ತುಮಕೂರು ತಾಲ್ಲೋಕು ಗೂಳೂರು ಗ್ರಾಮದಲ್ಲಿ ಸರ್ಕಾರದ ವತಿಯಿಂದ ವಿತರಿಸಲಾಗುವ ವಿವಿಧ ಸವಲತ್ತುಗಳನ್ನು ಶಾಸಕ ಡಿ.ಸಿ.ಗೌರಿಶಂಕರ್ ಅರ್ಹ ಫಲಾನುಭವಿಗಳಿಗೆ ವಿತರಿಸಿದರು.
ತಾಲ್ಲೋಕಿನ ಗೂಳೂರು ಗ್ರಾಮಪಂಚಾಯ್ತಿ ಕಚೇರಿ ಆವರಣದಲ್ಲಿ ತಾಲ್ಲೋಕು ಪಂಚಾಯಿತಿ, ಗೂಳೂರು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಪಶುಪಾಲನಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರು, ತಾಲ್ಲೋಕಿನ 268 ಮಂದಿ ಫಲಾನುಭವಿಗಳಿಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನದ ಮುಂಜೂರಾತಿ ಆದೇಶ ಪ್ರತಿಯನ್ನು ವಿತರಿಸಿದರು.
ತಾಲ್ಲೋಕಿನಾದ್ಯಂತ ಕಳೆದ ತಿಂಗಳು ಬಿದ್ದ ಭಾರಿ ಮಳೆಗೆ 43 ಮನೆಗಳು ಹಾಳಾಗಿದ್ದು ಸಂತ್ರಸ್ತರಿಗೆ 50 ಸಾವಿರೂ ನೆರವಿನ ಚೆಕ್ ವಿತರಿಸಿದರು.
ಪಶುಪಾಲನಾ ಇಲಾಖೆಯ ವತಿಯಿಂದ 212 ಜನ ಫಲಾನುಭವಿಗಳಿಗೆ ತಲಾ 10 ಕೋಳಿಗಳಂತೆ 2,200 ಕೋಳಿಗಳ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ರೈತ ಅಥವಾ ಸಾಮಾನ್ಯ ನಾಗರೀಕರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿತಗಮಾಣ ಮಾಡಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅದರಂತೆ ಅಧಿಕಾರಿಗಳೂ ಸಹ ಕಾರ್ಯ ನಿರ್ವಹಿಸುತ್ತಿದ್ದು, ವಿಧವಾ ವೇತನಾ ಅಥವಾ ವೃದ್ಧಾಪ್ಯ ವೇತನದ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೇ ಸವಲತ್ತುಗಳ ಆದೇಶ ಪ್ರತಿ ನೀಡಿ ಅವರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು. ಪ್ರತೀ ಸಂದರ್ಭದಲ್ಲೂ ಕ್ಷೇತ್ರದ ಜನತೆಯ ಒಡನಾಟದಲ್ಲಿದ್ದು, ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಗೆ ಶ್ರಮಿಸುತ್ತಿದ್ದೇನೆ. ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀರಾವರಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವೃಷಭಾವತಿ ನೀರನ್ನು ಗ್ರಾಮಾಂತರ ಕ್ಷೇತ್ರಕ್ಕೆ ತಂದು ಕೆರೆಗಳನ್ನು ತುಂಬಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ನಾಂದಿ ಹಾಡಿರುವುದಾಗಿ ತಿಳಿಸಿದರು.
ಈ ವೇಳೆ ಗೂಲಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೃಷ್ಣೇಗೌಡ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದಿವಾಕರ್ ಡಾ.ಮಲ್ಲೇಶಪ್ಪ
ಡಾ. ಡಿ.ನಾಗಭೂಷಣ್, ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಜೆಡಿಎಸ್ ಮುಖಂಡತು ಉಪಸ್ಥಿತರಿದ್ದರು.