ಶಿರಾ: ಮಂಗಳವಾರ ಶಾಲೆಯಿಂದ ಮನೆಗೆ ಬರುತ್ತದೆ ಶಿಕ್ಷಕ ಚನ್ನನಕುಂಟೆ ಗ್ರಾಮದ ಬಳಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದ್ದ ಅದಕ್ಕೆ ಇಂದು ಶಾಸಕರಾದ ಡಾ ರಾಜೇಶ್ ಗೌಡ ರವರು ಇಂದು ನಗರದ ಆರಿಫ್ ಖಾನ್ ರವರು ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಳೆಯ ಅಬ್ಬರ ಜೋರಾಗಿದ್ದು,
ತಾಲ್ಲೂಕಿನ ಹಲವಾರು ಕರೆಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ ಶಿಕ್ಷಕ ನೀರಿನಲ್ಲಿ ಕೊಚ್ಚಿಕೊಂಡು ಹೊದ ಹಿನ್ನೆಲೆಯಲ್ಲಿ ಇಂದು ತಾಲ್ಲೂಕು ಅಡಳಿತ ತಾಲ್ಲೂಕು ಹಲವು ಕೆರೆ ಮತ್ತು ನೀರುಹರಿಯವ ಜಾಗದಲ್ಲಿ ಸೇತುವೆಗಳು ಮುಳುಗಡೆಯಾಗಿರುವ ಬಾಗದಲ್ಲಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ಜನ ಸುತ್ತುವರೆದು ಸಂಚಾರ ನಡೆಸುವಂತಾಗಿದೆ. ಸುತ್ತಲು ನೀರು ಆವರಿಸಿದೆ. ಇನ್ನು ಬಂದ ಆಗಿರುವ ಸೇತುಗಳಿಗೆ ಬ್ಯಾರಿಕೇಟ್ ಹಾಕಿ ಜನ ಹಳ್ಳದ ಕಡೆಗೆ ತೆರಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ ಬಂದೊಬಸ್ತ್ ಮಾಡಲಾಗುತ್ತದೆ ಎಂದು ವಿವರಿಸಿದರು…
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತ ರವರು, ಡಿ ವೈ ಎಸ್ ಪಿ ನವೀನ್ ರವರು,ಬಿ. ಇ. ಓ,ಶಂಕರ್,ನಗರಸಭೆ ಅಧ್ಯಕ್ಷರು ಅಂಜಿನಪ್ಪ, ನಗರ ಸಭಾ ಸದಸ್ಯರು,ಮುಂತಾದವರು ಹಾಜರಿದ್ದರು..
ಇನ್ನೂ ಗ್ರಾಮೀಣ ಬಾಗದಲ್ಲಿ ಮಳೆಗಾಲದ ಆರಂಭದಲ್ಲಿ ಹೆಚ್ಚಿನ ನೀರು ಹರಿದುಬರುತ್ತಿವ ಹಿನ್ನಲೆ ಮುಂದಿನ ಮಳೆಗಾಲದಲ್ಲಿ ಹೇಗೆ ಎಂಬಗ್ರಾಮಸ್ಥರಲ್ಲಿ ಆತಂಕ ಕೂಡ ಹೆಚ್ಚಾಗಿದೆ.