ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯ ಮೇಲೆ ತನಿಖೆಗೆ ರಾಜ್ಯ ಸರ್ಕಾರದಿಂದ ಖಡಕ್ ಆದೇಶ

ತುಮಕೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಲಕ್ಷ್ಮೀಕಾಂತ್ ಅಲಿಯಾಸ್ ಚಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಈ ಸಂಬಂಧ ಚಂದು ಮೇಲಧಿಕಾರಿಗಳಿಗೆ ದೂರು ನೀಡಿದಕ್ಕಾಗಿ ತನ್ನ ಸಾವಿಗೆ ಸುಳ್ಳು ಕಂಪ್ಲೇಂಟ್‌ಗಳನ್ನು ನಮೂದು ಮಾಡಿಸಲು ಕೆಲವರು ಕಾರಣ ಎಂದು ವಿಡಿಯೋ ರಿಲೀಸ್ ಮಾಡಿದ್ದಕ್ಕೆ ತೊಂದರೆಯಾಗುತ್ತದೆಂದು ರಕ್ಷಿಸುವ ನಾಟಕ ಮಾಡಿ ಚಂದು ವಿರುದ್ಧ ಪದೇ ಪದೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಮಾದ್ಯಮಕ್ಕೆ ಅವರ ವಿರುದ್ಧ ಸುಳ್ಳು ಹೇಳಿಕೆಗಳನ್ನು ಕೊಡಿಸಿ, ಸಮಾಜದಲ್ಲಿ ತನ್ನ ಚಾರಿತ್ರ್ಯ ಹರಣ ಮಾಡಿರುವುದಾಗಿ ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸುವಂತೆ ಡಿಜಿಪಿ ಕರ್ನಾಟಕ ನ್ಯಾಯಕ್ಕಾಗಿ ಮೊರೆ ಹೋಗಿದ್ದರು, ಐಜಿಪಿ ಕೇಂದ್ರ ವಲಯಕ್ಕೆ ಈ ಕುರಿತು ತನಿಖೆ ಮಾಡಿ ವರದಿಯ ಆದೇಶ ಸಲ್ಲಿಸುವಂತೆ ವರದಿ ಸಲ್ಲಿಸುತ್ತಾರೆ. ಆ ತನಿಖೆ ಪೂರ್ಣಗೊಳ್ಳದ ಕಾರಣ ಚಂದು ರವರು ತೀವ್ರ ಆಘಾತಕ್ಕೊಳಗಾಗಿ, ಸುಸೈಡ್ ಮಾಡಿಕೊಳ್ಳಲು ಹೋಗಿ ಆ ಕುರಿತು ಒಂದು ವಿಡಿಯೋ ತುಣಕ್ಕನ್ನೂ ಸಹ ರಿಲೀಸ್ ಮಾಡಲಾಗುತ್ತದೆ. ವಿಡಿಯೋ ರಿಲೀಸ್ ಮಾಡಿದ ಕಾರಣ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಗೆ ತೊಂದರೆಯಾಗುತ್ತದೆಂದು ಅರಿತು, ರೆಸ್ಕ್ಯೂ ಟೀಂ ರಚನೆ ಮಾಡಿ, ರೆಸ್ಕ್ಯೂ ಮಾಡೋ ನಾಟಕ ಮಾಡಿ, ಮತ್ತೊಮ್ಮೆ ಎರಡು ಸುಳ್ಳು ಎಫ್.ಐ.ಆರ್.ಗಳನ್ನು ಮಾಡುತ್ತಾರೆ. ಈ ಎಲ್ಲಾ ಘಟನೆ ನಡೆದ ನಂತರ ಚಂದುರವರು ಡಿಜಿಪಿರವರಿಗೆ ಮತ್ತೊಂದು ದೂರನ್ನು ಸಲ್ಲಿಸಿತ್ತಾರೆ, ಆದರೂ ಏನೂ ಪ್ರಯೋಜನವಾಗದ ಕಾರಣ.


ಮಾನ್ಯ ಮುಖ್ಯಮಂತ್ರಿಗಳಿಗೆ 01-07-2022ರಂದು ಲಿಖಿತ ದೂರನ್ನು ಚಂದುರವರು ನೀಡುವುದಲ್ಲದೆ, ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯ ಮೇಲೆ ನನಗೆ ನಂಭಿಕೆಯಿಲ್ಲದ ಕಾರಣ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಕೋರಿಕೆಯನ್ನು ಸಲ್ಲಿಸುತ್ತಾರೆ, ಅದಕ್ಕೆ ಸಂಬಂಧಿಸಿದಂತೆ ದಿನಾಂಕ 16-08-2022ರಂದು ಸರ್ಕಾರದ ಅಧೀನ ಕಾರ್ಯದರ್ಶಿ (ಕಾನೂನು ಮತ್ತು ಸುವ್ಯವಸ್ಥೆ) ಒಳ ಆಡಳಿತ ಇಲಾಖೆಯವರು, ಪೊಲೀಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆಯ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಂಡು, ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚನೆಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಧಿಕ್ಕಿನತ್ತ ಸಾಗುತ್ತದೋ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!