ತುಮಕೂರು : ಶನಿವಾರ ಮಧ್ಯಾಹ್ನ ತುಮಕೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋ ಚಾಲಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ರಿಂಗ್ ರಸ್ತೆಯ ಧಾನ್ಹ ಪ್ಯಾಲೇಸ್ ಕಡೆಯಿಂದ ಗುಬ್ಬಿಗೇಟ್ ಕಡೆ ಸಂಚರಿಸುತ್ತಿದ್ದ, ಮಳೆ ಬಂದ ಪರಿಣಾಮ ಪಕ್ಕದಲ್ಲೇ ಆಟೋ ನಿಲ್ಲಿಸಿ, ಮೋರಿಯಲ್ಲಿ ನೀರು ಹರಿದು ಹೋಗುತ್ತಿದ್ದ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಹೋದ ಪರಿಣಾಮ, ಕೊಚ್ಚ ಪ್ರದೇಶವಾದ ಕಾರಣ ಆ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ವ್ಯಕ್ತಿಯು ತುಮಕೂರು ನಗರದ ಮರಳೂರು ದಿಣ್ಣೆ ಮೂಲದ ನಿವಾಸಿ ಎಂದು ತಿಳಿದು ಬಂದಿದೆ ಆದರೆ ಆತನ ಹೆಸರು ಅಮಜಾದ್ ಎಂದು ತಿಳಿದು ಬಂದಿದೆ.
ನಾಪತ್ತೆಯಾಗಿರುವ ವ್ಯಕ್ತಿ ಕೊಚ್ಚಿ ಹೋಗಿರುವ ಸ್ಥಳದಲ್ಲಿ ಹಲವು ವರ್ಷಗಳಿಂದ ಎರಡು ಬದಿಯಲ್ಲಿ ಚರಂಡಿ ಬಾಯ್ತೆರೆದು ನಿಂತಿತ್ತು ಆದರೆ ಇದುವರೆಗೂ ಅದರ ನಿರ್ವಹಣೆಗೆ ಯಾವುದೇ ಅಧಿಕಾರಿಗಳು ಮುಂದಾಗಿರಲಿಲ್ಲ ಆದರೆ ಇಂದು ಅಧಿಕಾರಿಗಳ ನಿರ್ಲಕ್ಷಕ್ಕೆ ವ್ಯಕ್ತಿ ಒಬ್ಬ ಕೊಚ್ಚಿ ಹೋಗಿರುವುದು ದುರದೃಷ್ಟಕರ ಸಂಗತಿ.
ನಾಪತ್ತೆಯಾದ ವ್ಯಕ್ತಿಗಾಗಿ ತೀವ್ರ ಶೋಧ ನಡೆಯುತ್ತಿದ್ದು ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೇಟಿ ನೀಡಿದ್ದು ನಾಪತ್ತೆಯಾಗಿರುವ ವ್ಯಕ್ತಿಗಾಗಿ ಹುಡುಕಟ ನಡೆಸಿದ್ದಾರೆ.
ಇನ್ನು ಎರಡು ಬದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಸುರಿಯುತ್ತಿರುವ ಮಳೆಯ ನಡುವೆ ನಾಪತ್ತೆಯಾಗಿರುವ ವ್ಯಕ್ತಿಗಾಗಿ ತೀವ್ರಶೋಧ ನಡೆಸಿದ್ದಾರೆ.