ತುಮಕೂರು : ಸಮೃದ್ಧಿ ಸೇವಾ ಟ್ರಸ್ಟ್ (ರಿ.) ವತಿಯಿಂದ ತುಮಕೂರು ತಾಲ್ಲೂಕು, ಹೆಗ್ಗೆರೆಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ದಿನಾಂಕ 29-7-2022ರ ಶುಕ್ರವಾರಂದು ತುಮಕೂರು ತಾಲ್ಲೂಕಿನಲ್ಲಿರುವ ಬಡ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈ ಒಂದು ವಿಭಿನ್ನವಾದ ಕಾರ್ಯಕ್ರಮವನ್ನು ಶ್ರೀಮತಿ ಶಾಂತಕುಮಾರಿ (ಅಧ್ಯಕ್ಷರು, ಸಮೃದ್ಧಿ ಸೇವಾ ಟ್ರಸ್ಟ್)ರವರ ನೇತೃತ್ವದಲ್ಲಿ ನಡೆಯುತ್ತಿದ್ದು, ಸುಮಾರು 101 ಗರ್ಭೀಣಿ ಸ್ತ್ರೀಯರಿಗೆ ಮಡಿಲು ತುಂಬಿ ಸೀಮಂತವನ್ನು ಮಾಡುವುದರ ಮೂಲಕ ಬಡ ಹೆಂಗಸರ ಪಾಲಿಗೆ ತಾಯಿ, ಅಕ್ಕ, ಸಹೋದರಿಯಾಗುವ ಸಂತಸದ ಸಮಯ ನನ್ನದಾಗಿದೆಂದು ಶಾಂತಕುಮಾರಿರವರು ತಿಳಿಸಿದರು.
ಈ ಕಾರ್ಯಕ್ರಮವನ್ನು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನಡೆಸಲಾಗುವುದು ಹಾಗೆಯೇ ಉದ್ಘಾಟನೆಯನ್ನು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ರವರು ನೆರವೇರಿಸಲಿದ್ದಾರೆಂದು ತಿಳಿಸಿದರು.