ಬೆಂಗಳೂರು : ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂದಿನಿಂದ ಆರಂಭವಾಗಿರುವ ಬೆಂಗಳೂರು ಉತ್ಸವ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ ನ ಉಪಾಧ್ಯಕ್ಷ ರಾದ ಪ್ರೊ ಕೆ ಎಸ್ ಅಪ್ಪಾಜಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಎಸ್.ಎಸ್, ಸಹಾಯಕ ಕಾರ್ಯದರ್ಶಿ ಬಿ.ಎಲ್ ಶ್ರೀನಿವಾಸ ಮತ್ತು ನಟಿಯರಾದ ಚಂದನಾ ಆನಂತಕೃಷ್ಣ ಹಾಗೂ ಅಪ್ಸರಾ ಚಾಲನೆ ನೀಡಿದರು.’
ಈ ಮೇಳದ ಕುರಿತು ಮಾತನಾಡಿದ ನಟಿ ಚಂದನಾ ಆನಂತಕೃಷ್ಣ “ಇಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ವಸ್ತುಗಳಿವೆ. ಮನೆಗೆ ಬೇಕಾಗಿರುವಂತಹ ವಸ್ತುಗಳಿಂದ ಹಿಡಿದು ಕಣ್ಮನ ಸೆಳೆಯುವ ಆಭರಣಗಳು ಇಲ್ಲಿವೆ. ಎಲ್ಲರೂ ತಪ್ಪದೇ ಭೇಟಿ ನೀಡಬೇಕಾದಂತಹ ಮೇಳವಿದು. ಇಲ್ಲಿನ ಆಭರಣ ಸಂಗ್ರಹ ಹಾಗೂ ನಟರಾಜನ ವಿಗ್ರಹ ನನಗೆ ತುಂಬಾ ಇಷ್ವವಾಯಿತು” ಎಂದು ಮೇಳದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಇಲ್ಲಿನ ಮಳಿಗೆ ಹಾಗೂ ವಸ್ತುಗಳ ಸಂಗ್ರಹ ಕುರಿತು ಮಾತನಾಡಿದ ನಟಿ ಅಪ್ಸರಾ “ ಕರ್ನಾಟಕದಿಂದ ಹಿಡಿದು ಕಾಶ್ಮೀರದವರೆಗಿನ ಎಲ್ಲಾ ರೀತಿಯ ಸಾಂಪ್ರದಾಯಿಕ ವಸ್ತುಗಳು ಇಲ್ಲಿವೆ. ಆಭರಣ, ಬಟ್ಟೆಯ ಸಂಗ್ರಹ ಎಲ್ಲರಿಗೂ ಇಷ್ಟವಾಗುತ್ತದೆ. ಕಾಲೇಜು ಹುಡುಗಿಯರಿಗೆ ಬೇಕಾಗುವ ಕುರ್ತಿ, ಆಭರಣಗಳು, ಆಫೀಸ್ ಗೆ ಹೋಗುವವರಿಗೆ ಇಷ್ಟವಾಗುವ ಕಾಟನ್ ಸೀರೆಗಳು ಎಲ್ಲವೂ ಇಲ್ಲಿವೆ” ಎಂದು ತಿಳಿಸಿದರು.
80 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ. ಹಾಗೇ, ಈ ಮೇಳದಲ್ಲಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು, ಮ್ಯಾಟ್, ಪಿಂಗಾಣಿ ವಸ್ತು, ಕಲಾಕೃತಿಗಳು ಸೇರಿದಂತೆ ಅನೇಕ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದೆ. ಈ ಮೇಳ ಜುಲೈ 15 ರಿಂದ ರಿಂದ ಜುಲೈ 24 ರವರೆಗೆ ನಡೆಯಲಿದೆ.
ಸ್ಥಳ: ಚಿತ್ರಕಲಾ ಪರಿಷತ್ ಆವರಣ
ಸಮಯ: ಬೆಳಿಗ್ಗೆ 11ರಿಂದ ಸಂಜೆ 7
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 96118 35597