ಬಾಲ್ಯದಲ್ಲಿನ ತುಂಟಾಟಗಳು, ಮುಗ್ದತೆ ದಿನ ಕಳೆದಂತೆ ಮಾಯವಾಗುತ್ತಿರುವೆ

ತುಮಕೂರು
ಬಾಲ್ಯದಲ್ಲಿನ ತುಂಟಾಟಗಳು, ಮುಗ್ದತೆ ದಿನ ಕಳೆದಂತೆ ಮಾಯವಾಗುತ್ತಿರುವೆ. ಇಂತಹ ಸುಮಧುರವಾದ ದಿನಗಳು ನಮ್ಮ ಜೀವನಪೂರ್ತಿ ನೆನಪಿನಲ್ಲಿ ಇರುವಂತಹದು. ಕೃಷ್ಣವೇಷ ಸ್ಪರ್ಧೆಯಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪಾಲಕರು ಪ್ರೋತ್ಸಾಹಿಸಬೇಕು ಎಂದು ಸಮಾಜಸೇವಕ ಎಸ್.ಪಿ.ಚಿದಾನಂದ್ ಹೇಳಿದರು.


ನಗರದ ಅಮಾನಿಕೆರೆ ಬಳಿಯ ಕನ್ನಡಭವನದಲ್ಲಿ ಭಾವಸಾರ ಬ್ರಿಗೇಡ್ ವತಿಯಿಂದ ಸ್ಪೂರ್ತಿ ಡೆವಲರ‍್ಸ್ ಹಾಗೂ ಪ್ರೆಸ್‌ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ದ್ವಿತಿಯ ವರ್ಷದ ಕೃಷ್ಣವೇಷ ಸ್ಪರ್ಧೆ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇದೊಂದು ಭಾವನಾತ್ಮಕವಾದ ಕಾರ್ಯಕ್ರಮ. ಮಕ್ಕಳು ದೇವರ ಸಮಾನ ಎಂದು ಕರೆಯುತ್ತಾರೆ. ಅಂತಹ ಮಕ್ಕಳಿಗೆ ದೇವರ ವೇಷಭೊಷಣಗಳನ್ನು ಹಾಕಿ ನೋಡುವುದೇ ಒಂದು ಖುಷಿಯ ವಿಚಾರ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಂಕ ಪಡೆಯುವುದೇ ಒಂದು ಸಾಧನೆಯಾಗಿದೆ. ಅದರ ಹೊರತಾಗಿಯೂ ಮಕ್ಕಳಲ್ಲಿ ನಮ್ಮ ಸಾಂಸ್ಕೃತಿಕ , ಧಾರ್ಮಿಕ ವಿಚಾರಗಳ ಬಗ್ಗೆ ಅರಿವು ಮೂಡಿಸಿ ಅವರಿಗೆ ಕೃಷ್ಣ, ರಾಮ ಪಾತ್ರಗಳ ಬಗ್ಗೆ ತಿಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಹಿಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ಹೆಚ್ಚು ಇರಲಿಲ್ಲ. ಆದರೆ ಬದಲಾದ ದಿನಮಾನಗಳಲ್ಲಿ ಎಲ್ಲ ಕಡೆಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆಯುತ್ತಾಲಿದ್ದು ನಮ್ಮ ಆಚಾರ, ವಿಚಾರ, ಸಂಸ್ಕೃತಿ ಧಾರ್ಮಿಕತೆ ಬಗ್ಗೆ ಮಕ್ಕಳು ತಿಳಿದುಕೊಳ್ಳಲು ಸಹಕಾರಿಯಾಗುತ್ತಿವೆ. ನಾವು ಸಣ್ಣವರಿದ್ದಾಗ ಹಳ್ಳಿಗಳಲ್ಲಿ ನಡೆಯುತ್ತಲಿದ್ದ ನಾಟಕಗಳನ್ನು ನೋಡಿ ಕೃಷ್ಣ ಎಂದರೆ, ರಾಮ ಎಂದರೆ ಹೀಗೆ ಇರುತ್ತಾನಾ ಎಂದು ಅಂದುಕೊಳ್ಳುತ್ತಿದ್ದವು. ಕಾಲಕ್ರಮೇಣ ಅಂತಹ ಪಾತ್ರಗಳಲ್ಲಿ ನಮ್ಮ ಮಕ್ಕಳನ್ನು ನೋಡಿ ಸಂತೋಷಪಡುತ್ತಿದ್ದೇವೆ. ಮಕ್ಕಳಿಗೆ ಬರೀ ವೇಷಭೂಷಣ ಹಾಕಿದರೆ ಸಾಲದು ಅವರಲ್ಲಿ ಪರೋಪಕಾರದ ಗುಣಗಳನ್ನು ಬೆಳೆಸುವ ಮೂಲಕ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರ ಮೇಲೆ ಇರುತ್ತದೆ ಎಂದರು.
ಸಮಾಜಸೇವಕಿ ರೇಖಾ ಶಿವಕುಮಾರ್ ಮಾತನಾಡಿ, ಕೃಷ್ಣವೇಷ ಸ್ಪರ್ಧೆ ಹಾಗೂ ಧಾರ್ಮಿಕ, ಸಮಾಜಮುಖಿ ಕಾರ್ಯಗಳನ್ನು ಆಯೋಜನೆ ಮಾಡುವ ಮೂಲಕ ಭಾವಸಾರ ಬ್ರಿಗೇಡ್ ಉತ್ತಮ ಕಾರ್ಯ ಮಾಡುತ್ತಿದೆ. ಸುಮಾರು ವರ್ಷಗಳಿಂದ ನಾನು ಸಹ ಭಾವಸಾರ ಬ್ರಿಗೇಡ್‌ನೊಂದಿಗೆ ಸೇರಿ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇವೆ. ನಮೋ ಭಾರತ್ ಮೂಲಕ ಕೇರಳದ ನೆರೆ ಸಂತ್ರಸ್ತರಿಗೆ ನೆರವು ಹಾಗೂ ಉತ್ತರ
ಕರ್ನಾಟಕದ ನೆರೆ ಹಾವಳಿಗೆ ತತ್ತರಿಸಿದ್ದ ಜನರಿಗೆ ಅಗತ್ಯ ಸೌಲಭ್ಯ ಒದಗಿಸುವ ಕಾರ್ಯ ಮಾಡಿದನ್ನು ಸ್ಮರಿಸಿದರು.
ಕಸಾಪ ಕಾರ್ಯದರ್ಶಿ ಸಣ್ಣಹೊನ್ನಯ್ಯ ಕಂಟಲಗೆರೆ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಕೃಷ್ಣ , ರಾಮ ಪಾತ್ರಗಳಿಗೆ ವಿಶೇಷವಾದ ಅರ್ಥ ನೀಡಲಾಗಿದೆ. ಮಕ್ಕಳು ಕೃಷ್ಣ , ರಾಧೆಯರ ವೇಷ ತೊಟ್ಟು ಸಂಭ್ರಮಿಸುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನಪದ ಸಾಹಿತ್ಯ ಮಹತ್ವ ಕಳೆದುಕೊಳ್ಳುತ್ತಿದೆ ಎಂಬ ಆತಂಕ ಉಂಟಾಗಿದ್ದು ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾವಸಾರ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷ ನಾಗೇಶ್ ವಿ.ಬಿ.ತೇಲ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾವಸಾರ ಬ್ರಿಗೇಡ್ ಕಳೆದ ಎರಡು ವರ್ಷದಿಂದ ಮಾಡಿದ್ದಂತಹ ಹತ್ತು ಹಲವು ಸಮಾಜಮುಖಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಬಗ್ಗೆ ತಿಳಿಸಿದರಲ್ಲದೆ, ಮುಂದೆಯೂ ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಎಲ್ಲರ ಸಹಕಾರ ಅಗತ್ಯ ಎಂದರು.


ಕೃಷ್ಣವೇಷ ಸ್ಫರ್ಧೆಯಲ್ಲಿ ಒಂದರಿAದ ೫ನೇ ವರ್ಷದ ವಿಭಾಗದಲ್ಲಿ ದಾನವಿ ಪ್ರಥಮ ಬಹುಮಾನ, ಚಾರ್ವಿ ಎರಡನೇ ಬಹುಮಾನ, ನಿಧಿ ಹಾಗೂ ದಕ್ಷಶೆಟ್ಟಿ ಮೂರನೇ ಬಹುಮಾನ ಪಡೆದರೆ ೬ರಿಂದ ೧೦ ವರ್ಷದ ವಿಭಾಗದಲ್ಲಿ ಲೇಖನಾ ಪ್ರಥಮ ಬಹುಮಾನ, ರಾಯನ್ ಷಾ ದ್ವಿತಿಯ ಬಹುಮಾನ ಹಿತ ಹರ್ಷಿಣಿ ಹಾಗೂ ಸನ್ನಿಧಿಭಟ್ ಮೂರನೇ ಬಹುಮಾನ ಪಡೆದರು. ಭಾಗವಹಿಸಿದ್ದ ಎಲ್ಲ ಮಕ್ಕಳಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತೀರ್ಪುಗಾರರಾಗಿ ಸುಮತಿ, ನಳಿನಾ ಪ್ರಸಾದ್ ಹಾಗೂ ದೀಪು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಟೂಡಾ ಅಧ್ಯಕ್ಷರಾದ ಎಚ್.ಜಿ.ಚಂದ್ರಶೇಖರ್, ತುಮಕೂರು ಮುಖ್ಯ ರೋಟರಿ ಅಧ್ಯಕ್ಷ ಶಿವಣ್ಣ (ಮಲ್ಲಸಂದ್ರ), ಹನುಮಾನ್ ಸಾ ಮಿಲ್ ಮಾಲೀಕ ಅಮೃತಕುಮಾರ್, ಬಿಜೆಪಿ ಓಬಿಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಬನಶಂಕರಿ ಬಾಬು, ಸಮಾಜ ಸೇವಕಿ ನಿರ್ಮಲ ಮಹೇಶ್ , ಪ್ರೆಸ್‌ಕ್ಲಬ್ ಸಹಕಾರ್ಯದರ್ಶಿ ಸತೀಶ್ ಟಿ.ಎನ್. ಸಂಘಟನಾ ಕಾರ್ಯದರ್ಶಿ ರಂಗನಾಥ್ ಕೆ. ಮರಡಿ, ಭಾವಸಾರ ಬ್ರಿಗೇಡ್‌ನ ಪದಾಧಿಕಾರಿಗಳಾದ ಟಿ.ಕೆ.ವಿನುತ್, ಸೌಮ್ಯಶ್ರೀ, ದೀಪಶ್ರೀ ವಿ.ಬಿ.ತೇಲ್ಕರ್, ನಾಗೇಶ್ ಎ.ಆರ್. ಲಕ್ಷಿö್ಮÃ ನರಸಿಂಹ, ದೀಪಕ್ ಸುಲಾಖೆ, ರಂಜಿತ್ , ಪವನ್, ಕಿರಣ್ , ನವೀನ್ ಕೆ.ಎಸ್. ಗಗನ್ ಟಿ.ಕೆ. ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!