ನವದೆಹಲಿ: 2023 ರ ವೇಳೆಗೆ ಭಾರತದಲ್ಲಿ ಜಿ20 ಸಭೆಗಳು ನಡೆಯಲಿದ್ದು, ಆತಿಥ್ಯ ವಹಿಸಲು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಸಜ್ಜುಗೊಂಡಿವೆ.
ಜಿ20ಯ ಅಧ್ಯಕ್ಷತೆ ಈ ವರ್ಷದ ಡಿಸೆಂಬರ್ ನಲ್ಲಿ ಭಾರತಕ್ಕೆ ಸಿಗಲಿದ್ದು, ದೇಶಾದ್ಯಂತ 200 ಸಭೆಗಳು ಆಯೋಜನೆಗೊಳ್ಳಲಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020 ರ ಬಜೆಟ್ ನಲ್ಲಿ ಈ ಕಾರ್ಯಕ್ರಮಗಳಿಗಾಗಿ 100 ಕೋಟಿ ರೂಪಾಯಿ ಬಜೆಟ್ ಅನುದಾನ ಘೋಷಿಸಿದ್ದರು.
ಡಿಸೆಂಬರ್ ನಿಂದ ಒಂದು ವರ್ಷಗಳ ಕಾಲ ಜಿ20ಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳಲಿದ್ದು, 200 ಸಭೆಗಳ ಪೈಕಿ ಕೆಲವು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ನಲ್ಲಿ ನಡೆಯಲಿವೆ. ಈ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.