ತುಮಕೂರು ನಗರ ಶಾಸಕರ ಕಛೇರಿ, ಅವರ ಪಕ್ಷದ ಕಾರ್ಯಕರ್ತರ ಕಛೇರಿಯಾಗಿ ಮಾರ್ಪಟ್ಟಿದೆ !!!

ತುಮಕೂರು : ತುಮಕೂರು ನಗರದ ಜನತೆಯ ಕಷ್ಟ, ಕಾರ್ಪಣ್ಯಗಳನ್ನು ತೋಡಿಕೊಳ್ಳಲು, ತಮ್ಮ ನೋವುಗಳನ್ನು ಹಂಚಿಕೊಳ್ಳಲು ಅನುಕೂಲಕರವಾಗುವಂತೆ ತುಮಕೂರು ನಗರ ಶಾಸಕರ ಕಛೇರಿ, ಜನರಿಗೆ ಅನುಕೂಲಕರವಾಗುವಂತೆ ತುಮಕೂರು ನಗರದ ಬಿ.ಜಿ.ಎಸ್.ವೃತ್ತ (ಟೌನ್ ಹಾಲ್ ವೃತ್ತ)ದ ಹತ್ತಿರವಿರುವ ಮಹಾನಗರಪಾಲಿಕೆ ಕಾಂಪೌಂಡ್ ಆವರಣದಲ್ಲಿ ಇದೆ.

ಈ ಹಿಂದೆ ಇದ್ದ ಶಾಸಕರುಗಳು ಸಹ ಇದೇ ಕಚೇರಿಯಲ್ಲಿ ತಮ್ಮ ಕಾರ್ಯಕಲಾಪಗಳನ್ನು ನಡೆಸುತ್ತಿದ್ದರು, ಈ ಕಛೇರಿಗೆ ಬಹುತೇಕರು ಅಮಾಯಕರು, ಧೀನ ದಲಿತರು, ಅಮಾಯಕರು, ನಿರುದ್ಯೋಗಿಗಳು, ಬಡವರು ಆಗಮಿಸುತ್ತಾರೆ, ಅಲ್ಲದೇ ಬೆರಳೆಣಿಕೆಯಷ್ಟು ಉದ್ಯಮಿಗಳು, ಗುತ್ತಿಗೆದಾರರು, ಇನ್ನಿತರೆ ಅಧಿಕಾರಿಗಳು ಆಗಮಿಸುವ ವಾಡಿಕೆಯಿದೆ.

ಈ ಎಲ್ಲದರ ಮಧ್ಯೆ ತುಮಕೂರು ನಗರ ಶಾಸಕರ ಕೊಠಡಿಯು ಇತ್ತೀಚೆಗೆ ಆ ಪಕ್ಷದ ಕಾರ್ಯಕರ್ತರ ಕಛೇರಿಯಾಗಿ ಮಾರ್ಪಟ್ಟಿದೆಂಬುದು ಸಾರ್ವಜನಿಕರ ಅಳಲಾಗಿದೆ, ಏಕೆಂದರೆ ಶಾಸಕರು ಒಬ್ಬ ವಿದ್ಯಾವಂತರಾಗಿದ್ದು, ನವ ಯುವಕರಾಗಿರುವ ಕಾರಣ ತಮ್ಮ ಕಛೇರಿಯಲ್ಲಿ ಇಬ್ಬಿಬ್ಬರು ಆಪ್ತ ಸಹಾಯಕರನ್ನು ನೇಮಿಸಿದ್ದಾರೆ, ಅಲ್ಲದೇ ಜನರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬಂದಾಗ ಅವರಿಗೆ ನೆರವಾಗಲು ಒಬ್ಬ ಕಂಪ್ಯೂಟರ್ ಆಪರೇಟರ್‌ನ್ನೂ ಸಹ ನೇಮಿಸಿಕೊಂಡಿದ್ದಾರೆ, ಸ್ಥಳದಲ್ಲಿಯೇ ಶಾಸಕರ ಲೆಟರ್‌ಪ್ಯಾಡ್‌ನಲ್ಲಿ ಬೆರಳಚ್ಚು ಮಾಡಿಸಿ, ಮುದ್ರಿಸಿಕೊಡಲು ಅನುಕೂಲಕರವಾಗುವಂತೆ ವ್ಯವಸ್ಥೆಯನ್ನು ಮಾಡಿದ್ದಾರೆ.

ಇತ್ತೀಚೆಗೆ ಕಂಪ್ಯೂಟರ್ ಆಪರೇಟರ್‌ರವರು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲವೆಂಬ ಕಿವಿ ಮಾತುಗಳು ಆಲ್ಲಲ್ಲಿ ಕೇಳಿ ಬರುತ್ತಿದ್ದರೂ ಸಹ, ಬಡ ಜನರು ನಮಗ್ಯಾಕೇ ಬಂದ ಕೆಲಸ ಮಾಡಿಕೊಂಡು ಹೋದರೆ ಸಾಕು ಎಂಬಂತೆ ಇರುತ್ತಿದ್ದರು, ಇದೆಲ್ಲದರ ಮಧ್ಯೆ ಕೆಲ ತಿಂಗಳುಗಳಿಂದ ಶಾಸಕರ ಕಛೇರಿಯಲ್ಲಿ ಶಾಸಕರಿಗಿಂತ ಹೆಚ್ಚಾಗಿ ತಮ್ಮ ಪಕ್ಷದ ಕಾರ್ಯಕರ್ತರುಗಳೇ ಇರುವುದು ಜಾಸ್ತಿಯಾಗಿದೆ, ಅದೂ ಅಲ್ಲದೇ ಆ ಕಛೇರಿಯಲ್ಲಿ ತಮ್ಮ ವೈಯುಕ್ತಿಕ ಹುಟ್ಟು ಹಬ್ಬ ಆಚರಣೆಗಳು, ಇನ್ನಿತರೆ ಆಚರಣೆಗಳನ್ನು ಆಚರಿಸಿಕೊಂಡು ಸಂಭ್ರಮಿಸುತ್ತಿರುವ ದೃಶ್ಯಗಳು ಕಾಣ ಸಿಗುತ್ತಿವೆ, ಇವೆಲ್ಲದರ ಮಧ್ಯೆ ಕೆಲ ನೊಂದ ಅಮಾಯಕರೊಬ್ಬರು ಶಾಸಕರ ಬಳಿ ತಮ್ಮ ಅಳಲನ್ನು ತೋಡಿಕೊಳ್ಳಲು ಹೋಗಿದ್ದು, ಆ ವ್ಯಕ್ತಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಸುಮಾರು 4 ಗಂಟೆಯವರೆಗೂ ಸ್ಥಳದಲ್ಲಿ ಕಾದಿದ್ದರೂ ಶಾಸಕರ ಬಾರದ ಕಾರಣ ಅವರ ಆಪ್ತ ಸಹಾಯಕರು ಕೊಡುತ್ತಿದ್ದ ಉತ್ತರ ಇನ್ನು 10 ನಿಮಿಷದಲ್ಲಿ ಸಾಹೇಬರು ಬರುತ್ತಾರೆ, ಇನ್ನೊಂದು 20 ನಿಮಿಷದಲ್ಲಿ ಸಾಹೇಬರು ಬರುತ್ತಾರೆ, ಕಾಯುತ್ತಿರಿ ಎಂಬ ಉತ್ತರಗಳನ್ನು ಕೇಳಿ ಕೇಳಿ ಸುಮ್ಮನೆ ವಾಪಸ್ಸು ಬಂದಿರುವ ಘಟನೆ ನಡೆದಿದೆ.

ಇದಕ್ಕೆಲ್ಲಾ ಪುಷ್ಠಿ ನೀಡುವಂತೆ ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಆಪ್ತ ಸಹಾಯಕರೊಳಗೊಂಡಂತೆ ಪಕ್ಷದ ಕಾರ್ಯಕರ್ತರು ತಮ್ಮ ಹುಟ್ಟುಹಬ್ಬ ಇನ್ನಿತರೆ ಶುಭ ಸಮಾರಂಭಗಳನ್ನು ಮಾಡಿಕೊಂಡು ತಮ್ಮ ಸಂತೋಷದ ಸಮಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ.

ಈ ಎಲ್ಲಾ ವಿಚಾರಗಳು ಮಾನ್ಯ ಶಾಸಕರ ಗಮನಕ್ಕೆ ಬಂದಿದೆಯೋ ಇಲ್ಲವೋ ಎಂಬುದೇ ನಿಗೂಢವಾಗಿದೆ. ಯಾವುದು ಏನೇ ಆದರೂ ಶಾಸಕರ ಕಛೇರಿ ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆಗಾಗಿ ಮೀಸಲಿಡಬೇಕೇ ಹೊರತು, ಆಯ್ದ ವ್ಯಕ್ತಿಗಳ ಸಭೆ ಸಮಾರಂಭಗಳು, ಮೋಜು ಮಸ್ತಿಗಾಗಿ ಮೀಸಲಾಗಿರಬಾರದೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!