ತುಮಕೂರು ನಗರದ ಸದಾಶಿವನಗರದ ನಾಲ್ಕನೇ ಮುಖ್ಯರಸ್ತೆ 11ನೇ ಅಡ್ಡರಸ್ತೆಯಲ್ಲಿ ಮಳೆ ಬರುವ ಸಮಯದಲ್ಲಿ ಚರಂಡಿ ಕಾಮಗಾರಿ ನಿರ್ವಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಇಡೀ ಜಿಲ್ಲೆಯಲ್ಲಿ ಸಾಕಷ್ಟು ವ್ಯಾಪಕ ಮಳೆಯಾಗುತ್ತಿರುವ ಇಂತಹ ಸಮಯದಲ್ಲಿ ಕಂಟ್ರಾಕ್ಟರ್ ತರಾತುರಿಯಲ್ಲಿ ಸುರಿಯುವ ಮಳೆಯಲಿ ಕಾಮಗಾರಿಯನ್ನು ನಿರ್ವಹಿಸುತ್ತಿರುವುದು ಯಾವ ಉದ್ದೇಶಕ್ಕೆ ಎಂದು ತಿಳಿಯುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕೂಡಲೇ ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.
ಇದಕ್ಕೆ ಸಂಬಂದಿಸಿದಂತೆ ಟೆಂಡರ್ ಆಗಿ ಸಾಕಷ್ಟು ಸಮಯ ಇದ್ದರೂ ಸಹ ಜಿಲ್ಲೆಯಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯ ನಡುವೆಯೇ ಚರಂಡಿ ಕಾಮಗಾರಿ ಮಾಡುತ್ತಿರುವುದು ಅಧಿಕಾರಿಗಳ ನಡೆಯ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕಂಟ್ರಾಕ್ಟರ್ ಗೆ ಬಿಲ್ ಮಾಡಿಕೊಳ್ಳುವ ತರಾತುರಿಯೋ ಅಥವಾ ಅಧಿಕಾರಿಗಳಿಗೆ ಕಮಿಷನ್ ಪಡೆಯುವ ಆತುರವ ಮಳೆಯಲ್ಲಿ ಚರಂಡಿ ಕಾಮಗಾರಿಯನ್ನು ಯಾವ ಉದ್ದೇಶಕ್ಕಾಗಿ ಸುರಿಯುವ ಮಳೆಯಲ್ಲಿಯೇ ಮಾಡುತ್ತಿದ್ದಾರೆ ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿದೆ.
ಇಂಜಿನಿಯರ್ ರವರನ್ನು ಸಂಪರ್ಕಿಸಿದರೆ ಮಳೆ ಇಲ್ಲವಲ್ಲ ಎಂದು ಉಡಫೆ ಉತ್ತರವನ್ನು ನೀಡುತ್ತಾರೆ. ಇಂತಹ ಕಳಪೆ ಕಾಮಗಾರಿಗಳಿಗೆ ಅಧಿಕಾರಿಗಳು ಸಹ ಶಾಮೀಲು ಆಗುವ ಮೂಲಕ ಅಕ್ರಮ ಎಸಗುತ್ತಿದ್ದಾರಾ ಎನ್ನುವ ಅನುಮಾನ ಮೂಡುವುದು ಸಹಜ.
ಪಾಲಿಕೆಯ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತಹ ಅವಶ್ಯಕತೆ ಇದ್ದು, ಇನ್ನಾದರೂ ಈ ಕುರಿತು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.