ತುಮಕೂರು : ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಪಿಕ ಎಂಬುವವರ ಹತ್ತಿರ ಪಾವಗಡ ಪ್ರದೀಪ್‌ನ ಆಪ್ತರಾದ ಜ್ಯೋತಿಶ್ರೀನಿವಾಸ್ ಹಾಗೂ ಇತರರು ತಾವೊಂದು ಸಾಲಕ್ಕೆ ಅರ್ಜಿ ಹಾಕಬೇಕಾಗಿದ್ದು ಅದನ್ನು ಮಾಡಿಕೊಡಿ ಎಂದು ದುಂಬಾಲು ಬೀಳುತ್ತಾರೆ, ಅದಕ್ಕೆ ತಗಲುವ ಖರ್ಚು ವೆಚ್ಚಗಳನ್ನು ಅವರಿಗೆ ಆಕೆ ತಿಳಿಸುತ್ತಾಳೆ, ಅದನ್ನೇ ಬಂಡವಾಳವನ್ನಾಗಿಸಿಕೊಂಡು ಅಧಿಕಾರಿಗೆ ಅರಿವಿಲ್ಲದೇ ಆಕೆಯು ತಿಳಿಸಿದ ಖರ್ಚು ವೆಚ್ಚಗಳನ್ನೇ ಲಂಚವನ್ನಾಗಿ ಕೇಳುತ್ತಿದ್ದಾಳೆಂದು ಬಿಂಬಿಸಿ ಆಕೆಯನ್ನು ಬ್ಲಾಕ್‌ಮೈಲ್ ಮಾಡಲು ಹೊರಡುತ್ತಾರೆ.
ಇದರ ಭಾಗವಾಗಿ ತಾವೊಂದು ಪತ್ರಿಕೆಯ ಸಂಪಾದಕರೆಂದು ಹೇಳಿಕೊಂಡು ಪಾವಗಡ ಪ್ರದೀಪ್ ಮತ್ತು ಅವರ ಪತ್ರಿಕೆಯ ವರದಿಗಾರರಾದ ಮಾಧುರಿ ಹಾಗೂ ಅವರ ಸಂಗಡಿಗರಾದ ಮಾತೃಭೂಮಿ ಸೇವಾ ಸಂಸ್ಥೆಯ ಮುಖ್ಯಸ್ಥರೆಂದು ಹೇಳಿಕೊಂಡ ಜ್ಯೋತಿಶ್ರೀನಿವಾಸ್, ಬೆಂಗಳೂರು ಮೂಲದ ಲೀಗಲ್ ಅಡ್ವೈಜರ್ ಎಂಬುವವರು ಪಾಲಿಕೆಯ ಅಧಿಕಾರಿಗೆ ನಿತ್ಯ ಬ್ಲಾಕ್‌ಮೈಲ್ ಮಾಡಿದ್ದಲ್ಲದೇ, ಮೊಬೈಲ್ ಮೂಲಕ ಅಶ್ಲೀಲ ಸಂದೇಶ, ಮಾನಸಿಕ ಕಿರುಕುಳ ಕೊಡಲು ಮುಂದಾಗುತ್ತಾರೆ.
ಈ ವಿಚಾರವಾಗಿ ಕಳೆದೆರಡು ದಿನಗಳ ಹಿಂದೆ ತಾವು ನಿನ್ನ ವಿಡಿಯೋವನ್ನು ತಮ್ಮ ಮೊಬೈಲ್‌ನಿಂದ ಡಿಲೀಟ್ ಮಾಡಬೇಕೆಂದರೆ ನೀನು ನಮಗೆ ಸಕಲ ರೀತಿಯಲ್ಲಿ ಸಹಕರಿಸಬೇಕೆಂದು ಹಾಗೂ ತಾನು ರಾಜೀ ಮಾಡಿಸುವುದಾಗಿ ಹೇಳಿ ರಾಣೆಬೆನ್ನೂರು ಮೂಲದ ಪತ್ರಕರ್ತ ಶಾಸ್ತ್ರಿ ಎಂದು ಹೇಳಿಕೊಂಡು ಪರಿಚಿತನಾದವ ಹಾಗೂ ಪಾವಗಡ ಪ್ರದೀಪ್ ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಂಡು ದೀಪಿಕ ಎಂಬುವವರ ಮೇಲೆ ಮಾನಸಿಕವಾಗಿ ಒತ್ತಡ ಹೇರಿದ್ದಲ್ಲದೇ ತಮಗೆ ಸಹಕರಿಸಬೇಕೆಂದು ಒತ್ತಾಯಿಸುತ್ತಾರೆ. ಆಕೆಯು ಅವರ ಒತ್ತಡವನ್ನು ನಿರಾಕರಿಸಿ ಅಲ್ಲಿಂದ ವಾಪಸ್ ತೆರಳುತ್ತಾಳೆ.
ಇದಕ್ಕೆ ಕುಪಿತಗೊಂಡ ಪಾವಗಡ ಪ್ರದೀಪ್ ಹಾಗೂ ಅವರ ಸಹಚರರು ಆಕೆಯು ಪಾಲಿಕೆಯಲ್ಲಿ ಕರ್ತನಿರ್ವಹಿಸುತ್ತಿದ್ದ ವೇಳೆ ಅಲ್ಲಿಗೆ ತೆರಳಿ ಆಕೆಗೆ ವಿನಾಃಕಾರಣ ತೊಂದರೆಯನ್ನು ನೀಡಿದ್ದಲ್ಲದೆ ಕರ್ತವ್ಯದ ವೇಳೆಯಲ್ಲಿ ಆಕೆಯ ಮೇಲೆ ಹಲ್ಲೇ ಮಾಡಿರುತ್ತಾರೆ, ಆಕೆಯ ಮೇಲೆ ಇಲ್ಲ ಸಲ್ಲದ ಆರೋಪಗಳ ಸುರಿಮಳೆಯನ್ನು ಮಾಡುತ್ತಾ, ತಾವು ಪ್ರತಿಷ್ಠಿತ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳುವುದಲ್ಲದೇ, ನಾವು ಸಮಾಜ ಸೇವಕರು, ಇತ್ಯಾದಿಯಾಗಿ ಹೇಳಿಕೊಂಡು ಕರ್ತವ್ಯನಿರತ ಅಧಿಕಾರಿಯ ಮೇಲೆ ಹಲ್ಲೇ ಮಾಡಿರುತ್ತಾರೆ.
ಈ ವಿಚಾರವನ್ನು ಸೂಕ್ಷ್ಮವಾಗಿ ತಿಳಿದ ಸಮಾಜಸೇವಕರು, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷರಾದ ಗಣೇಶ್ ಎಂಬುವವರು ಅಧಿಕಾರಿಯ ಪರವಾಗಿ ನಿಂತು ಮಾತನಾಡಲು ಮುಂದಾಗಿ ಅವರ ಮಾತಿಗೂ ಬೆಲೆ ಕೊಡದೇ ಅವರ ಮೇಲೆಯೇ ಹೌಹಾರಿದ್ದು, ಕುಪಿತಗೊಂಡು ಒಂದು ಹೆಣ್ಣು ಮಗಳನ್ನು ನಿರ್ಜನ ಪ್ರದೇಶ ಹಾಗೂ ರಾತ್ರಿಯ ವೇಳೆಯಲ್ಲಿ ಆಚೆ ಬರಲು ಏಕೇ ಕರೆದರಿ ಎಂದು ಹೇಳಿ ಪಾವಗಡ ಪ್ರದೀಪ್‌ಗೆ ಸರಿಯಾಗಿ ಬುದ್ಧಿ ಹೇಳಿದ್ದಲ್ಲದೇ, ಸಾರ್ವಜನಿಕರ ಸಮಕ್ಷಮದಲ್ಲೇ ಪ್ರದೀಪ್‌ಗೆ ಸರಿಯಾಗಿ ಗೂಸವನ್ನು ನೀಡುತ್ತಾರೆ.
ಆ ಸಮಯಕ್ಕೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಪಾಲಿಕೆಯ ಅಧಿಕಾರಿಗಳು, ಪಾಲಿಕೆ ಸದಸ್ಯರುಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳೆ ತಪ್ಪಿತಸ್ಥರುಗಳಾದ ಪಾವಗಡ ಪ್ರದೀಪ್, ಮಾಧುರಿ, ಜ್ಯೋತಿ ಶ್ರೀನಿವಾಸ್ ಹಾಗೂ ಲೀಗಲ್ ಅಡ್ವೈಜರ್ ಎಂದು ಹೇಳಿಕೊಂಡಿದ್ದವರನ್ನು ಠಾಣೆಗೆ ಕರೆದೊಯ್ಯುತ್ತಾರೆ.
ಇಂತಹ ನಕಲಿ ಪತ್ರಕರ್ತರು, ನಕಲಿ ಸಮಾಜ ಸೇವಕರೆಂದು ಹೇಳಿಕೊಂಡು ಅಧಿಕಾರಿಗಳನ್ನು, ಮುಗ್ದರನ್ನು ನಂಬಿಸಿ, ವಂಚಿಸಿ, ಬ್ಲಾಕ್ ಮೈಲ್ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಿನದಾಗಿ ಕಂಡು ಬರುತ್ತಿದ್ದು, ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಪತ್ರಕರ್ತರಿಗೆ ಮಾಡಿದ ಅವಮಾನವಾಗಿದೆ ಮತ್ತು ಪತ್ರಕರ್ತರ ಸೋಗಿನಲ್ಲಿ ನಕಲಿ ವ್ಯಕ್ತಿಗಳು ಈ ರೀತಿಯಾಗಿ ಬಹಳಷ್ಟು ಜನ ಬೇರುಬಿಡುತ್ತಿದ್ದು, ಇವುಗಳನ್ನು ಶೀಘ್ರದಲ್ಲಿಯೇ ಮಟ್ಟ ಹಾಕಬೇಕಾಗಿದೆ. ಪತ್ರಕರ್ತರಿಗೆ ಸಮಾಜದಲ್ಲಿ ಉತ್ತಮ ಗೌರವವಿದ್ದು, ಅದಕ್ಕೆ ಕಳಂಕ ಬರುವಂತಹ ಕೆಲಸವನ್ನು ಇಂತಹವರಿಂದ ನಡೆಯುತ್ತಿದೆ.
ಇನ್ನು ಸುದ್ದಿ ಪ್ರಸಾರವಾಗುತ್ತಿದ್ದಂತೆ ಪ್ರದೀಪ್ ಪಾವಗಡ ರವರ ಮೇಲೆ ಹಲವು ಚೆಕ್ ಬೌನ್ಸ್ ಕೇಸ್ಗಳು ಸಹ ಇರುವುದಾಗಿ ನೊಂದ ಸಾರ್ವಜನಿಕರು ಸಹ ಪಾವಗಡದಿಂದ ಕರೆ ಮಾಡಿ ಪತ್ರಿಕೆಯೊಂದಿಗೆ ಮಾತನಾಡಿ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ