ತುಮಕೂರು ನಗರದ ಬನಶಂಕರಿಯಲ್ಲಿ ಹಿಂದೂ-ಮುಸ್ಲೀಮರು ಗಣೇಶೋತ್ಸವವನ್ನು ಆಚರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಬಹಳ ಹಿಂದಿನಿಂದಲೂ ಇಲ್ಲಿ ಹಿಂದೂ-ಮುಸ್ಲೀಮರು ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಶಾಂತಿ ಸೌಹಾರ್ದತೆಗೆ ನಾಂದಿ ಹಾಡಿದ್ದಾರೆ.
ಸಮಾಜ ಸೇವಕ ನಜರಾಬಾದ್ ನ ಶಬ್ಬೀರ್ ಮತ್ತು ಅವರ ಸ್ನೇಹಿತರು ಪ್ರತಿ ವರ್ಷವೂ ಬನಶಂಕರಿಯಲ್ಲಿಡುವ ಗಣೇಶೋತ್ಸವದಲ್ಲಿ ಪಾಲ್ಗೊಂಡು ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ತಿಕ್ ಇಲ್ಲಿ ಗಣೇಶ ಹಬ್ಬ ಆಚರಣೆಯನ್ನು ಹಿಂದು-ಮುಸ್ಲಿಮರು ಆಚರಿಸುತ್ತಿದ್ದೇವೆ. ಹಿಂದಿನಿಂದಲೂ ನಾವು ಇದನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ. ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಮುಂದಿನ ದಿನಗಳಲ್ಲಿಯೂ ಹೀಗೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಬ್ಬೀರ್ ಅವರು ಹಿರಿಯರು ನಮ್ಮಂತಹ ಯುವಕರ ಜೊತೆ ಸ್ನೇಹದಿಂದ ಇದ್ದಾರೆ ಎಂದರು.
ಮುಖಂಡ ಶಬ್ಬೀರ್ ಅವರು ಮಾತನಾಡಿ, ಕೊರೊನ ಕಾರಣದಿಂದ 2 ವರ್ಷದಿಂದ ಗಣೇಶ ಹಬ್ಬವನ್ನು ಆಚರಿಸಿರಲಿಲ್ಲ. ಈಗ ಆಚರಿಸಲಾಗುತ್ತಿದೆ. ಹಿಂದೂ –ಮುಸ್ಲೀಮರು ಒಗ್ಗಟ್ಟಾಗಿ ಗಣೇಶೋತ್ಸವನ್ನು ಆಚರಿಸುತ್ತಿದ್ದೇವೆ. ಇದು ಸೌಹಾರ್ದತೆಯ ಸಂಕೇತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಬಾರಕ್ ಪಾಷಾ, ವಳಿಬ, ಸೂರಿ, ಮಂಜು, ಮಾರುತಿ, ನಾಗು, ಅಂಬರೀಷ್ ಮತ್ತು ಕಾರ್ತಿಕ್ ಇದ್ದರು.