ಡಿಜೆ ತಂದ ಆಪತ್ತು : ಪ್ರಾಣಾಪಯಾದಿಂದ ವ್ಯಕ್ತಿ ಪಾರು

ಮೆರವಣಿಗೆ ವೇಳೆ ಡಿಜೆ ಸಾಂಗ್ ಬಂದ್ ಮಾಡಿದ್ದಕ್ಕೆ ಇಬ್ಬರಿಗೆ ಚಾಕುವಿನಿಂದ ಇರಿತ : ಹೊರಬಂದ ಕರುಳು ಪ್ರಾಣ ಅಪಾಯದಿಂದ ಪಾರು

ತುಮಕೂರು : ಮೆರವಣಿಗೆ ಸಂದರ್ಭದಲ್ಲಿ ಜನರು ಕುಣಿಯಲ್ಲೆಂದು ಹಾಕಿದ್ದ ಡಿಜೆ ಸಂಗೀತವನ್ನು ಬಂದ್ ಮಾಡಿದ್ದನ್ನು ಆಕ್ಷೇಪಿಸಿ ವ್ಯಕ್ತಿ ಒಬ್ಬ ಇಬ್ಬರಿಗೆ ಚಾಕುವಿನಿಂದ ಇರಿದ ವಿದ್ಯಮಾನ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿ ನಡೆದಿದೆ ಇಬ್ಬರ ಹೊಟ್ಟೆ ಭಾಗಕ್ಕೆ ಚೂರಿಯಿಂದ ಇರಿಯಲಾಗಿದ್ದು ಒಬ್ಬನ ಕರುಳು ಹೊರಗೆ ಬಂದಿದೆ. ಆದರೆ ಸಕಾಲದಲ್ಲಿ ದೊರಕಿದ ಚಿಕಿತ್ಸೆಯಿಂದ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ

ಚಿಕ್ಕಣ್ಣ (53 ),ಗೋವಿಂದರಾಜು( 29 )ಅಲ್ಲೇಗೊಳಗಾದವರು
ಗೋವಿಂದರಾಜು ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿ

ಏನಾಗಿತ್ತು ಮೆರವಣಿಗೆ ವೇಳೆ?

ಶಿರಾ ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಅದ್ದೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಮೆರವಣಿಗೆ ವೇಳೆ ಸಂಭ್ರಮಾಚರಣೆಗಾಗಿ ಡಿಜೆ ಸಿಸ್ಟಮ್ ತರಿಸಲಾಗಿತ್ತು ಯುವಕರು ಡಿಜೆ ಆಡಿಗೆ ಮೈಮರೆತು ಕುಣಿಯುತ್ತಿದ್ದರು ಈ ನಡುವೆ ಸಮಯವಾಯಿತು ಎಂದು. ಬೇರೆ ಬೇರೆ ಯಾವುದೋ ಕಾರಣಕ್ಕೆ ಆಯೋಜಕರು ಡಿಜೆ ಸಾಂಗ್ ಬಂದ್ ಮಾಡಿದರು ಇದು ಗೋವಿಂದರಾಜು ಎಂಬ ಸ್ಥಳೀಯನಿಗೆ ಸಿಟ್ಟು ತರಿಸಿತ್ತು. ಆತ ಡಿಜೆ ಹಚ್ಚುವಂತೆ ಆಯೋಜಕರು ಮತ್ತು ಡಿಜೆ ಆಪರೇಟರ್ಗಳ ಜೊತೆ ಜಗಳ ತೆಗೆದಿದ್ದ ಆತನ ಕಿರಿಕಿರಿ ತಳಲಾರದೆ ಥಳಿಸಿ ಹೊರಗೆ ಕಳಿಸಿದ್ದರು. ನೂರಾರು ಜನರ ಮುಂದೆ ತನ್ನನ್ನು ತಳಿಸಿದ್ದರಿಂದ ಸಿಟ್ಟಿಗೆದ್ದಿದ್ದ ಗೋವಿಂದರಾಜು ಚಾಕು ತಂದು ಇಬ್ಬರ ಮೇಲೆ ಇರದೇ ಬಿಟ್ಟ

ಚಿಕ್ಕಣ್ಣ (53 )ಗೋವಿಂದರಾಜು (29 ) ಮೇಲೆ ಅಲ್ಲೇ ನಡೆದಿದ್ದು ತಕ್ಷಣವೇ ಗಾಯಾಳುಗಳನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ಇರಿತದ ತೀರ್ವತೆ ಎಷ್ಟಿತೆಂದರೆ ಚಿಕ್ಕಣ್ಣನ ಕರಳು ಹೊರಗೆ ಬಂದಿತ್ತು ಆತನನ್ನು ಕೂಡಲೇ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದೀಗ ಗಾಯಗೊಂಡ ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ
ಇನ್ನು ಘಟನೆಗೆ ಸಂಬಂಧಿಸಿದಂತೆ ಚೂರಿಯಿಂದ ಇರಿದ ಗೋವಿಂದರಾಜುವನ್ನು ಪೊಲೀಸರು ಬಂಧಿಸಿದ್ದಾರೆ.

ಇಷ್ಟೇ ಅಲ್ಲದೇ ಡಿಜಿ ಪ್ರಯುಕ್ತ ಇತ್ತೀಚೆಗೆ ತುಮಕೂರು ತಾಲ್ಲೂಕು ಹೆಬ್ಬಾಕ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಇದುವರೆವಿಗೂ ಯಾವುದೇ ಕ್ರಮವನ್ನು ಸಂಬಂಧಪಟ್ಟ ಇಲಾಖೆಯವರು ಕೈಗೊಳ್ಳದೇ ಇರುವುದು ಶೋಚನೀಯ ಸಂಗತಿ, ಜೊತೆಗೆ ಜಿಲ್ಲೆಯಲ್ಲಿ ಈ ರೀತಿಯಾದ ಡಿಜೆ ಸಂಬಂಧಿಸಿದ ಪ್ರಕರಣಗಳು ನಡೆಯತ್ತಿದ್ದರೂ ಸಂಬಂಧಪಟ್ಟವರು ಸುಮ್ಮನೆ ಕೂತಿರುವುದನ್ನು ನೋಡಿದರೆ, ಜನರಿಗೆ ಸರ್ಕಾರಿ ಇಲಾಖೆಗಳ ಮೇಲೆ ಅಪ ನಂಬಿಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಜನರ ಆಕ್ರೋಶ ಯಾವ ಮಟ್ಟಕ್ಕೇ ಹೋಗುತ್ತದೋ ಎಂಬುದು ಆತಂಕದ ವಿಷಯ.

Leave a Reply

Your email address will not be published. Required fields are marked *

error: Content is protected !!