ತುಮಕೂರಿನಲ್ಲಿ ಜನರಿಗೆ ಹತ್ತಿರವಾಗಲು ಹೊರಟಿರುವ ರಾಜಕಾರಣಿ ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು

 

ತುಮಕೂರು_ಕಳೆದ ಶನಿವಾರ ತುಮಕೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಆಟೋ ಚಾಲಕ ಅಮ್ಜದ್ ರವರ ಕುಟುಂಬಕ್ಕೆ ತುಮಕೂರು ಜೆಡಿಎಸ್ ಮುಖಂಡ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಆಕಾಂಕ್ಷಿ ಬೊಮ್ಮನಹಳ್ಳಿ ಬಾಬು (ಅಟಿಕಾ ಬಾಬು) ರವರ ವತಿಇಂದ ಮೃತಪಟ್ಟ ಅಮ್ಜದ್ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಆಟ್ಟಿಕಾ  ಗೋಲ್ಡ್ ಕಂಪನಿ ಮಾಲೀಕರಾದ ಬೊಮ್ಮನಹಳ್ಳಿ ಬಾಬು ರವರ ಕಡೆಯಿಂದ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಮೃತಪಟ್ಟ ಆಟೋ ಚಾಲಕ ಅಮ್ಜದ್ ರವರ ಕುಟುಂಬಕ್ಕೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ನಾಸಿರ್ ರವರು ಇನ್ನು ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಕುಟುಂಬಕ್ಕೆ ಅಟಿಕ ಗೋಲ್ಡ್ ಕಂಪನಿಯ ಮಾಲೀಕರು ಹಾಗೂ ಜೆಡಿಎಸ್ ಮುಖಂಡರಾದ ಬೊಮ್ನಳ್ಳಿ ಬಾಬುರವರು ಆರ್ಥಿಕವಾಗಿ ಸಹಾಯ ಮಾಡಿದ್ದು ಮುಂದಿನ ದಿನದಲ್ಲಿ ಮೃತಪಟ್ಟ ಅಮ್ಜದ್ ರವರ ಮಗಳ ವಿದ್ಯಾಭ್ಯಾಸಕ್ಕೂ ನೆರವಾಗಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿರುವ ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮಂಜುನಾಥ್ ಮಾತನಾಡಿದ್ದು ಆಟೋ ಚಾಲಕ ಅಮ್ಜದ್ ರವರ ಸಾವು ನಿಜಕ್ಕೂ ಆಘಾತ ತಂದಿದ್ದು ದುಃಖದಲ್ಲಿರುವ ಕುಟುಂಬಕ್ಕೆ ಅಟಿಕಾ ಗೋಲ್ಡ್ ಕಂಪನಿಯ ಮಾಲೀಕರದ ಬೊಮ್ಮನಹಳ್ಳಿ ಬಾಬು ರವರಿಂದ ಎರಡು ಲಕ್ಷ ರೂಗಳ ಬೃಹತ್ ಮೊತ್ತದ ಪರಿಹಾರವನ್ನು ಅಮ್ಜದ್ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಇಮ್ರಾನ್ ನಾಸೀರ್, ವಶಿಂ ಪಾಷ, ಮುಜಾಹಿದ್, ಬಶೀರ್ ಪಾಷಾ, ಮೊಹಮದ್ ಗೌಸ್,ಮೊಹಮದ್ ಪೀರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಇನ್ನು ತುಮಕೂರಿನಲ್ಲಿ ಇತ್ತೀಚೆಗೆ ತಾನೇ ಜೆಡಿಎಸ್‌ ಪಕ್ಷದ ಕಾರ್ಯಕರ್ತರೊಂದಿಗೆ ಗುರತಿಸಿಕೊಂಡಿರುವ ಬೊಮ್ಮನಹಳ್ಳಿ ಬಾಬುರವರು, ಜನರ ನೋವುಗಳಿಗೆ, ಆಶೋತ್ತರಗಳಿಗೆ ಸ್ಪಂದಿಸುವಂತಹ ಕೆಲಸವನ್ನು ತಮ್ಮ ಕಡೆಯವರಿಂದ ಮಾಡುತ್ತಾ, ಜನರಿಗೆ ಹತ್ತಿರವಾಗಲು ಹೊರಟ್ಟಿದ್ದಾರೆ, ಅಲ್ಲದೇ ಇವರು ತುಮಕೂರಿನ ಶಾಸಕ ಸ್ಥಾನದ ಅಭ್ಯರ್ಥಿಯಾಗುತ್ತಾರೋ ಇಲ್ಲವೋ ನಿಗೂಢ ಸಂಗತಿಯಾಗಿದ್ದರೂ ಸಹ, ತಮ್ಮ ಸಾಮಾಜಿಕ ಕಾರ್ಯವನ್ನು ತುಮಕೂರಿನಲ್ಲಿ ನಿರಂತರವಾಗಿ ನಡೆಸುತ್ತೇನೆಂದು ತಮ್ಮ ಆಪ್ತ ಸಹಾಯಕರ ಕಡೆಯಿಂದ ಸುದ್ಧಿಗಾರರಿಗೆ ತಿಳಿಸಿದ್ದಾರೆ. ಯಾವುದು ಏನೇ ಆಗಲಿ ಜನರಿಗೆ ಹತ್ತಿರವಾಗುವಂತಹ ವ್ಯಕ್ತಿ ನಮಗೆ ಜನನಾಯಕನಾಗಿರಬೇಕು ಅಷ್ಠೇ.

ಹೌದಲ್ಲವೇ, ಪ್ರಸ್ತುತ ತುಮಕೂರಿನ ಕೆಲ ಜನನಾಯಕರು ಯಾರೂ ಜನರ ಕೈಗೆ ಸಿಗದೇ, ಎಲ್ಲೋ ಇದ್ದುಕೊಂಡು ತಮ್ಮ ರಾಜಕಾರಣವನ್ನು ಮಾಡುತ್ತಿರುವಂತಹ ಪರಿಸ್ಥಿತಿಯಲ್ಲಿ ಇಂತಹ ವ್ಯಕ್ತಿ ತುಮಕೂರಿಗೆ ಆಗಮಿಸಿರುವುದು, ಜನರಲ್ಲಿ ಕೊಂಚ ಆಶಾಭಾವನೆ ಮೂಡಿದೆ.

Leave a Reply

Your email address will not be published. Required fields are marked *

error: Content is protected !!