ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಆಗಸ್ಟ್ 13 ರಿಂದ 15 ರ ವರೆಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳನ್ನು ಹಾರಿಸುವ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು. ಅದಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು, ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿದ್ದು, ಒಂದು ಧ್ವಜಸ್ಥಂಭವನ್ನು ನೆಡಲು ಅಶಕ್ತರಾದ ಕಾರಣ ಅಲ್ಲೇ ಪಂಚಾಯಿತಿ ಕಾರ್ಯಾಲಯದಲ್ಲಿ ಮೂಲೆಯಲ್ಲಿ ಬಿದ್ದಿದ್ದ ಕಸದ ಬುಟ್ಟಿಯನ್ನೇ ಧ್ವಜಸ್ಥಂಭವನ್ನಾಗಿ ಪರಿವರ್ತನೆ ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನವಾಗುವಂತಹ ರೀತಿಯಲ್ಲಿ ನಡೆದುಕೊಂಡಿರುತ್ತಾರೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ ಅಲ್ಲದೇ, ಈ ಕುರಿತು ಪಂಚಾಯಿತಿ ಅಧಿಕಾರಿಗಳನ್ನು ಕೇಳಲಾಗಿ, ಅವರಲ ಪಂಚಾಯಿತಿಯಲ್ಲಿರುವ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೆ ಹಣವನ್ನು ವಾಮ ಮಾರ್ಗಗಳಲ್ಲಿ ಸಂಪಾದಿಕೊಳ್ಳುವುದು ಬಿಟ್ಟರೆ, ಈ ರೀತಿಯಾಗಿ ದುಂದುವೆಚ್ಚಕ್ಕೆ ನಾವು ಮುಂದಾಗುವುದಿಲ್ಲವೆಂಬ ಹಾಸ್ಯಾಸ್ಪದ ಹಾಗೂ ಹಾರಿಕೆಯು ಉತ್ತರವನ್ನು ನೀಡಿ, ಈ ರೀತಿಯಾಗಿ ದೇಶಕ್ಕೆ ಅವಮಾನ ಮಾಡಿರುವುದಲ್ಲದೇ, ನೇರವಾಗಿ ತಾವುಗಳು ವಾಮ ಮಾರ್ಗದಲ್ಲಿ ಹಣವನ್ನು ಸಂಪಾದಿಸುತ್ತಿರುವುದಲ್ಲದೇ, ಭ್ರಷ್ಠಾಚರದಲ್ಲಿ ಸದಾ ಸಿದ್ಧರಾಗಿದ್ದೇವೆಂದು ತಿಳಿಸಿರುವುದು ಎಷ್ಟು ಸಮಂಜಸಕರವಲ್ಲವೇ?
ಇಂತಹ ಅವಿವೇಕಿ, ದೇಶದ ಸಾರ್ವಭೌಮಕ್ಕೆ ಧಕ್ಕೆ ತರುವಂತಹ ಕೆಲಸಕ್ಕೆ ಕೈ ಹಾಕಿರುವವರ ವಿರುದ್ಧ ಸಮಾಜ ಯಾವ ರೀತಿಯಾದ ಪ್ರತಿಕ್ರಿಯೆ ನೀಡುತ್ತದೋ ಕಾದು ನೋಡಬೇಕಿದೆ.