ತುಮಕೂರು _ಕಳೆದ ಎರಡು ದಿನಗಳ ಹಿಂದೆ ರಾಜ್ಯದ ಖಾಸಗಿ ಸುದ್ದಿ ವಾಹಿನಿಯು (ನ್ಯೂಸ್ ಫಸ್ಟ್) ಸ್ಪ್ರಿಂಗ್ ಆಪರೇಷನ್ ಮೂಲಕ ಹಾವೇರಿಯ ಮಹಿಳಾ ಮುಖಂಡರೊಬ್ಬರ ಬಗ್ಗೆ ವರದಿ ಬಿತ್ತರಿಸಿತು.
ಇನ್ನು ವರದಿ ಬಿತ್ತರವಾದ ಕೂಡಲೇ ಹಾವೇರಿಯ ರೈತ ಮಹಿಳಾ ಮುಖಂಡರಾದ ಮಂಜುಳಾ ಪೂಜಾರ್ ಹಾಗೂ ಇತರರು ಪತ್ರಿಕಾಗೋಷ್ಠಿ ನಡೆಸುವ ನೆಪದಲ್ಲಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದರು.
ಇನ್ನು ವರದಿಗಾರರ ಮೇಲೆ ಹಲ್ಲೆ ನಡೆಯುತ್ತಿದ್ದಂತೆ ರಾಜ್ಯದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ಪತ್ರಕರ್ತರ ವತಿಯಿಂದ ವರದಿಗಾರರ ಮೇಲಿನ ಹಲ್ಲೆಯನ್ನ ಖಂಡಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚೀನಿ ಪುರುಷೋತ್ತಮ್ ಮಾತನಾಡಿ ವರದಿಗಾರರ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ ಇನ್ನು ಹಲವು ನಕಲಿ ಮುಖಂಡರ ಮುಖವಾಡಗಳನ್ನ ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳು ಬಯಲು ಮಾಡುತ್ತಿವೆ ಆದರೆ ಅಂತಹ ಪತ್ರಕರ್ತರ ಮೇಲೆ ಗೂಂಡಾಗಳ ಮೂಲಕ ಹಲ್ಲೆ ನಡೆಸುತ್ತಿರುವುದು ಸರಿಯಲ್ಲ ಕೂಡಲೇ ಸರ್ಕಾರ ಹಲ್ಲೆ ಮಾಡಿರುವ ಆರೋಪಿಗಳ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಓತ್ತಾಯಿಸಿದರು.
ಪತ್ರಕರ್ತ ರಂಗರಾಜು ರವರು ಮಾತನಾಡಿ ಕಾರ್ಯಾಂಗ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಗಳಿಗೆ ಇರುವ ರಕ್ಷಣೆ ಪತ್ರಕರ್ತರಿಗೆ ಇಲ್ಲ ರಾಜ್ಯದ್ಯಂತ ಪದೇ ಪದೇ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ವರದಿಗಾರರ ಮೇಲೆ ಹಲ್ಲೆ ಖಂಡನೆಯ ವರದಿಗಾರರ ರಕ್ಷಣೆಗೆ ಮುಂದಾಗ ಬೇಕಿರುವುದು ಎಲ್ಲರ ಕರ್ತವ್ಯ ಇಂತಹ ಹಲ್ಲೇ ಘಟನೆಗಳು ನಡೆದಾದ ಪತ್ರಕರ್ತರು ಮಾಧ್ಯಮದವರು ಒಂದಾಗಿ ಒಗ್ಗಟ್ಟು ಪ್ರದರ್ಶಿಸುವ ಅನಿವಾರ್ಯ ಸೃಷ್ಟಿಯಾಗಿದೆ ಎಂದರು ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ರವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್, ಚಿಕ್ಕಿರಪ್ಪ ,ಸತೀಶ್, ಜಯಣ್ಣ ತುಮಕೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಶಶಿಧರ್ ದೋಣಿ ಹಕ್ಲು, ರಮೇಶ್ , ಮಾರುತಿ ಗಂಗಾ ಹನುಮಯ್ಯ, ಸೇರಿದಂತೆ ಜಿಲ್ಲೆಯ ಹಲವು ಪತ್ರಕರ್ತರು ಮಾಧ್ಯಮ ಮಿತ್ರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.