ಬೆಂಗಳೂರು, ಜೂನ್21: ಪಾಕಿಸ್ತಾನ ಸದಾ ತನ್ನ ಕುತಂತ್ರ ಬುದ್ದಿಯನ್ನು ಬಳಸಿಕೊಂಡು ಭಾರತದ ರಕ್ಷಣಾ ಮಾಹಿತಿಯನ್ನು ಪಡೆಯಲು ಹವಣಿಸುತ್ತಿರುತ್ತದೆ. ಭಾರತದ ರಕ್ಷಣಾ ಮಾಹಿತಿಯನನ್ನು ಕದಿಯುವ ಸಲುವಾಗಿ ವಾಮಮಾರ್ಗವನ್ನು ಅನುಸರಿಸುತ್ತದೆ. ಪಾಕಿಸ್ತಾನದ ಕರೆಗಳನ್ನು ಲೋಕಲ್ ಕರೆಯನ್ನಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್‌ಅನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನದ ಇಂಟೆಲಿಜೆನ್ಸ್‌ನಿಂದ ಭಾರದದ ಡಿಫೆನ್ಸ್ ಮಾಹಿತಿಗಾಗಿ ಡಾರ್ಕ್ ಕಾಲ್ ಮಾಡುತ್ತಿದ್ದ ಬಗ್ಗೆ ಭಾರತೀಯ ಸೇನೆ ಮಾಹಿತಿ ಕಲೆ ಹಾಕಿತ್ತು. ಅಂತರಾಷ್ಟ್ರೀಯ ಕರೆಗಳನ್ನು ಲೋಕಲ್ ಆಗಿ ಕನ್ವರ್ಟ್ ಮಾಡುತ್ತಿದ್ದ ಜಾಲವನ್ನು ಮಿಲಿಟರಿ ಇಂಟಲಿಜೆನ್ಸ್ ಮತ್ತು ಸಿಸಿಬಿ ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಅಂತರಾಷ್ಟ್ರೀಯ ಕರೆಗಳನ್ನು ಲೋಕಲ್ ಕರೆಗಳಿಗೆ ಕನ್ವರ್ಟ್ ಮಾಡುತ್ತಿದ್ದ ಅಡ್ಡೆ
ಪಾಕಿಸ್ತಾನದ ಇಂಟಲಿಜೆನ್ಸ್ ಕಾಲ್‌ಗಳನ್ನ ಅನಧಿಕೃತ ಸಿಮ್ ಬಾಕ್ಸ್ ಮೂಲಕ ಲೋಕಲ್ ಕಾಲ್‌ಗಳಾಗಿ ಕನ್ವರ್ಟ್ ಮಾಡುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಬಲೆಗೆ ಬಿದ್ದಿದೆ. ಈ ಗ್ಯಾಂಗ್ ಬಳಸುತ್ತಿದ್ದ 58 ಸಿಮ್ ಬಾಕ್ಸ್‌ಗಳ ಮೂಲಕ 2144 ಸಿಮ್ ಬಳಸಿ ಕಾಲ್ ಕನ್ವರ್ಟ್ ಮಾಡುತ್ತಿದ್ದದ್ದು ತನಿಖೆಯ ವೇಳೆ ತಿಳಿದು ಬಂದಿದೆ.
ಕಾನೂನು ಬಾಹಿರವಾಗಿ ಇಂಟರ್ ನ್ಯಾಷನಲ್ ಕಾಲ್‌ಗಳನ್ನ ಲೋಕಲ್ ಕಾಲ್‌ಗಳಾಗಿ ಕನ್ವರ್ಟ್ ಮಾಡುತ್ತಿದ್ದ. ಗ್ಯಾಂಗ್ ಇದಾಗಿದ್ದು, ಭಾರತೀಯ ದೂರ ಸಂಪರ್ಕ ನಿಗಮಕ್ಕೆ ಬರಬೇಕಿದ್ದ ಲಕ್ಷ ಲಕ್ಷ ಲಾಭವನ್ನು ವಾಮಮಾರ್ಗ ಬಳಸಿ ಈ ಗ್ಯಾಂಗ್ ಲಪಟಾಯಿಸಿದ್ದಾರೆ.
ಇನ್ನು ಇದೇ ಗ್ಯಾಂಗ್‌ನ ಜಾಲವನ್ನು ಬಳಸಿಕೊಂಡು ಭಾರತೀಯ ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಇಂಟಲಿಜೆನ್ಸ್ ನಿಂದ ಸಹ ಕರೆ ಬಂದಿರೋದನ್ನು ಮಿಲಿಟರಿ ತನಿಖಾ ಏಜೆನ್ಸಿ ಪತ್ತೆ ಮಾಡಿದೆ. ಖಚಿತ ಮಾಹಿತಿ ಮೇರೆಗೆ ಕೇರಳದ ವಯನಾಡ್ ಮೂಲದ ಶರಾಫುದ್ದೀನ್ ಬಂಧನವಾಗಿದ್ದು, ಆರೋಪಿ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಸಿಮ್ ಬಾಕ್ಸ್ ಇಟ್ಟಿದ್ದ. ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆ ಸಿಮ್ ಬಾಕ್ಸ್ ಇಟ್ಟು ಈ ಅಕ್ರಮವಾಗಿ ಅಂತರಾಷ್ಟ್ರೀಯ ಕರೆಗಳನ್ನು ಲೋಕಲ್ ಕಾಲ್‌ಗಳಾಗಿ ಕನ್ವರ್ಟ್ ಮಾಡುತ್ತಿದ್ದದ್ದು ತಿಳಿದುಬಂದಿದೆ.
ಸಿಸಿಬಿ ಮತ್ತು ಸೌತರ್ನ್ ಕಮಾಂಡೋ ಟೀಮ್ ಜಂಟಿ ಕಾರ್ಯಾಚರಣೆಯನ್ನು ನಡೆಸಿ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಇಟ್ಟಿದ್ದ 58 ಸಿಮ್ ಬಾಕ್ಸ್ ಮತ್ತು 2144 ಸಿಮ್ ಮತ್ತು ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಗಳು ಯಾವ ಅಂತರಾಷ್ಟ್ರೀಯ ಕರೆಗಳನ್ನು ಅತಿಹೆಚ್ಚಾಗಿ ಕನ್ವರ್ಟ್ ಮಾಡುತ್ತಿದ್ದರು ಎಂಬುದರ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಸಿಮ್ ಬಾಕ್ಸ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಬೇಕು. ಒಂದು ಆಪ್ಲಿಕೇಶನ್ ಮೂಲಕ ಮಿಡಲ್ ಈಸ್ಟ್ ದೇಶಗಳಲ್ಲಿ ಇರೋ ಪ್ರಜೆಗಳು ಇದನ್ನು ಬಳಸುತ್ತಾರೆ. ಇದರ ಮೂಲಕ ಕರೆ ಮಾಡಿದಾಗ ಸಿಮ್ ಬಾಕ್ಸ್ ಹಾಗು ಸಿಪ್ ಟ್ರಂಕ್ಸ್ ಮೂಲಕ ಇಂಟರ್ ನೆಟ್ ಬಳಸಿ ವಿದೇಶಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಬದಲಾವಣೆ ಮಾಡಿ ಸಂಭಾಷಣೆ ನಡೆಸಲಾಗುತ್ತದೆ. ಇಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿಗೆ ಯಾರು ಕರೆ ಮಾಡಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಒಂದು ವೇಳೆ ಕ್ರೈಮ್‌ಗಳಲ್ಲಿ ಈ ರೀತಿ ಮಾಡಿದಾಗ ಕಾಲ್ ಬಂದಿದ್ದ ನಂಬರ್ ಸಿಡಿಆರ್ ಪಡೆದು ಪರಿಶೀಲನೆ ನಡೆಸಿದರೇ ಪ್ರಾಕ್ಸಿ ಸರ್ವರ್‌ಗಳ ಮೂಲಕ ಎಲ್ಲಿಂದ ಕರೆ ಬಂದಿದೆ ಎನ್ನುವ ಲೊಕೇಶನ್ ಸಹ ಸಿಗುವುದಿಲ್ಲ. ಅಲ್ಲಿಗೆ ಎಲ್ಲಿಂದ ಕರೆ ಬಂದಿದೆ, ಯಾರು ಕರೆ ಮಾಡಿದ್ದಾರೆ ಎನ್ನುವುದು ತಿಳಿಯಲ್ಲ. ಆದರೂ ಮಿಲಿಟರಿ ತನಿಖಾ ಅಧಿಕಾರಿಗಳು ಕೆಲವು ತಂತ್ರಜ್ಞಾನವನ್ನು ಬಳಸಿ ಅಂತರಾಷ್ಟ್ರೀಯ ಕರೆಯ ಮಾಹಿತಿಯನ್ನು ಕಲೆಹಾಕಿ ಪಾಕಿಸ್ತಾನದ ಕರೆಯನ್ನು ಲೋಕಲ್ ಕಾಲ್ ಆಗಿ ಕನ್ವರ್ಟ್ ಮಾಡುತ್ತಿದ್ದವರನ್ನು ಬಲೆಗೆ ಕೆಡವಲು ಯಶಸ್ವಿಯಾಗಿದ್ದಾರೆ.