ತುಮಕೂರು_ಪ್ರಾಧ್ಯಾಪಕರೊಬ್ಬರು ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಪ್ರಾಂಶುಪಾಲರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಹಾಕಿದ ಘಟನೆ ನಡೆದಿದ್ದು ಅದನ್ನ ಪ್ರಶ್ನಿಸಲು ಹೋದ ವೇಳೆ ವಿದ್ಯಾರ್ಥಿನಿ ಹಾಗೂ ಪ್ರಾಧ್ಯಾಪಕರ ನಡುವೆ ತೀವ್ರ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಇತರೆ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಜೊತೆ ವಾಗ್ವಾದ ನಡೆಸುತ್ತಿದ್ದ ವಿದ್ಯಾರ್ಥಿಯನ್ನು ಇತರೆ ವಿದ್ಯಾರ್ಥಿಗಳು ತರಗತಿಯಿಂದ ಹೊರ ತಳ್ಳಿದ ಘಟನೆ ನಡೆದಿದ್ದು ಘಟನೆಯಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ತೀವ್ರ ಅಸ್ವಸ್ಥಗೊಂಡು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.
ತುಮಕೂರು ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಘಟನೆ ನಡೆದಿದ್ದು ಈ ಬಗ್ಗೆ ಮಾಹಿತಿ ನೀಡುವ ವಿದ್ಯಾರ್ಥಿನಿ ನೇತ್ರಾವತಿ ಪ್ರಾಧ್ಯಾಪಕರಾದ ಗಂಗಾಧರ್ ಎನ್ನುವವರು ತರಗತಿಯಲ್ಲಿ ಅವಾಚ್ಯ ಶಬ್ದಗಳಿಂದ ಬಳಸುತ್ತ ಕೆಲ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಆದ ಕಾರಣ ಈ ಸಂಬಂಧ ಪ್ರಾಂಶುಪಾಲರಿಗೆ ದೂರು ನೀಡಲಾಗಿತ್ತು ಇನ್ನು ದುರುದ್ದೇಶದಿಂದ ಪ್ರಾಧ್ಯಾಪಕ ಗಂಗಾಧರ್ ಅವರು ತರಗತಿಯಿಂದ ನನ್ನನ್ನು ಹೊರ ಹಾಕಿದ್ದು ಅದನ್ನ ಪ್ರಶ್ನಿಸಲು ಹೋದ ವೇಳೆ ವಿದ್ಯಾರ್ಥಿಗಳ ಮೂಲಕ ನಮ್ಮನ್ನ ಹೊರ ತಳ್ಳಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿರುವ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇಂದು ನಡೆದ ಘಟನೆ ನಮ್ಮ ಗಮನಕ್ಕೂ ಬಂದಿದ್ದು ವಿದ್ಯಾರ್ಥಿಗಳು ಸಹ ಇಂದಿನ ಘಟನೆ ಬಗ್ಗೆ ದೂರು ನೀಡಿದ್ದು ಈ ಬಗ್ಗೆ ಪ್ರಾಧ್ಯಾಪಕರಿಗೂ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವ ಬಗ್ಗೆ ಆಡಳಿತ ಮಂಡಳಿ ವತಿಯಿಂದ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.
ಇನ್ನು ಕೆಲ ವಿದ್ಯಾರ್ಥಿಗಳು ಸೇರಿದಂತೆ ಇತರೆ ಉಪನ್ಯಾಸಕರು ಸಹ ಪ್ರಾಧ್ಯಾಪಕ ಗಂಗಾಧರ್ ವಿರುದ್ಧ ಸಾಕಷ್ಟು ಆರೋಪಗಳನ್ನ ಮಾದಿದ್ದರೆ ಬಹುತೇಕ ವಿದ್ಯಾರ್ಥಿಗಳು ತಮ್ಮ ಅಸಹಾಯಕತೆಯನ್ನ ತೋಡಿಕೊಂಡಿದ್ದು ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೂ ಸಹ ತೀವ್ರ ತೊಂದರೆ ಉಂಟಾಗುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಪ್ರಾಧ್ಯಾಪಕ ಗಂಗಾಧರ್ ಅವರು ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಸಹ ಆಡಳಿತ ಮಂಡಳಿಗೆ ದೂರು ನೀಡಿದ್ದರು ನಂತರ ಕಾಲೇಜಿನ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ಕೈಗೊಂಡಿದ್ದರು ಇನ್ನು ಆ ಘಟನೆ ಮಾಸುವ ಮುನ್ನವೇ ಅದೇ ಪ್ರಾಧ್ಯಾಪಕ ನಿಂದ ಮತ್ತೋರ್ವ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನು ಘಟನೆಯನ ಕಂಡ ವಿದ್ಯಾರ್ಥಿಗಳು ಕಾಲೇಜಿನಲ್ಲೇ ಪ್ರಾಧ್ಯಾಪಕನ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇನೇ ಇರಲಿ ಕಾನೂನು ಕಲಿಸಬೇಕಾದ ಕಾಲೇಜಿನಲ್ಲೇ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಆಗುತ್ತಿರುವುದು ವಿಪರ್ಯಾಸವೇ ಸರಿ.