ಜೆಡಿಎಸ್‌ ಪಕ್ಷಕ್ಕೆ ಬೈ ಬೈ ಹೇಳಲಿದ್ದಾರಾ ಗುಬ್ಬಿ ಶಾಸಕ ವಾಸಣ್ಣ

ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರು ಹಿರಿಯ ರಾಜಕಾರಣಿ, ಹ್ಯಾಟ್ರಿಕ್‌ ಎಂ.ಎಲ್.ಎ. ಆದ ಎಸ್.ಆರ್.ಶ್ರೀನಿವಾಸ್‌ (ವಾಸಣ್ಣ)ರವರು ತಮ್ಮ ಜೆಡಿಎಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ಶೀಘ್ರದಲ್ಲಿಯೇ ನೀಡಲಿದ್ಮುಂದು ದಿನ ದಿನಗಳಲ್ಲಿ ಸ್ವತಂತ್ರ್ಯ ಅಭ್ಯರ್ಥಿಯೋ ಅಥವಾ ಯಾವುದಾದರೂ ಪ್ರಮುಖ ಪಕ್ಷದ ಅಭ್ಯರ್ಥಿಯಾಗುತ್ತೇನೋ ನೋಡುವ ಎಂದು ಗೊಂದಲದ ಮಾತುಗಳನ್ನು ಹೇಳುತ್ತಿರುವ ಬೆನ್ನಲ್ಲೇ, ತಮ್ಮ ಆಪ್ತರು, ಬೆಂಬಲಿಗರು ತಮ್ಮಗಳ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ದಿನಾಂಕ : 24.9.22 ಶನಿವಾರ ನೀಡಲು ಹೊರಟಿದ್ದಾರೆ.

ಈ ಎಲ್ಲದರ ಮಧ್ಯೆ ವಾಸಣ್ಣನವರ ಮುಂದಿನ ನಡೆ ಏನು ಎಂಬುದು ಅವರ ಅಭಿಮಾನಿಗಳ ನಿರೀಕ್ಷೆಯಾಗಿದ್ದು, ಅಭಿಮಾನಿಗಳು ಮತ್ತು ಕ್ಷೇತ್ರದ ಜನತೆಯ ಬೆನ್ನುಲುಬಾಗಿ ತಾನು ಸದಾಕಾಲ ನಿಲ್ಲುವುದಾಗಿ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!