ತುಮಕೂರಿನಲ್ಲಿ ಕಾಂಗ್ರೆಸ್‌ ವತಿಯಿಂದ ಫ್ರೀಡಂ ನಡಿಗೆ

ತುಮಕೂರು: ಎಐಸಿಸಿ ಮತ್ತು ಕೆಪಿಸಿಸಿ ಯ ಕರೆಯಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಗಸ್ಟ್ 06 ಮತ್ತು 07 ರಂದು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರೋತ್ಸವ ನಡಿಗೆ(ಪ್ರಿಡಂ ಮಾರ್ಚ್) ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಆಗಸ್ಟ್ 03ರ ಮಾಜಿ ಸಿ.ಎಂ.ಸಿದ್ದರಾಮಯ್ಯ ಜನ್ಮ ಜಯಂತಿ ಅಮೃತಮಹೋತ್ಸವ, ಪ್ರಿಡಂ ಮಾರ್ಚ್ ಹಾಗೂ ಆಗಸ್ಟ್ 15ರ ಸ್ವಾತಂತ್ರೋತ್ಸವ ಕಾರ್ಯಕ್ರಮಗಳ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 06ರ ಶನಿವಾರ ನಗರ ಬ್ಲಾಕ್ 01 ಅಧ್ಯಕ್ಷರಾದ ಮೆಹಬೂಬ್ ಪಾಷ ಅವರ ನೇತೃತ್ವದಲ್ಲಿ 7ನೇ ವಾರ್ಡಿನ ಆಗ್ರಹಾರದಿಂದ ಹೊರಡುವ ಸ್ವಾತಂತ್ರೋತ್ಸವ ನಡಿಗೆ, ಸಂತೆಪೇಟೆ,ಜಿ.ಸಿ.ಆರ್.ಕಾಲೂನಿ,ಗುಬ್ಬಿಗೇಟ್, ಬಿ.ಜಿ.ಪಾಳ್ಯ ಸರ್ಕಲ್ ನ ಮೂಲಕ ವಾರ್ಡ್ ನಂ 14, 13, 11, 12 ರಲ್ಲಿ ಸಂಚರಿಸಿ, ನಜರಾಬಾದ್, ದ್ಹಾನಪಾಲೇಸ್ ಬಳಿ ಅಂತ್ಯವಾಗಲಿದೆ ಎಂದರು.

ಆದೇ ರೀತಿ ಆಟೋ ರಾಜು ಅವರ ನೇತೃತ್ವದಲ್ಲಿ ಬ್ಲಾಕ್ ಎರಡರ ಪ್ರೀಡಂ ಮಾರ್ಚ್ ಆಗಸ್ಟ್ ೦೭ ರಂದು ಎಸ್.ಐ.ಟಿ.ಯ ಗಂಗೋತ್ರಿ ನಗರದಿಂದ ಪ್ರಾರಂಭಗೊಂಡು ಎಸ್.ಐ.ಟಿ.ಮುಖ್ಯರಸ್ತೆ, ಎಸ್.ಎಸ್.ಪುರಂ ಮೂಲಕ ಹಾದು ಡಾ.ರಾಧಾಕೃಷ್ಣ ರಸ್ತೆಯ ಡಿಡಿಪಿಐ ಕಚೇರಿ ಬಳಿ ಮುಕ್ತಾಯಗೊಳ್ಳಲಿದೆ.ಎರಡು ಬ್ಲಾಕ್‌ಗಳ ಸ್ವಾತಂತ್ರ ನಡಿಗೆಯಲ್ಲಿ ಪಕ್ಷದ ಬಾವುಟ ಇರುವುದಿಲ್ಲ. ಬದಲಿಗೆ ಭಾರತದ ತ್ರಿವರ್ಣದ್ವಜವನ್ನು ಹಿಡಿದು ಎಲ್ಲಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ದಾರಿ ಯುದ್ದಕ್ಕೂ ಸಿಗುವ ನಾಗರಿಕರಿಗೆ ತ್ರಿವರ್ಣದ್ವಜವನ್ನು ಹಂಚುವ ಮೂಲಕ ದೇಶಕ್ಕೆ ಸ್ವಾತಂತ್ರ ದೊರೆಯುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಕುರಿತ ವಿವರಿಸಲಾಗುವುದು. ಅಲ್ಲದೆ ಯುವಜನತೆಗೆ ಉಡುಗೊರೆಯನ್ನು ನೀಡಲಾಗುವುದು. ಪಕ್ಷದ ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ವಾರ್ಡುಗಳ ಬೂತ್ ಮುಖಂಡರು,ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಆಗಸ್ಟ್ 03ರಂದು ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಮಾಡಲಾಗಿದೆ.ಕಾರ್ಯಕ್ರಮಕ್ಕೆ ಹೊರಡುವವರು ಅಯಾಯ ಬೂತ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಮಾಹಿತಿ ನೀಡಿದರೆ, ಅವರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗುವುದು.ಹಾಗೆಯೇ ಆಗಸ್ಟ್ 15 ರಂದು ಬೆಂಗಳೂರಿನ ಸಂಗೋಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸ್ವಾತಂತ್ರೋತ್ಸ ಮೆರವಣಿಗೆ ಮತ್ತು ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಹ ಎಲ್ಲಾ ರೀತಿಯ ವ್ಯವಸ್ಥೆಯನ್ನು ತುಮಕೂರು ನಗರದ ಕಾರ್ಯಕರ್ತರಿಗೆ ಮಾಡಿಕೊಡುವುದಾಗಿ ಡಾ.ರಫೀಕ್ ಅಹಮದ್ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಸ್ವಾತಂತ್ರ ದಿನದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ ತಂದಕೊಟ್ಟ ಕಾಂಗ್ರೆಸ್ ಪಕ್ಷದ ವತಿಯಿಂದ ಮೂರು ಪ್ರಮುಖ ಕಾರ್ಯಕ್ರಮಗಳನ್ನು ರೂಪಿಸಿದ್ದು, ಆಗಸ್ಟ್ 03ರ ಸಿದ್ದರಾಮಯ್ಯ ಜನ್ಮ ಜಯಂತಿ, ಪ್ರೀಡಂ ಮಾರ್ಚ್ ಮತ್ತು ಆಗಸ್ಟ್ ೧೫ರ ಸ್ವಾಂತ್ರೋತ್ಸವ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬ್ಲಾಕ್ ಅಧ್ಯಕ್ಷರುಗಳು, ಪ್ರತಿ ವಾರ್ಡಿನ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಅಹ್ವಾನಿಸಬೇಕು.ಒಂದು ಬೂತ್‌ನಿಂದ ಕನಿಷ್ಠ ೧೦ ಜನರು ಪಾಲ್ಗೊಳ್ಳುವಂತೆ ಮಾಡಿ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.

ತುಮಕೂರು ನಗರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಅನುಕೂಲ ಪಡೆದ ಅನೇಕ ಜನರಿದ್ದಾರೆ.ಅವರನ್ನು ಭೇಟಿಯಾಗಿ ಅವರಿಗೆ ನೀಡಿರುವ ನಿವೇಶನ,ಮನೆ,ರೇಷನ್ ಕಾರ್ಡು,ಅನ್ನಭಾಗ್ಯ ಯೋಜನೆಯ ಅರಿವು ಮೂಡಿಸಿ, ಹಾಗೆಯೇ ಬಿಜೆಪಿ ಪಕ್ಷದ ಆಡಳಿತ ವೈಫಲ್ಯಗಳನ್ನು ತಿಳಿಸಿ,ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಆರ್.ರಾಮಕೃಷ್ಣ ಕರೆ ನೀಡಿದರು.

ಸಭೆಯಲ್ಲಿ ವಿರೋಧಪಕ್ಷದ ನಾಯಕ ಜೆ.ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಬಿ.ಜಿ.ನಿಂಗರಾಜು,ಯುವ ಕಾಂಗ್ರೆಸನ ಇಲಾಯಿ ಸಿಖಂದರ್, ಶಿವಾಜಿ, ಮೆಹಬೂಬ್ ಪಾಷ, ಆಟೋ ರಾಜು ಅವರುಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹಲವರು ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮರಿಚನ್ನಮ್ಮ, ಡಾ.ಫರ್ಹಾನ ಬೇಗಂ, ಸುಜಾತ,ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್,ಪಾಲಿಕೆ ಸದಸ್ಯರಾದ ಉಬೇದ್‌ವಲ್ಲಾ,ಫೀರ್ ಸಾಬ್, ಯುವ ಘಟಕದ ನೂರ್‌ವುಲ್ಲಾ,ಜಾಕಿರ್‌ಪಾಷ,ಉಸ್ನಾ,ಮಹಿಳಾ ಘಟಕ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!