುವಿಕೆಯ ಲೆಕ್ಕಾಚಾರವು ಬಹಳಷ್ಟು ಇರುತ್ತದೆ. ಇತರ ಪೀಳಿಗೆಗಳಿಗಿಂತ ಈ ಪಿತೃಗಳಲ್ಲಿ ಕುಟುಂಬದಲ್ಲಿ ಸಿಲುಕಿಕೊಳ್ಳುವ ಆಸಕ್ತಿಯ ಪ್ರಮಾಣವು ಹೆಚ್ಚಿಗೆ ಇರುವುದರಿಂದ ಅವರ ಈ ಬಂಧನವು ತೀವ್ರವಾಗಿರುತ್ತದೆ. ಆದುದರಿಂದ ಈ ಬಂಧನವನ್ನು ಕಡಿದು ಹಾಕಲು ವೈಯಕ್ತಿಕ ರೀತಿಯಲ್ಲಿ ಒಂದು ವರ್ಷದವರೆಗೆ ಮಾಡುವ ಶ್ರಾದ್ಧಕ್ಕೆ ಸಂಬಂಧಿಸಿದ ವಿಧಿಗಳನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಇದರ ತುಲನೆಯಲ್ಲಿ ಅದಕ್ಕೂ ಮೊದಲಿನ ಇತರ ಪಿತೃಗಳೊಂದಿಗಿನ ನಮ್ಮ ಸಂಬಂಧದ ತೀವ್ರತೆಯು ಕಡಿಮೆ ಇರುವುದರಿಂದ ಅವರಿಗೆ ವಿಧಿಯನ್ನು ಸಾಮೂಹಿಕವಾಗಿ ಪಿತೃಪಕ್ಷದಲ್ಲಿ ಮಾಡುವುದು ಸೂಕ್ತವಾಗಿದೆ. ಆದುದರಿಂದ ಒಂದು ವರ್ಷದವರೆಗೆ ಮಾಡುವ ಶ್ರಾದ್ಧ ಮತ್ತು ಪಿತೃಪಕ್ಷದಲ್ಲಿ ಮಾಡುವ ಶ್ರಾದ್ಧ ಇವರೆಡನ್ನೂ ಮಾಡುವುದು ಆವಶ್ಯಕವಾಗಿದೆ.
ಸಂಗ್ರಹ
*ಶ್ರೀ. ವಿನೋದ ಕಾಮತ್, ರಾಜ್ಯ* *ವಕ್ತಾರರು, ಸನಾತನ* *ಸಂಸ್ಥೆ (ಸಂಪರ್ಕ : 9342599299)**